ಜನ ನಾಡಹಬ್ಬವಾದ ದಸರಾವನ್ನು ವಿಜೃಂಭಣೆಯಿಂದ ಆಚರಿಸುವುದರ ಜೊತೆಗೆ ಮನೋರಂಜನೆಗಾಗಿ ಸಿನಿಮಾಮಂದಿರದತ್ತ ಪಾದ ಬೆಳಸುವುದು ವಾಡಿಕೆಯಾಗಿದೆ ಈ ಬಾರಿ ಅದಕ್ಕೆ ಸಲಗ ಸಿನಿಮಾ ಸಾಕ್ಷಿಯಾಗಿದೆ.
ದಸರಾ ಹಬ್ಬದ ಪ್ರಯುಕ್ತ ಪ್ರತಿವರ್ಷ 2 ಕನ್ನಡ ಸಿನಿಮಾ ಬಿಡುಗಡೆಯಾಗುತ್ತಿತ್ತು, ಈ ವರ್ಷವೂ ಸಹ ಒಂದೇ ದಿನ 2 ದೊಡ್ಡ ಸಿನಿಮಾ ತೆರೆ ಕಾಣಾಬೇಕುತ್ತು, ಕಿಚ್ಚಾ ಸುದೀಪಾ ಅಭಿನಯದ ಬಹು ನಿರೀಕ್ಷಿತ ಕೋಟಿಗೊಬ್ಬ-3 ಮತ್ತು ಸಲಗ.. ಕೆಲವು ಕಾರಣದಿಂದಾಗಿ ಕೋಟಿಗೊಬ್ಬ-3 ಸಿನಿಮಾ ಇಂದು ಬಿಡುಗಡೆಯಾಗದೆ ನಾಳೆಯ ದಿನ ರಾಜದಾದ್ಯಂತ ತೆರೆಕಾಣಲಿದೆ ಆದ ಕಾರಣ ಪ್ರೇಕ್ಷಕನ ಗಮನವಷ್ಟು ಸಲಗದತ್ತ ಸಾಗಿದ್ದು ಮೊದಲ ದಿನವೇ ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಸದ್ದು ಮಾಡಿದೆ “ಎಲ್ಲೆಡೆ ಹೌಸ್ಫುಲ್” ಬೋರ್ಡ್ ಕಾಣಬಹುದು. ಈ ಹಿಂದೆ ಬಿಡುಗಡೆಯಾದ ದುನಿಯಾ ವಿಜಿ ಅವರ ಎಲ್ಲಾ ಸಿನಿಮಾಗಳ ಧಾಖಲೆಗಳನ್ನ ಸಲಗ ಚಿತ್ರವು ಏಕಕಾಲದಲ್ಲಿ ಹೊಡೆದುರುಳಿಸಿದೆ. ಬೆಂಗಳೂರಷ್ಟೇ ಆಲ್ಲದೆ ರಾಜ್ಯದೆಲ್ಲಡೆ ಅತ್ಯದ್ಭುತ ಒಪನಿಂಗ್ ಪಡೆದು ಮೊದಲನೆ ದಿನದ ಕಲೆಕ್ಷನ್ನಿನ ಮೊತ್ತ 10 ಕೋಟಿ ದಾಟಿದ್ದು ಚಿತ್ರ ತಂಡಕ್ಕೆ ಹರ್ಷವ ಸಾರಿದೆ…. ಆನೆ ನಡೆದಿದ್ದೆ ದಾರಿ ಎನ್ನೋ ಮಾತೊಂದಕ್ಕೆ ನಿದರ್ಶನವಾಗಿದೆ ಈ ಸಲಗ, ಇಂತಹ ಅಭೂತಪೂರ್ವ ಯಶಸ್ಸಿಗೆ ಕಾರಣಕರ್ತರಾದ ಪ್ರೇಕ್ಷಕ ಪ್ರಭುಗಳಿಗೆ ದುನಿಯಾ ವಿಜಯ್ ಕೃತಜ್ನತೆ ಸಲ್ಲಿಸಿದ್ದಾರೆ.