ಇದೇ ಶುಕ್ರವಾರ(21ನೇತಾರೀಕು) ಬಿಡುಗಡೆಯಾಗಲಿರುವ ರಮೇಶ್ ಅರವಿಂದ್ ನಟಿಸಿರುವ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ “ಶಿವಾಜಿ ಸೂರತ್ಕಲ್”ಈಗಾಗಲೇ ಎಲ್ಲಾ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿ ಮಾಡಿದೆ.ರಿಲೀಸ್ಗು ಮುನ್ನವೇ ಭಾರತದ ಕಂಡ ಶ್ರೇಷ್ಟ ಕ್ರೀಡಾ ತಾರೆ, ದ ಗ್ರೇಟ್ ವಾಲ್ ”ರಾಹುಲ್ ದ್ರಾವಿಡ್” ಅವರು ಚಿತ್ರತಂಡದೊಂದಿಗೆ ಸಿನಿಮಾವನ್ನು ವೀಕ್ಷಿಸಿದ್ದಾರೆ.
ರಾಹುಲ್ ದ್ರಾವಿಡ್ ಗಾಗಿ ಸ್ಪೆಷಲ್ ಶೋ ಒಂದು ಆಯೋಜಿಸ್ದರು. ರಮೇಶ್ ಅರವಿಂದ್ ಮತ್ತು ನಿರ್ದೇಶಕರಾದ ಆಕಾಶ ಅವರಿಗೆ ಶುಭ ಹಾರೈಸುವುದರ ಜೊತೆಗೆ ಸಿನಿಮಾ ಅದ್ಭುತವಾಗಿದ್ದು, ಕ್ಲೈಮ್ಯಾಕ್ಸ್ ಬಹಳ ಇಷ್ಟ ಆಯ್ತು ಅಂತ ಅಭಿಪ್ರಾಯವನ್ನು ಸಹ ವ್ಯಕ್ತಪಡಿಸಿದ್ದಾರೆ. ಸದಭಿರಚಿಯ ಚಿತ್ರವನ್ನು ನೋಡಿದ ಖುಷಿ ಅವರಲ್ಲಿ ಕಾಣಿಸುತ್ತಿತ್ತು..ಶಿವಾಜಿ ಸುರತ್ಕಲ್ ಸಿನಿಮಾಗೆ ರಾಹುಲ್ ದ್ರಾವಿಡ್ ಅವರೇ ಮೊದಲ ಪ್ರೇಕ್ಷಕ ಎಂಬುವುದು ಸಿನಿಮಾ ತಂಡ್ಡಕ್ಕೆ ಹೆಮ್ಮೆಯ ಸಂಗತಿ ಎಂದು ಇಡೀ ತಂಡ ವ್ಯಕ್ತಪಡಿಸಿದೆ..ಸಿನಿಮಾಗೆ ನಮ್ಮ ಪರವಾಗಿಯೂ ಆಲ್ ದ ಬೆಸ್ಟ್.
ಲೇಖಕರು: P.Ghanashyam