ಇವರು ಗಾಯಕರಾಗಿ ರಣರಂಗ ಚಿತ್ರದ “ಓ ಮೇಘವೇ “, ಆಸೆಗೊಬ್ಬ ಮೀಸೆಗೊಬ್ಬ ಚಿತ್ರದ “ತಾನನ ತಂದನ ಕುಣಿಸಿದೆ ಯವ್ವನ ” ,ಜನುಮದ ಜೋಡಿ ಚಿತ್ರದ “ಮಣಿ ಮಣಿ ಮಣಿ ಮಣಿ ಮಣಿಗೊಂದು ದಾರ “, ಚಂದ್ರೋದಯ ಚಿತ್ರದ “ರಾಜ ರಾಜ ಶಿವರಾಜ ” , ಗಲಾಟೆ ಅಳಿಯಂದ್ರು ಚಿತ್ರದ “ಕುಂದಾಪುರದ ಮೀನಮ್ಮ ” , ಇವರಿಗೆ ತುಂಬಾ ಇಷ್ಟವಾದ ಗೀತೆ ನ್ಯಾಯವೇ ದೇವರು ಚಿತ್ರದ “ಆಕಾಶವೆ ಬೀಳಲಿ ಮೇಲೆ ” ಇವರು ಎಲ್ಲೇ ಹೋಗಲಿ, ಯಾವುದೇ ಸಮಾರಂಭದಲ್ಲಿ ಈ ಹಾಡು ಹಾಡುತ್ತಾರೆ.
ಸುಧಾರಾಣಿ, ಆಶಾರಾಣಿ, ಮಾಲಾಶ್ರೀ, ಪ್ರೇಮ, ನಿವೇದಿತಾ ಜೈನ್, ಮೋಹಿನಿ, ಶಿಲ್ಪ, ವಿಜಯಲಕ್ಷ್ಮಿ , ನಗ್ಮ, ಚಾಂದಿನಿ, ಅನು ಪ್ರಭಾಕರ್, ಸಾಕ್ಷಿ, ರಂಭ, ಆತಿ೯ ಚಾಬ್ರಿಯ, ಜೆನಿಫರ್ ಕೊತ್ವಾಲ್, ರಾಗಿಣಿ ದ್ವಿವೇದಿ, ಪ್ರಿಯಾಮಣಿ, ಪಾವ೯ತಿ ಮೆನನ್, ರಮ್ಯ , ವೇದಿಕ, ಭಾವನ ಮೆನನ್, ರಚಿತ ರಾಮ್ ಮುಂತಾದ ನಟಿಯರು ಇವರ ಜೊತೆ ತೆರೆಯಲ್ಲಿ ಮಿಂಚಿದ್ದಾರೆ, ಬೆಸ್ಟ್ ಪೇರ್ “ಸುಧಾರಾಣಿ “.
ಎಷ್ಟೇ ಆದರೂ ತಂದೆ ಕರುನಾಡ ಕಲಾ ತಪಸ್ವಿ ಅವರಂತೆಯೇ ಮಗ, ನಟನೆಗೂ ಸೈ, ಡಾನ್ಸ್ ಗೂ ಸೈ, ಹಾಡಿಗೂ ಸೈ, ಫೈಟ್ಸ್ ಗೂ ಸೈ, ಭಾರತ ಚಿತ್ರರಂಗದಲ್ಲಿ ಕಣ್ಣಲ್ಲೇ ನಟನೆ ಮಾಡೋ ಟ್ಯಾಲೆಂಟ್ ಇರೋದು ಶಿವಣ್ಣರಿಗೆ ಅನ್ನೋದು ನನ್ನ ಅನಿಸಿಕೆ.
ವಷ೯ಕ್ಕೆ ಹೆಚ್ಚು ಚಿತ್ರ ನಟಿಸುತ್ತಿರುವ ಅಣ್ಣಾವ್ರ ನಂತರ ಮತ್ತೋವ೯ ನಟ ಅಂದರೆ ಇವರೆ, ಯಾವುದೇ ಚಿತ್ರಗಳು ಬಂದರೂ ಬಿಡದೆ ಅಭಿನಯಿಸುತ್ತಾರೆ, ಚಿತ್ರ ಗೆಲ್ಲಲಿ, ಸೋಲಲಿ ಅದರ ಬಗ್ಗೆ ಚಿಂತೆ ಮಾಡಲಾರರು ಇದಕ್ಕೆ ಕಾರಣ ಇಷ್ಟೆ “ನಮ್ಮನ್ನು ನಂಬಿ ಬಂದವರಿಗೆ ಯಾವತ್ತೂ ಒಳ್ಳೆಯದು ಮಾಡಬೇಕು, ಸಂಭಾವನೆ ಮುಖ್ಯವಲ್ಲ, ಚಿತ್ರರಂಗ ನಮ್ಮನ್ನು ನಂಬಿದೆ, ಕುಟುಂಬಗಳೂ ಕೂಡ ಚಿತ್ರರಂಗದಿಂದ ಜೀವನ ಸಾಗಿಸುತ್ತಾರೆ ಅವರಿಗೆ ತೊಂದರೆಯಾಗಬಾರದು “ನಿಮಾ೯ಪಕರು ಅನ್ನದಾತರು ” ಎಂದು ಹೇಳೋ ಅಪ್ಪಾಜಿ ಮಾತನ್ನು ಪಾಲಿಸಿಕೊಂಡು ಬಂದಿದ್ದಾರೆ ಹಾಗಾಗಿ ನಿಮಾ೯ಪಕರಿಗೆ ಇವರನ್ನು ಕಂಡರೆ ಬಹಳ ಪ್ರೀತಿ.
ಬಂಗಾರಪ್ಪ ರವರ ಮಗಳು “ಗೀತ” ರವರನ್ನು ಮದುವೆಯಾಗಿ ಇಬ್ಬರು ಹೆಣ್ಣು ಮಕ್ಕಳು “ನಿರುಪಮ ಮತ್ತು ನಿವೇದಿತಾ ” ನಿರುಪಮ ರವರು ವೃತ್ತಿಯಲ್ಲಿ ವೈದ್ಯರು ಮತ್ತು ಗೃಹಿಣಿ ನಿವೇದಿತ ರವರು ಸ್ವಂತ ಪ್ರೊಡಕ್ಷನ್ ಹೌಸ್ ನೋಡಿಕೊಳ್ಳುತ್ತಾರೆ, ಗೀತ ಮೇಡಂ ರವರು ಶಿವಣ್ಣ ರವರ ಏಳಿಗೆಗೆ ಸಾಥ್ ನೀಡುತ್ತಾ ಬಂದಿರುವುದು ಹೆಮ್ಮೆಯ ವಿಷಯ ಹೇಗೆ ಅಣ್ಣಾವೃ ಮತ್ತು ಅಮ್ಮಾವೃ ಆದಶ೯ ದಂಪತಿಗಳೋ ಹಾಗೆ ಇವರೂ ಕೂಡ, ನಿವೇದಿತ ರವರು “ಅಂಡಮಾನ್ ” ಚಿತ್ರದಲ್ಲಿ ಶಿವಣ್ಣ ರವರ ಮುದ್ದಿನ ಮಗಳಾಗಿ ನಟಿಸಿ ಜನಮನ್ನಣೆ ಗಳಿಸಿರೋದು ಶ್ಲಾಘನೀಯ.
ಶಿವಣ್ಣ ರವರೂ ಸಹ ಮಕ್ಕಳಿಗೆ ನೆಚ್ಚಿನ ತಂದೆಯಾಗಿ, ಗೀತ ರವರಿಗೆ ಪ್ರೀತಿಯ ಯಜಮಾನರಾಗಿ ಇದ್ದಾರೆ.
ಒಂದು ಮಾತು ಇವರಿಬ್ಬರ ದಾಂಪತ್ಯದ ಬಗ್ಗೆ ಹೇಳೋದಾದರೆ “ರಾಮನಿಗಾಗಿ ಸೀತ, ಶಿವುಗಾಗಿ ಗೀತ ” ಜೋಡಿ ಹಕ್ಕಿಗಳು ಸದಾ ಹೀಗೆ ಖುಷಿ ಖುಷಿಯಾಗಿ ಇರಲಿ .