ಶಿವರಾಜಕುಮಾರ್ ಜನ್ಮದಿನಕ್ಕೆ ಜಿ-ಪಿಚ್ಚರ್ ನಾನ್ ಸ್ಟಾಪ್ 60 ಘಂಟೆ ಸಿನಿಮಾ ಪ್ರಸಾರ.

shivarajkumar_954151482

ಜುಲೈ 12 ಕ್ಕೆ ಚಿರಯುವಕ ,ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ರವರ ಹುಟ್ಟು ಹಬ್ಬ, ಈಗಲೂ ಚಿರಯುವಕನಂತೆ ಕಾಣುವ, ನಮ್ಮ ಶಿವಣ್ಣನಿಗೆ 60 ವರ್ಷಗಳು ತುಂಬುತ್ತಿರುವ ಈ ಸಂದರ್ಭದಲ್ಲಿ ಜಿ ಪಿಕ್ಚರ್ ಅವರಿಗೆ ಉಡುಗೊರೆಯ ಮೂಲಕ ಶುಭಾಶಯಗಳನ್ನೂ ಹೇಳುತ್ತಿದೆ.

60 ವರ್ಷದ ಶುಭ ಸಂದರ್ಭದಲ್ಲಿ, ಜಿ ಪಿಕ್ಚರ್ ಶಿವರಾಜಕುಮಾರ್ ಅಭಿನಯದ ಚಿತ್ರಗಳನ್ನು ಸತತ 60 ಘಂಟೆಗಳ ನಾನ್ ಸ್ಟಾಪ್ ಪ್ರದರ್ಶನವನ್ನು ಮಾಡುವ ಮೂಲಕ ಅವರಿಗೆ ಈ ಮೂಲಕ ಗೌರವವನ್ನು ಅರ್ಪಿಸುತ್ತಿದೆ. ಮೂರು ದಿನಗಳ ಕಾಲ 60 ಸಿನಿಮಾಗಳನ್ನು ಪ್ರದರ್ಶಿಸುತ್ತಿದೆ.

shivarajkumar_954151482
shivarajkumar_954151482

ಜುಲೈ 10 ಭಾನುವಾರ ಬೆಳಗ್ಗೆ 9 ಘಂಟೆಯಿಂದ ಬಾಗ್ಯದ ಬಳೆಗಾರದಿಂದ ಆರಂಭವಾಗುವ ಈ ನಾನ್ ಸ್ಟಾಪ್ ಪ್ರದರ್ಶನವು ಹಗಲು ರಾತ್ರಿ ನಿರಂತರವಾಗಿ ನಡೆಯುತ್ತಿರುತ್ತದೆ, ಜುಲೈ 12 ಮಂಗಳವಾರ ಶಿವಣ್ಣನವರ ಹುಟ್ಟು ಹಬ್ಬವಾದ ಆ ದಿನ ರಾತ್ರಿ 9 ಘಂಟೆಗೆ ಭಜರಂಗಿ-2 ಚಿತ್ರದ ಪ್ರದರ್ಶನ ದೊಂದಿಗೆ ಮುಕ್ತಾಯವಾಗುತ್ತದೆ.


ಏನೇ ಆಗಲಿ ಜಿ ವಾಹಿನಿಯು ಈ ರೀತಿಯಾಗಿ ಶಿವಣ್ಣನವರಿಗೆ ಗೌರವವನ್ನು ಸೂಚಿಸುತ್ತಿರುವುದು ಶ್ಲಾಘನೀಯವಾಗಿದೆ. ಒಟ್ಟಿನಲ್ಲಿ ಶಿವರಾಜಕುಮಾರ್ ರವರಿಗೆ 60 ವರ್ಷಗಳ ಈ ಶುಭ ಸಂದರ್ಭದಲ್ಲಿ, ಅವರಿಗೆ ಹೆಚ್ಚಿನ ಆಯಸ್ಸು , ಆರೋಗ್ಯವನ್ನು ಭಗವಂತ ನೀಡಲಿ ಎಂದು ಚಿತ್ರೋದ್ಯಮ.ಕಾಂ ಅವರಿಗೆ ಹೃದಯಪೂರ್ವಕ ಆರೈಕೆಯನ್ನು ಮಾಡುತ್ತಿದೆ. ಮತ್ತೊಮ್ಮೆ ಶಿವಣ್ಣನವರಿಗೆ ಹುಟ್ಟು ಹಬ್ಬದ ಶುಭಾಶಯಗಳು.

Chitrodyama Updates

Chitrodyama Updates

Leave a Reply