ವಿಶ್ವದಲ್ಲೇ #1 ಸೀರಿಯಲ್ ಆಯ್ತು ರಾಮಾಯಣ ಮಹಾಭಾರತ..

ಕಿರುತೆರೆಯ ಎಂಟರ್ಟೈನ್ಮೆಂಟ್ನ ಕೇಂದ್ರ ಬಿಂದು ಆಗಿರುವ ಧಾರಾವಾಹಿಗಳ ಹೊಸ ಕಂತುಗಳ ಚಿತ್ರೀಕರಣ ನಡೆಯದ ಕಾರಣ, ಎಲ್ಲಾ ಖಾಸಗಿ ವಾಹಿನಿಗಳಲ್ಲೂ ಹಳೆಯ ಎಪಿಸೋಡಗಳ ಮರುಪ್ರಸಾರವಾಗುತ್ತಿದೆ.

30 ವರ್ಷಗಳ ಹಿಂದೆ DD1ರಲ್ಲಿ ಪ್ರಸಾರವಾಗುತ್ತಿದ್ದ, ಇಡೀ ಭಾರತೀಯರ ಅಚ್ಚು ಮೆಚ್ಚಿನ ಧಾರಾವಾಹಿಗಳಾದ “ರಾಮಯಣಾ” ಮತ್ತು “ಮಹಾಭಾರತ” ಇದೀಗ(1 ತಿಂಗಳಿಂದ) ಮರುಪ್ರಸಾರವಾಗಿ ದ್ದು ಮತ್ತೇ ಅದೇ ಮಾನ್ಯತೆ, ಕಿಂಚಿತ್ತೂ ಕಡಿಮೆಯಾದ ಪ್ರೀತಿ ಅಭಿಮಾನ ದೊರಕಿದೆ. ಇಂದಿನ ಯುವ ಪೀಳಿಗೆಗೆ ಇದೆ ಇವಾಗ ಫೆವರೇಟ್ tv ಷೋ ಆಗಿದೆ.ಜನರ ಒತ್ತಾಯದೆ ಮೇರೆಗೆ, ಕೇಂದ್ರದ ವಾರ್ತಾ ಮತ್ತು ಪ್ರಸಾರ ಸಚಿವರಾದ “ಪ್ರಕಾಶ್ ಜಾವ್ದೇಕರ್” ಈ ದಾರವಾಹಿಗಳನ್ನ ಮತ್ತೆ ವೀಕ್ಷಿಸುವ ಅವಕಾಶ ಕಲ್ಪಿಸಿಕೊಟ್ಟರು. ಶ್ರೀ ರಾಮ ಮತ್ತು ಶ್ರೀ ಕೃಷ್ಣನಿಗೆ ಇಡೀ ದೇಶ ಮತ್ತೆ ಎರಡು ಕೈ ಜೋಡಿಸಿ ನಮಸ್ಕರಿಸಿದೆ..

ಆಡಂಬರದ ಗ್ರಾಫಿಕ್ಸ್ ಇಲ್ಲ ಡಂಬಾಚರದ ಡೈಲಾಗ್ಸ್ ಇಲ್ಲವೇ ಇಲ್ಲ.ಸಹಜತೆ,ನೈಜತೆಯ ಪ್ರತಿಬಿಂಬವಾಗಿರುವುದಕ್ಕೆ ಇಂದುಗೂ ಎಂದಿಗೂ ಇದು ಎವೆರ್ಗ್ರೀನ್ .. ಇಡೀ ದೇಶಕ್ಕೆ ಸರಳವಾಗಿ ರಾಮಾಯಣ ಮಾತ್ತು ಮಹಾಭಾರತ ಅರ್ಥೈಸಿದ ನಿರ್ದೇಶಕರಿಗೆ, ಬರಹಗಾರರಿಗೆ, ಪಾತ್ರಕ್ಕೆ ಜೀವ ತುಂಬಿದ ಎಲ್ಲಾ ಕಲಾವಿದರಿಗೆ ನಮ್ಮ ಅಭಿಮಾನದ ನಮನಗಳು..

ಹೇಳಯ ಸಿಹಿ ನೆನಪುಗಳನ್ನು ಬಳುವಳಿಯಾಗಿ ಕೊಡುವುದರ ಜೊತೆಗೆ ಟಿ.ವಿ ಮಾಧ್ಯಮದಲ್ಲಿ ಹೊಸ ಧಾಖಲೆಯನ್ನು ಬರೆದಿದೆ.ಭಾರತವಷ್ಟೇ ಅಲ್ಲದೆ  ಈಡಿ ವಿಶ್ವದಾದ್ಯಂತ ಅತಿ ಹೆಚ್ಚು ಜನ ದಿನವೂ ಖಡ್ಡಾಯವಾಗಿ ನೋಡುವ ದಾರವಾಹಿ ಇವಾಗಿವೆ,ಆದ ಕಾರಣ ಎಲ್ಲಾ ಖಾಸಗಿ ಚಾನ್ನೆಲ್ಗಳ T.R.P ಯನ್ನ DD1 ಮೀರಿಸಿ ಭಾರತದ #1 ಚಾನೆಲ್ ಆಗಿದೆ.ಜನರ ಅಭಿಮಾನ ದಿನೇ ದಿನೇ ಹೆಚ್ಚುತ್ತಿದೆ.

ರಮಾನಂದ್ ಸಾಗರ ನಿರ್ದೇಶನ “ರಾಮಾಯಣ” ಧಾರಾವಾಹಿ ಇದೇ DD 1 ರಲ್ಲಿ ನಿತ್ಯ 2 ಸಲ ಪ್ರಸಾರವಾಗಲಿದೆ ಬೆಳಿಗ್ಗೆ 10 ಕ್ಕೆ, ರಾತ್ರಿ 9ಕ್ಕೆ. 

B.R. ಚೋಪ್ರಾ ನಿರ್ಮಿಸಿ ಅವರ ಪುತ್ರ “ರವಿ ಚೋಪ್ರಾ” ನಿರ್ದೇಶನದ ಮಹಾಭಾರತ ಸೀರಿಯಲ್ ದಿನ DD 1 ವಾಹಿನಿಯಲ್ಲಿ ದಿನಕ್ಕೆ 2 ಬಾರಿ ಪ್ರಸಾರವಾಗಲಿದೆ ಮಧ್ಯಾಹ್ನ 12ಕ್ಕೆ ಮತ್ತೆ ಸಂಜೆ 7ಕ್ಕೆ.

P. Ghanashyam

P. Ghanashyam

ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ. ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply