ತಮಿಳ್ನಾಡಿನ ಮುಖ್ಯಮಂತ್ರಿ ಹಾಗೂ ಮೇರು ನಟರು ಆದ” ಎಂ.ಜಿ.ಆರ್”( MGR) 1972ನಲ್ಲಿ ಬಿಡುಗಡೆಯಾದ ನಾಗರಹಾವು ಚಿತ್ರವನ್ನು ವೀಕ್ಷಿಸಿ, ವಿಷ್ಣುವರ್ಧನ್ ಮತ್ತು ಪುಟ್ಟಣ್ಣ ಕಣಗಾಲರನ್ನು ಪ್ರಶಂಸಿಸಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು.ಸ್ವಲ್ಪ ದಿನಗಳು ಕಳೆದಂತೆ ವಿಷ್ಣುವರ್ಧನ್ ರನ್ನ ಎಂಜಿಆರ್ ಬೇಟಿ ಮಾಡಿದಾಗ ಉಡುಗೊರೆಯಾಗಿ ವಿಷ್ಣುವರ್ಧನ್ ರಿಗೇ ಒಂದು ಕೈ ಗಡಿಯಾರ (wrist watch) ನೀಡಿದರು .ಇದು ಲಕ್ಕಿ ವಾಚ್ ಇದ್ನ ನಿನ್ನ ಹತ್ರ ಯಾವಾಗ್ಲೂ ಇಟ್ಕೋ ನಿಂಗೆ ಒಳ್ಳೆದ್ ಆಗ್ಲಿ – ಆಗುತ್ತೆ ಅಂತ ಹೇಳಿದ್ರು.ದಾದಾಗೆ ಆ ವಾಚ್ ತುಂಬಾ ಸೆಂಟಿಮೆಂಟಲ್ ಆಗಿತ್ತು.
ಎಂ.ಜಿ.ಆರ್ ತಮ್ಮ ಆಪ್ತ ವಲಯ ಮತ್ತು ಇಷ್ಟಪಡುವ ವ್ಯಕ್ತಿಗಳಿಗೆ “ವಾಚ”ನ ಉಡುಗೊರೆಯಾಗಿ ನೀಡುವ ಅಭ್ಯಾಸವಿತ್ತು.
ಶಿವರಾಜಕುಮಾರ್ ರ ಮೊದಲ ಚಿತ್ರ”ಆನಂದ್”ನ್ನ ಸಂಸಾರ ಸಮೇತರಾಗಿ ವಿಷ್ಣುವರ್ಧನ್ ವೀಕ್ಷಿಸಿದರು.ಶಿವಣ್ಣನಿಗೆ ಬೆನ್ನು ತಟ್ಟಿ ,ಆಶೀರ್ವದಿಸಿದರು ವಿಷ್ಣು. ಅದರ ಜೊತೆಗೆ ಎಂಜಿಆರ್ ನಿಂದ ಬಂದಿದ್ದ ವಿಶೇಷ ಬಳುವಳಿಯನ್ನು ಕೂಡ ಕೊಟ್ಟರು.ಶಿವಣ್ಣನ ಕೈ ಸೇರಿತು ಆ ಗಡಿಯಾರ.
ಸಮಯ – ಕಾಲ ಸೂಚಕವಾದ ಆ ಗಡಿಯಾರ ಇಬ್ಬರ ನಡುವಿನ ಬಾಂಧವ್ಯದ ಗುರುತಾಗಿ ಉಳಿಯಿತು
ವಿಷ್ಣುವರ್ಧನ್ ಮತ್ತು ಶಿವಣ್ಣ ಇಬ್ಬರು ಜೊತೆಯಾಗಿ ಸಿನಿಮಾ ಒಂದರಲ್ಲಿ ನಟಿಸಬೇಕು ಎಂಬುದು ಅನೇಕರ ಆಸೆಯಾಗಿತ್ತು.ಪತ್ರಕರ್ತರು ಇವರಿಬ್ಬರ ಮುಂದೆ ಈ ಪ್ರಶ್ನೆ ಇಟ್ಟಾಗ, ಇಬ್ಬರ ಉತ್ತರ ಒಂದೇ ಆಗಿತ್ತು “ಕಾಲವೇ ಅದಕ್ಕೆ ಉತ್ತರ ನೀಡಲಿದೆ”!!
ಕಿಚ್ಚ ಸುದೀಪ್ ನಿರ್ಮಿಸಿ ನಿರ್ದೇಶಿಸಿದ “#73 ಶಾಂತಿನಿವಾಸ” ಚಿತ್ರದಲ್ಲಿ ಶಿವಣ್ಣ ಮತ್ತು ವಿಷ್ಣುವರ್ಧನ್ ಇಬ್ಬರು ನಟಿಸಿದ್ದಾರೆ.ಸಿನಿಮಾದ ಬೇರೆ ಹಂತಗಳಲ್ಲಿ ಕಾಣಿಸುವರೆ ಹೊರತು ಒಂದೇ ಫ್ರೇಮ್ ನಲ್ಲಿ ಇಬ್ಬರು ಪರದೆಯಮೇಲೆ ಕಾಣೋಲ್ಲ.