ಫೆಬ್ರವರಿ 22ಕ್ಕೆ ವಿಕ್ರಾಂತ ರೋಣ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ!
ಕಿಚ್ಚಾ ಸುದೀಪ ಅಭಿನಯದ ಅನೂಪ್ ಭಂಡಾರಿ ನಿರ್ದೇಶನದ “ವಿಕ್ರಾಂತ ರೋಣ” ಸಿನಿಮಾ ಆಕ್ಷನ್, ಡ್ರಾಮ ಮತ್ತು ಸಸ್ಪೆನ್ಸ್ಗಳಿಂದ ತುಂಬಿದ್ದು ಮನೋರಂಜನೆಯ ಆಯಾಮವನ್ನ ದೊಡದ್ದಾಗಿಸಲಿದೆ ಜೊತೆಗೆ 3D ಸ್ವರೂಪದಲ್ಲಿ ಕಾಣಲಿದೆ. ವಿಕ್ರಾಂತ ರೋಣಾ ಸಿನಿಮಾದಲ್ಲಿ ಪೊಲೀಸ್ ಆಫೀಸರಾಗಿ ಪ್ರತ್ಯಕ್ಷವಾಗಲಿರೋ “ಅಭಿನಯ ಚಕ್ರವರ್ತಿ ಸುದೀಪ” ಅವರ ಪಾತ್ರ, ನಟನಾ ವೈಖರಿ ಮತ್ತು ಕಥಾವಸ್ತು ಬಹಳ ವಿಭಿನ್ನವಾಗಿದ್ದು ವಿನೂತನ ವಿಸ್ಮಯ ಪ್ರಪಂಚಕ್ಕೆ ಪ್ರೇಕ್ಷಕನನ್ನ ಕರೆದುಕೊಂಡು ಹೋಗಲಿದೆ. ಪ್ರಪಂಚದ ಅತಿ ಎತ್ತರದ ಕಟ್ಟಡವಾದ ಬುರ್ಜ್ ಕಲೀಫಾದ ಮೇಲೆ ಸಿನಿಮಾದ ಮೊದಲ ಪೋಸ್ಟರ್ ಬಿಡುಗಡೆಯಾಗಿ ಹೊಸ ದಾಖಲೆ ಮಾಡಿತ್ತು ಇದೀಗೆ 8 ಭಾಷೆಗಳಲ್ಲಿ ತಯಾರಾಗಿರೋ ಮೊದಲ ಭಾರತೀಯ ಚಿತ್ರ ಅನ್ನೊ ಹೆಗ್ಗಳಿಕೆಯು ವಿಕ್ರಾಂತ ರೋಣ ಪಾಲಾಗಿದೆ. ಸಿನಿಮಾದ ಬಹುಭಾಗ ಹೈದ್ರಾಬಾದಿನ ಅನ್ನಪೂರ್ಣ ಸ್ಟುಡಿಯೋದಲ್ಲಿ ಚಿತ್ರೀಕರಣಗೊಂಡಿದದೆ, ಸಿನಿಮಾದ ಕೆಲುವು ದೃಶ್ಯಾವಳಿಗಳನ್ನ ತೆಲುಗಿನ ಹಿರಿಯ ಸ್ಟಾರ್ ನಟರಾದ ನಾಗಾರ್ಜುನ ಕಂಡವರೆ ಮೆಚ್ಚುಗೆಯನ್ನ ವ್ಯಕ್ತಪಡಿಸಿ, ನಿರ್ದೇಶಕರ ಬೆನ್ನು ತಟ್ಟಿದ್ದಾರೆ. ಕನ್ನಡ ಸಿನಿಮಾಗಳು ಅಂದ್ರೆ ಸದಭಿದುಚಿಯ ಬೀಡು ಅನ್ನೋ ಕಾಲ ಪರ್ವ ಪ್ರಾರಂಭವಾಗಿದೆ.