ಹಿರಿಯ ನಟಿ ಕಾಂಚನ ರವರ ಜೊತೆ ಡ್ಯುಯೆಟ್ ಸಾಂಗ್ ಚೆಲುವೆಯ ನೋಟ ಚೆನ್ನ ಒಲವಿನ ಮಾತು ಚೆನ್ನ, ಜಯಮಾಲ ಜೊತೆ ಏನೇನೋ ಆಸೆ ನಿ ತಂದಾ ಭಾಷೆ.
ಮಾದಕ ನಟಿ ಪದ್ಮಪ್ರಿಯ ರನ್ನು ಚುಡಾಯಿಸುವ “ಲವ್ ಮಿ ಔರ್ ಹೇಟ್ ಮಿ
ಕಿಸ್ ಮಿ ಔರ್ ಕಿಲ್ ಮಿ .
ಪದ್ಮಪ್ರಿಯ ಜೊತೆ ಪ್ರಥಮ ರಾತ್ರಿ ‘ಚಿನ್ನ ಬಾಳಲ್ಲಿ ಈ ರಾತ್ರಿ ಎಂದೆಂದೂ ಬರದೂ
ಕನಸೆಲ್ಲ ನನಸಾಗಿದೆ.ಅಣ್ಣ ತಮ್ಮ ತಾಯಿಯನ್ನು ಭೇಟಿಮಾಡೋ ನೆನಪಿನ ಹಾಡು
“ನಾ ಬೆಂಕಿಯಂತೆ ನಾ ಗಾಳಿಯಂತೆ
ಈ ಜೋಡಿ ಮುಂದೆ ವೈರಿ ಉಳಿಯುವನೆ
ನಾ ಬೆಂಕಿಯಂತೆ ನಾ ಗಾಳಿಯಂತೆ “
ಪ್ರತಿಯೊಂದು ಹಾಡುಗಳು ಕೇಳ್ತಿದ್ರೆ ಸಮಯ ಹೋಗುವುದೇ ಗೊತ್ತಾಗದು, ಇಂದು ಮತ್ತೊಂದು ಅದ್ಭುತ ಚಿತ್ರ ಬಿಡುಗಡೆಯಾಗಿ ಭರ್ಜರಿ ಪ್ರದಶ೯ನ ಕಂಡು ಗಲ್ಲಾಪೆಟ್ಟಿಗೆ ಧೂಳೀಪಟಮಾಡಿದ ಸುದಿನ, ಕಲಾ ಚಕ್ರವರ್ತಿ , ರಸಿಕರ ರಾಜ, ಡಾ. ರಾಜ್ ಕುಮಾರ್ ರವರು ತ್ರಿಪಾತ್ರದಲ್ಲಿ ವಿಭಿನ್ನ ವಿಶೇಷತೆಗಳಿಂದ ಅಭಿಮಾನಿಗಳಿಗೆ ನಟನೆಯ ಹಬ್ಬವನ್ನು ನೀಡಿದ ಸತತ ಒಂದು ವಷ೯ ಪ್ರದಶ೯ನ ಕಂಡ ಹೆಮ್ಮೆಯ ಪಾವ೯ತಮ್ಮ ರಾಜ್ ಕುಮಾರ್ ರವರ ನಿಮಾ೯ಣದ ಅಧ್ಭುತ ಕಥೆಯನ್ನಾಧರಿಸಿದ ‘ಶಂಕರ್ ಗುರು ” ಚಿತ್ರ ಬಿಡುಗಡೆಯಾಗಿ ಇಂದಿಗೆ 43 ವಷ೯ಗಳು.
ಈ ಚಿತ್ರದಲ್ಲಿ ತಾರಬಳಗವೇ ತುಂಬಿದೆ ಹಿರಿಯ ನಟಿ ಕಾಂಚನ, ಪದ್ಮಪ್ರಿಯ, ಬಾಲಕೃಷ್ಣ, ಸಂಪತ್ ಕುಮಾರ್, ತೂಗುದೀಪ ಶ್ರೀನಿವಾಸ್,ವಜ್ರಮುನಿ, ಜಯಮಾಲ, ಟೈಗರ್ ಪ್ರಭಾಕರ್ ಇನ್ನೂ ಮುಂತಾದವರು.
ಈ ಚಿತ್ರದ ವಿಶೇಷತೆ ಕಾಶ್ಮೀರದ ಹೊರಾಂಗಣದಲ್ಲಿ ಚಿತ್ರೀಕರಣ, ಅಣ್ಣ ತಮ್ಮಂದಿರ ವಿಶೇಷ ದೃಶ್ಯಗಳು, ಚಿ. ಉದಯ್ ಶಂಕರ್ ರವರ ಮನಮೋಹಕ ಸಾಹಿತ್ಯ, ಪದ್ಮಪ್ರಿಯ ಜೊತೆಗಿನ ಹಾಸ್ಯ ದೃಶ್ಯಗಳು ಇನ್ನೂ ಹಲವು…
ಈ ಚಿತ್ರ ಅಧ್ಭುತ ದಾಖಲೆ ಬರೆದು ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ ರಿಮೇಕ್ ಆದರೂ ನಮ್ಮ ಅಣ್ಣಾವ್ರ ಹಾಗೆ ನಟನೆಯಲ್ಲಿ ಮತ್ತು ಗಳಿಕೆಯಲ್ಲಿ ಯಶಸ್ಸು ಕಾಣದಿರುವುದು ನಮ್ಮ ಅಣ್ಣಾವ್ರ ನಟನಾಭಿರುಚಿ ಮತ್ತು ನಟನಾ ಪ್ರೌಢಿಮೆ ಎಂಥದು ಎಂಬುದು ಇಲ್ಲಿ ತಿಳಿಯುವುದು, ಈ ರೀತಿ ಚಿತ್ರಗಳು ಚಲನಚಿತ್ರ ಇತಿಹಾಸದಲ್ಲಿ ಎಂದೂ ಮರೆಯಲಾಗದು 🙏
ಶಂಕರ್ ಗುರು ಚಿತ್ರ 43 ವಷ೯ ಸಂಭ್ರಮ 🦚🏍🦋
ಚಿತ್ರದ ಕೆಲವು ಮಾಹಿತಿಗಳು :
👑ನಿದೇ೯ಶಕರು – ವಿ ಸೋಮಶೇಖರ್.
🦚ಸಂಗೀತ ನಿರ್ದೇಶಕರು – ಉಪೇಂದ್ರ ಕುಮಾರ್.
🌹ನಿಮಾ೯ಪಕರು – ಪಾವ೯ತಮ್ಮ ರಾಜ್ ಕುಮಾರ್.
🎄ನಿಮಾ೯ಣ ಸಂಸ್ಥೆ – ದಾಕ್ಷಾಯಿಣಿ ಕಂಬೈನ್ಸ್.
🏍ಚಿತ್ರ ಕಥೆ – ಎಂ ಡಿ ಸುಂದರ್.
🦋ಛಾಯಾಗ್ರಹಣ – ಆರ್ ಮಧುಸೂಧನ್.
👒ಸಂಕಲನ -ಪಿ ಭಕ್ತವತ್ಸಲಂ.
ತಮಿಳಿನಲ್ಲಿ ರೀಮೇಕ್ ಶಿವಾಜಿ ಗಣೇಶನ್ ನಟನೆಯ ತ್ರಿಶೂಲಂ, ತೆಲುಗಿನಲ್ಲಿ ಕುಮಾರ ರಾಜ ನಟ ಕೃಷ್ಣ, ಹಿಂದಿಯಲ್ಲಿ ಮಹಾನ್ ಚಿತ್ರ ಅಮಿತಾಬ್ ಬಚ್ಚನ್ ನಟನೆ.
ಭಕ್ತವತ್ಸಲಂ ರವರ ಅತ್ಯುತ್ತಮ ಸಂಕಲನಕಾರಕ್ಕೆ ಕನಾ೯ಟಕ ಸಕಾ೯ರ ಪ್ರಶಸ್ತಿ ಲಭಿಸಿದೆ. ಪ್ರಭಾಕರ್ ರವರಿಗೆ ಈ ಚಿತ್ರದಿಂದ ಟೈಗರ್ ಅನ್ನೋ ಹೆಸರು ಬಂದಿದೆ.