ಲೇಡಿ ಜೇಮ್ಸ್ ಬಾಂಡ್ ಎಂದೇ ಪ್ರಸಿದ್ಧಿ ಪಡೆದಿದ್ದ ದಕ್ಷಿಣ ಭಾರತದ ಪಂಚ ಭಾಷಾ ನಟಿ ಜ್ಯೋತಿ ಲಕ್ಷ್ಮಿ

 ( ಮುಂದುವರೆದ ಭಾಗ )

೧೯೬೮ ರಲ್ಲಿ ತೆರೆ ಕಂಡ ಗಾಯಕ ಕಿಶೋರ್ ಕುಮಾರ್ ನಟಿಸಿದ ಪಾಯಲ್ ಕಿ ಝೇಂಕಾರ ಚಿತ್ರದಲ್ಲಿ ನಾಯಕಿಯ ಪಾತ್ರವನ್ನು ನಿರ್ವಹಿಸುವುದರ ಮೂಲಕ ಬಾಲಿವುಡ್ ಚಿತ್ರರಂಗವನ್ನು ಪ್ರವೇಶಿಸಿದರು. ಮೊದಲ ಚಿತ್ರದಲ್ಲಿ ಅದ್ಭುತ ನಾಟ್ಯ ಮತ್ತು ಭಾವಪೂರ್ಣ ನಟನೆಯ ಪಾತ್ರದಿಂದ ಬಾಲಿವುಡ್ ಚಿತ್ರರಂಗದಲ್ಲಿ ಸಂಚಲನೆಯನ್ನು ಉಂಟು ಮಾಡಿದ್ದರು. ಆದರೆ ಈ ಪಾತ್ರವು ಇಂದಿಗೂ ಸ್ಮರಣೀಯವಾಗಿದೆ.

ವಿಧಿಯ ಆಟ ಬಲ್ಲವರಾರು ಅಲ್ಲವೇ?

ದುರದೃಷ್ಟವಶಾತ್ ಕ್ರಮೇಣ ಇವರಿಗೆ ನಾಯಕಿಯ ಪಾತ್ರಗಳಲ್ಲಿ ನಟಿಸುವ ಅವಕಾಶವು ಕ್ಷೀಣಿಸುತ್ತ ಬಂದಿತು. ಆದರೆ ಇವರ ನಾಟ್ಯ ಕೌಶಲ್ಯಕ್ಕೆ ಮಾರು ಹೋದ ಕೆಲವು ನಿರ್ದೇಶಕರು ಇವರಿಗೆ ತಮ್ಮ ಚಿತ್ರಗಳಲ್ಲಿ ವಿಭಿನ್ನ ಶೈಲಿಯ ನೃತ್ಯಗಳಲ್ಲಿ ನಟಿಸುವ ಅವಕಾಶವನ್ನು ನೀಡಿದ್ದರು.  ೧೯೬೮ ಮತ್ತು ೧೯೬೯ ರಲ್ಲಿ ತೆರೆ  ಕಂಡ ಗಲಾಟ್ಟ ಕಲ್ಯಾಣಂ , ಅಡಿಪೆಣ್ ಎಂಬ ಎರಡು ತಮಿಳು ಚಿತ್ರಗಳಲ್ಲಿ ನಿರ್ವಹಿಸಿದ ಪಾತ್ರಗಳು ಇವರಿಗೆ ಉಳಿದ ಚಿತ್ರಗಳಲ್ಲಿ ನಿರ್ವಹಿಸಲು ಸಿಗಲಿಲ್ಲ. ಆದರೆ ೧೯೭೦ ರ ದಶಕದ ಆರಂಭದಲ್ಲಿ ಇವರು ಬಹು ಬೇಡಿಕೆಯ ನೃತ್ಯ ತಾರೆಯಾಗಿ ಪ್ರಸಿದ್ಧಿ ಪಡೆದಿದ್ದರು.

ಈ ಸಂದರ್ಭದಲ್ಲಿ ತೆರೆ ಕಂಡ ಪ್ರತಿ ತಮಿಳು ಚಿತ್ರದಲ್ಲಿ ಇವರ ವಿಭಿನ್ನ ಶೈಲಿಯ ನೃತ್ಯವು ತಪ್ಪದೇ ಇರುತ್ತಿತ್ತು. ತಮಗೆ ದೊರೆತ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ಇವರ ನೃತ್ಯ ದ ಪರಿಣಾಮ ಚಿತ್ರಗಳ ಯಶಸ್ಸು ನಿರಂತರವಾಗಿ ಮುಂದುವರೆದಿತ್ತು. ಇಲ್ಲಿಯವರೆಗೂ ಚಿತ್ರರಂಗದಲ್ಲಿ ನಾಯಕಿಯರು ಮೈ ತುಂಬ ಸೀರೆಯುಟ್ಟು ಮಡಿವಂತಿಕೆಯಲ್ಲಿ  ನೃತ್ಯ ಮಾಡುವ ಟ್ರೆಂಡ್ ಇತ್ತು. ಆದರೆ ಇದೇ ಸಮಯದಲ್ಲಿ ಇವರು ಹಾಡುಗಳ ತಾಳಕ್ಕೆ ತಕ್ಕಂತೆ ಬಣ್ಣ ಬಣ್ಣದ ತುಂಡು ಉಡುಗೆಯಲ್ಲಿ ಹೆಜ್ಜೆ ಹಾಕುತ್ತ ಚಿತ್ರ ರಸಿಕರ ಎದೆ ಬಡಿತವನ್ನು ಏರಿಸುವುದರ ಮೂಲಕ ಹಳೆಯ ಟ್ರೆಂಡ್ ಗೆ ಕಡಿವಾಣ ಹಾಕಿ ಹೊಸ ಟ್ರೆಂಡ್ ನ್ನು ಸೃಷ್ಟಿಸಿದ್ದರು. ಇವರು ಚಿತ್ರ ಪ್ರೇಮಿಗಳಿಗೆ ಮಾಡಿದ ಮೋಡಿ ಹೇಗಿತ್ತು ಗೊತ್ತಾ?

ತೆರೆ ಕಂಡ ಚಿತ್ರಗಳಲ್ಲಿ ಇವರ ನೃತ್ಯವಿದ್ದರೆ ಯಶಸ್ಸು ನಿಶ್ಚಿತವಾಗಿತ್ತಲ್ಲದೆ ಇವರ ನೃತ್ಯ ನೋಡಲು ಅಭಿಮಾನಿಗಳು, ಚಿತ್ರ ಪ್ರೇಮಿಗಳು ಚಿತ್ರ ಮಂದಿರಗಳಿಗೆ ಮುಗಿ ಬಿದ್ದು ಬರುತ್ತಿದ್ದರು.ಒಂದು ವೇಳೆ ಚಿತ್ರದಲ್ಲಿ ಇವರ ನೃತ್ಯ ಇರದಿದ್ದರೆ ವಿತರಕರು ಕೂಡ ಚಿತ್ರವನ್ನು ಖರೀದಿಸಲು ಹಿಂದೇಟು ಹಾಕುತ್ತಿದ್ದರು ಎನ್ನುವಷ್ಟರ ಮಟ್ಟಿಗೆ ಜನಪ್ರಿಯತೆಯನ್ನು ಪಡೆದಿದ್ದರು. ಶಾಸ್ತ್ರೀಯ, ಜಾನಪದ, ಪಾಶ್ಚಾತ್ಯ ಹೀಗೆಯೇ ಯಾವುದೇ ಶೈಲಿಯ ನೃತ್ಯವಾದರೂ ಅದಕ್ಕೆ ಜೀವ ತುಂಬುವ ಕರಗತ ಬಾಲ್ಯದಲ್ಲಿಯೇ ಬಂದಿತ್ತು. ಕೇವಲ ಶೃಂಗಾರ ರಸದ ನೃತ್ಯಗಳಿಗೆ ಸೀಮಿತರಾಗದೇ ಸಮಾಜಕ್ಕೆ ಸಂದೇಶ ಕೊಡುವ ಹಾಡುಗಳಿಗೆ ಕೂಡ ನೃತ್ಯವನ್ನು ಮಾಡಿದ್ದರು.

ಪೌರಾಣಿಕ ಚಿತ್ರಗಳ ನಿರ್ಮಾಪಕರು ತಮ್ಮ ಚಿತ್ರಗಳಲ್ಲಿ ಅಗತ್ಯವಿಲ್ಲದಿದ್ದರೂ  ನೃತ್ಯವನ್ನು ಸಂಯೋಜಿಸುತ್ತಿದರೆಂದರೆ ಇವರ ನೃತ್ಯ ಮಾಡಿದ್ದ ಮೋಡಿ ಎಂತಹುದು ಎಂದು ನೀವೇ ಊಹಿಸಿ.


   ೧೯೭೦ ರ ದಶಕದಲ್ಲಿ ಜನಪ್ರಿಯ ನೃತ್ಯ ತಾರೆಯಾಗಿದ್ದ ಇವರು ಅನೇಕ ಚಿತ್ರಗಳಲ್ಲಿ ಮಹಿಳಾ ಕೌಬಾಯ್ ಪಾತ್ರವನ್ನು ನಿರ್ವಹಿಸಿದ್ದರು. ೧೯೭೧ ರಲ್ಲಿ ತೆರೆ ಕಂಡ ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಎಂದು ಪ್ರಸಿದ್ಧಿ ಪಡೆದಿದ್ದ ಹಿರಿಯ ನಟ ಕೃಷ್ಣ ಜೊತೆ ಮೋಸಗಾಳಕು ಮೋಸಗಾಡು ಚಿತ್ರದಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸಿದ್ದ ನಂತರ  ಕೆಲವು ಮಹಿಳಾ ಕೌಬಾಯ್ ಚಿತ್ರಗಳಲ್ಲಿ ಮಾಡಿದ ರೋಮಾಂಚನಕಾರಿ ಪಾತ್ರಗಳನ್ನು ಅಭಿಮಾನಿಗಳಾಗಲಿ, ಚಿತ್ರ ಪ್ರೇಮಿಗಳಾಗಲಿ ಇಂದಿಗೂ ಸಹ ಮರೆತಿಲ್ಲ. ಅದರಲ್ಲೂ ೧೯೭೨ ರಲ್ಲಿ ತೆರೆ ಕಂಡ ಇವರ ನಟನೆಯಲ್ಲಿ ಮೂಡಿ ಬಂದ ಪಿಲ್ಲಾ ಪಿಡುಗು ಚಿತ್ರವು ತೆರೆ ಕಂಡ ನಂತರ ಗಳಿಕೆಯಲ್ಲಿ, ಯಶಸ್ಸಿನಲ್ಲಾಗಲಿ ಮಾಡಿದ ಮೋಡಿಯನ್ನು ವರ್ಣಿಸಲು ಸಾಧ್ಯವೇ?

ಇದೇ ಚಿತ್ರವು ಪಿಸ್ತೂಲ್ ವಾಲಿ ಎಂಬ ಹೆಸರಿನೊಂದಿಗೆ ಹಿಂದಿ ಡಬ್ ಆದ ಈ ಚಿತ್ರ ಹಿಂದಿ ಪ್ರೇಕ್ಷಕರಿಗೂ ಮೋಡಿ ಮಾಡಿತ್ತು. ಇದರಿಂದ ಪ್ರೇರಿತರಾಗಿ ಖ್ಯಾತ ನಿರ್ದೇಶಕ ಕೆ.ಎಸ್.ಆರ್ ದಾಸ್ ಇವರನ್ನು ನಾಯಕಿಯಾಗಿ ಆಯ್ಕೆ ಮಾಡಿಕೊಂಡು ೧೯೭೩ ರಲ್ಲಿ ರಾಜಾ ಔರ್ ಜಾನಿ ಎಂಬ ಹಿಂದಿ ಚಿತ್ರವನ್ನು ನಿರ್ದೇಶಿಸಿದ್ದರು. ಈ ಚಿತ್ರವು ಸಾಹಸ ಪ್ರಧಾನ ಚಿತ್ರವಾಗಿದ್ದರಿಂದ ಸಾಹಸ ಪ್ರೇಮಿಗಳನ್ನು ಚಿತ್ರ ಮಂದಿರಗಳಿಗೆ ಕರೆ ತರುವಂತೆ ಮಾಡಿತ್ತು.

ಇದೇ ಚಿತ್ರವು ಪಿಸ್ತೂಲ್ ವಾಲಿ ಎಂಬ ಹೆಸರಿನೊಂದಿಗೆ ಹಿಂದಿ ಡಬ್ ಆದ ಈ ಚಿತ್ರ ಹಿಂದಿ ಪ್ರೇಕ್ಷಕರಿಗೂ ಮೋಡಿ ಮಾಡಿತ್ತು. ಇದರಿಂದ ಪ್ರೇರಿತರಾಗಿ ಖ್ಯಾತ ನಿರ್ದೇಶಕ ಕೆ.ಎಸ್.ಆರ್ ದಾಸ್ ಇವರನ್ನು ನಾಯಕಿಯಾಗಿ ಆಯ್ಕೆ ಮಾಡಿಕೊಂಡು ೧೯೭೩ ರಲ್ಲಿ ರಾಜಾ ಔರ್ ಜಾನಿ ಎಂಬ ಹಿಂದಿ ಚಿತ್ರವನ್ನು ನಿರ್ದೇಶಿಸಿದ್ದರು. ಈ ಚಿತ್ರವು ಸಾಹಸ ಪ್ರಧಾನ ಚಿತ್ರವಾಗಿದ್ದರಿಂದ ಸಾಹಸ ಪ್ರೇಮಿಗಳನ್ನು ಚಿತ್ರ ಮಂದಿರಗಳಿಗೆ ಕರೆ ತರುವಂತೆ ಮಾಡಿತ್ತು.

( ಮುಂದುವರೆಯುವುದು )

ಸಂದೀಪ ಜೋಶಿ

ಸಂದೀಪ ಜೋಶಿ

ಸಂದೀಪ್ ಜೋಶಿ - ಇವರು ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾಗಿದ್ದು ಪ್ರಸ್ತುತ ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದಾರೆ. ಬಿ.ಎ.ಮತ್ತು ಡಿಪ್ಲೊಮಾ ಇನ್ ಹಾರ್ಟಿಕಲ್ಚರ್, ಸಿ.ಟಿ.ಟಿ.ಸಿ ತರಬೇತಿ, ರೇಕಿ ಚಿಕಿತ್ಸೆ ತರಬೇತಿಯನ್ನು ಪಡೆದಿದ್ದು 13 ವರ್ಷಗಳ ಕಾಲ ರಾಯಚೂರು, ಧಾರವಾಡ ಕೃಷಿ ವಿಶ್ವವಿದ್ಯಾಲಯ ಮತ್ತು ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದಲ್ಲಿ ಕ್ಷೇತ್ರ ಸಹಾಯಕ, ಗಣಕಯಂತ್ರ ನಿರ್ವಾಹಕ ಕೆಲಸವನ್ನು ನಿರ್ವಹಿಸಿದ್ದಾರೆ. ಇವರು ಲೇಖಕರಷ್ಟೇ ಅಲ್ಲ.‌ನಟರು ಕೂಡ. ವೃತ್ತಿಯ ಜೊತೆಗೆ ರೇಕಿ ಚಿಕಿತ್ಸೆ ಮತ್ತು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಸಂದೀಪ್‌ ಜೋಶಿ ಚಿತ್ರೋದ್ಯಮ.ಕಾಂ ಬರಹಗಾರರ ತಂಡದ ಬಹು ಮುಖ್ಯ ಸದಸ್ಯ. ಸಂದೀಪ್ ಜೋಶಿಯವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply