ಶಿಸ್ತಿನ ಸಿಪಾಯಿ K.S. ಅಶ್ವತ್

ಅಂದಾಜು 600 ಕನ್ನಡ ಸಿನಿಮಾಗಳಲ್ಲಿ ಪೋಷಕ ಪಾತ್ರ ವಹಿಸುತ್ತ, ನಾಯಕನಷ್ಟೇ ಪ್ರಭಾವಕಾರಿ ಅಭಿನಯದಿಂದಕನ್ನಡಿಗರ ಮನಸ್ಸಿನಲ್ಲಿ “ಶಾಶ್ವತ ಸ್ಥಾನ ಪಡೆದಿದ್ದಾರೆ ಅಶ್ವತ್”.

ಸಿನಿಮಾದಲ್ಲಿ ಮಹತ್ವದ ಪಾತ್ರಗಳನ್ನ ನಿಭಾಯಿಸಿರುವ ನಟ ನಿಜ ಜೀವನದಲ್ಲೂ ಆದರ್ಶ, ಶಿಸ್ತ-ಸಿದ್ದಾ0ತಗಳಿಗೆ ಪ್ರಾಮುಖ್ಯತೆ ನೀಡುತ್ತಿದ್ದರು. ಇನ್ನು ಹಣ ಕಾಸು ವಿಚಾರಕ್ಕೆ ಬಂದರಂತೂ ಮಾಹಾನ್ಸ್ವಾಭಿಮಾನಿ, ಯಾರ  ಬಳಿಯೂ, ಎಂತಹ ಪರಿಸ್ಥಿತಿಯಲ್ಲು   ಒಂದು ರೂಪಾಯಿಗಾಗಿ ಕೈ ಒಡ್ಡದ ವ್ಯಕ್ತಿ.

1998 ರಲ್ಲಿ ಅವರ ಪತ್ನಿಗೆ ಹೃದಯ ಚಿಕಿತ್ಸೆ ಮಾಡಿಸುವ ಸಂಧರ್ಭದಲ್ಲಿ ಹಣದ ಕೊರತೆ ಇದ್ದ ಕಾರಣ, ಅವರ ಏಕೈಕ ಸ್ಥಿರಾಸ್ತಿಯಾದ  ಮನೆಯನ್ನು ಮಾರಲು ತೀರ್ಮಾನ ಮಾಡಿದರು, ಯಾರಿಂದಲೂ ಓಂದುದುಗ್ಗಾಣಿಯಷ್ಟು ಸಹಾಯವಾಗಲಿ ಅಥವಾ ಸಾಲವು ಪಡೆಯಲಿಲ್ಲ. ಅವರಿಗೆ ಒಟ್ಟು 4 ಮಕ್ಕಳು, ಆ ಮಕ್ಕಳು ತಾಯಿಗೆ ಸೇವೆ ಮಾಡವ ಉದ್ದೇಶದಿಂದ ಹಣ ನೀಡಿದಾಗ ಅದನ್ನು ಸ್ವೀಕರಿಸಿ ಶರತ್ತೊಂದನ್ನ  ಹಾಕಿದರು.. ಯಾರ್ಯಾರು ಎಷ್ಟು ನೀಡಿರುವರು ಎಂಬ ಲೆಕ್ಕ ಇಟ್ಟುಕೊಂಡು ಒಂದು ಪೈಸೆ ಬಾಕಿ ಇರದಂತೆ ಎಲ್ಲಾ ಮಕ್ಕಳಿಗೆ ಹಂತ ಹಂತವಾಗಿ ಹಿಂತುರುಗಿಸಿದರು.

ಈ ವಿಷಯವನ್ನು ಅವರ ಮಕ್ಕಳಲ್ಲಿ ಒಬ್ಬರಾದ, ನಟ ಶಂಕರ ಅಶ್ವತ್ ತಿಳಿಸಿ ತಂದೆಯವರ ದೊಡ್ಡ ಗುಣವನ್ನಸ್ಮರಸಿಕೊಂಡಿದ್ದಾರೆ.

P. Ghanashyam

P. Ghanashyam

ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ. ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply