ಗುರು ಶಿಷ್ಯರು ಅಂದ ತಕ್ಷಣ ನಮಗೆ ಮೊದಲು ನೆನಪಾಗುವುದೇ ಮೊದಲು ದ್ವಾರಕೀಶ್. ಬಹಳ ವರ್ಷಗಳ ನಂತರ ಇದೆ ಹೆಸರಿನಲ್ಲಿ ಶರಣ್ ಅಭಿನಯದ ಗುರು ಶಿಷ್ಯರು ಚಿತ್ರ ಸ್ಯಾಂಡಲ್ ವುಡ್ ನಲ್ಲಿ ತೀವ್ರ ನಿರೀಕ್ಷೆ ಹುಟ್ಟಿಸಿದ್ದು,ಪ್ರಪ್ರಥಮ ಬಾರಿಗೆ ಖೋ-ಖೋ ಆಟವನ್ನು ಆಧರಿಸಿದ ಚಿತ್ರವನ್ನು ನೋ ಡಲು ಅಭಿಮಾನಿಗಳು ಕುತೂಹಲದಿಂದ ಕಾಯುತಿದ್ದಾರೆ . ಈಗಾಗಲೇ ತೆರೆ ಕಂಡಿರುವ ಈ ಚಿತ್ರದ ಟೀಸರಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಹಾಡುಗಳು ಕೂಡ ಅಭಿಮಾನಿಗಳ ಗಮನವನ್ನು ಸೆಳೆದಿವೆ
ಶರಣ ಈ ಚಿತ್ರದಲ್ಲಿ ಗುರುವಾದರೆ ಇವರ ಶಿಷ್ಯರಿಂದರಾಗಿ ನಟಿಸುತ್ತಿರುವರು ಯಾರು ಗೊತ್ತಾ? ಸ್ಯಾಂಡಲ್ವುಡ್ ನ ಪ್ರಸಿದ್ಧ ಖಳನಾಯಕರ ಮಕ್ಕಳು ಈ ಹಿಂದೆ ನವಗ್ರಹ ಚಿತ್ರದಲ್ಲಿ ಜೊತೆಯಾಗಿ ಅಭಿನಯಿಸಿದ್ದು ನಮಗೆಲ್ಲಾ ಗೊತ್ತಿದೆ. ಈಗ ಮತ್ತದೇ ರೀತಿಯ ಪ್ರಯತ್ನ ನಡೆಯುತ್ತಿರುವುದು ವಿಶೇಷ. ಈ ಬಾರಿಯ ವಿಶೇಷ ಏನೆಂದರೆ ಸ್ಯಾಂಡಲ್ವುಡ್ ನ ಪ್ರಸಿದ್ಧ ನಟರ ಮಕ್ಕಳು ಜೊತೆಯಾಗಿ ಈ ಚಿತ್ರದಲ್ಲಿ ಶರಣ್ ಶಿಷ್ಯರಾಗಿ ಅಭಿನಯಿಸಿದ್ದಾರೆ. ಶರಣ್ ಮಗ, ರವಿಶಂಕರ ಗೌಡ ಮಗ, ನವೀನ ಕೃಷ್ಣ ರ ಮಗ, ಬುಲೆಟ್ ಪ್ರಕಾಶ್ ಅವರ ಮಗ, ಪ್ರೇಮ್ ಮಗ, ಮತ್ತು ಶಾಸಕ ರಾಜು ಗೌಡರ ಮಗ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.