ಸದಾ ಕೆಲಸದಲ್ಲಿ ಬ್ಯುಸಿಯಾಗಿದ್ದ ಶಿವಣ್ಣ ಈಗಿನ ಪರಿಸ್ಥಿತಿಯ ಕಾರಣ 3 ತಿಂಗಳಿಂದ ಶೂಟಿಂಗ್ಇಲ್ಲದೇ, ಎಲ್ಲಿಯೂ ಹೋಗಲಾಗದೆ ಮನೆಯಲ್ಲೇ ಇದ್ದರು.. ಸಣ್ಣ ಬಡಲಾವಣೆಗಾಗಿ ಒಂದು ಚಿಕ್ಕ ಟ್ರಿಪ್ಹೊಡೆದ್ರು ಶಿವಣ್ಣ.
ಮೈಲಾರಿ ಖ್ಯಾತಿಯ ನಿರ್ದೇಶಕ “R.ಚಂದ್ರು” ಅವರ ಚಿಕ್ಕಬಳ್ಳಾಪುರದಲ್ಲಿನ ತೋಟಕ್ಕೆ ಶಿವಣ್ಣ ಪತ್ನಿ ಗೀತಾರ ಜೊತೆ ಭೇಟಿ ನೀಡಿ, ಪರಿಸರದ ಮಡಿಲಲ್ಲಿ ಸಮಯ ಕಳೆದರು.
ಚಿಕ್ಕಬಳ್ಳಾಪುರ R. ಚಂದ್ರು ಅವರ ಸ್ವಂತ ಊರಾಗಿದ್ದು ಅವರ ಜಮೀನಿನಲ್ಲಿಯೇ ತೋಟಗಾರಿಗೆ ಮಾಡುತ್ತ ಸಮಯ ಕಳೆಯುತ್ತಿದ್ದಾರೆ. 20 ಏಕರೆಯ ಜಾಗದಲ್ಲಿ ದ್ರಾಕ್ಷಿ,ಕ ಡಲೆಕಾಯಿ, ತರಕಾರಿ, ಮತ್ತು ಹತ್ತಿ ಬೆಳೆಯುತ್ತ ಅಲ್ಲೇ ಬೀಡು ಬಿಟ್ಟಿದ್ದಾರೆ.. ನಗರದ ಮಾಲಿನ್ಯದಿಂದ ದೂರ ಇರುವ, ಯಾವ ಜಂಜಾಟವಿಲ್ಲದ, ಆ ವಿಶಾಲವಾದ ಜಾಗಕ್ಕೆ ಶಿವಣ್ಣ ಭೇಟಿ ನೀಡಿ ಹರ್ಷೋದ್ಘಾರ ಅನುಭವಿಸಿದರು.
ಸುಂದರವಾದ ನೋಟ , ನಾಟಿ ಶೈಲಿಯ ಊಟವಸವಿದು ಸ್ವಲ್ಪ ವಿಶ್ರಾಂತಿ ಪಡೆದು ವಾವ್ಅಸ್ಸಾದರು. ಅಲ್ಲಿ ಕ್ಲಿಕ್ಕಿಸಿದಕೇಲುವು ಚಿತ್ರಗಳು.