ಶ್ಯಾನೆ ಟಾಪಗೌಳೆ.. 👌💕👒

ಸಿನಿಮಾದ ಹಿರೋಹಿನ್ ಅಂದ್ಮೇಲೆ ಅಲ್ಲಿ ಇಂಟ್ರಡಕ್ಷನ್ ಸಾಂಗ್ ಇಲ್ಲ ಅಂದ್ರೆ ಹೆಂಗಲ್ವಾ.. ಒಂದು ಸಾಂಗ್ ಬಹಳ ಪಾಪ್ಯುಲರ್ ಆಗಿ ಎಲ್ಲಿ ನೋಡಿದರೂ ಅದೆ ಹಾಡು ಯಾವ ಚಾನೆಲ್ ಹಾಕಿದ್ರೂ ಅದೇ ಹಾಡು ಆ ಹೀರೋಹಿನ್ ಮೊದಲ ಫಿಲಂ ಅಲ್ಲ ಆದ್ರೂ ಇದಕ್ಕೂ ಮುಂಚೆ ಎಷ್ಟೋ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.


ಶ್ಯಾನೆ ಟಾಪಗೌಳೆ ನಮ್ ಹುಡುಗಿ ” ಇದೇ ಹಾಡಲ್ಲಿ ಕಾಣಿಸಿಕೊಂಡು ಗಂಡು ಹುಡುಗರ ಫೇವರಿಟ್ ಕ್ರಶ್ ಆಗಿ ಪಾಪ್ಯುಲರ್ ಆದ ನಟಿ ಅದಿತಿ ಪ್ರಭುದೇವ (ಸುದೀಪನ ಪ್ರಭುದೇವ ಬಣಕಾರ್ ). ನೋಡೋಕೆ ನಗುಮೊಗದ ಚೆಲುವೆ, ಒಂದು ಸ್ಮೈಲ್ ಕೊಟ್ರೆ ಹುಡುಗರು ಆಗ್ತಾರೆ ಫ್ಲಾಟ್, ಅಟ್ರಾಕ್ಟಿವ್ ಐಸ್..


ಇವರ ಹುಟ್ಟಿದ ಹಬ್ಬಕ್ಕೆ ಎಲ್ಲರೂ ವಿಶಸ್ ಮಾಡೋಣ , ಹ್ಯಾಪಿ ಬರ್ತ್‌ಡೇ ಅದಿತಿ ಪ್ರಭುದೇವ 💐💕🌹
ದಾವಣಗೆರೆಯಲ್ಲಿ ಹುಟ್ಟಿ, ಇಂಜಿನಿಯರಿಂಗ್ ಡಿಗ್ರಿ ಮತ್ತು ಎಂಬಿಎ ಮುಗಿಸಿ ಆಂಕರಿಂಗ್ ಜೊತೆ ನಟನೆಗೆ ಒಲವು ತೋರಿಸುತ್ತಾ ಕನ್ನಡ ಧಾರಾವಾಹಿ “ಗುಂಡಾಯನ ಹೆಂಡ್ತಿ” ನಟನೆ ಮುಂದೆ ಧೈಯ೯ಂ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದವರು.

ಚಿತ್ರ ಮಾಡುತ್ತಲೇ ಕಿರುತೆರೆಯ ನಂಟನ್ನು ಬಿಡದೆ “ನಾಗಕನ್ನಿಕೆ” ಧಾರಾವಾಹಿ ಮುಖ್ಯ ಭೂಮಿಕೆಯಲ್ಲಿ ನಟಿಸಿದರು.

ಬಜಾರ್, ಬ್ರಹ್ಮಾಚಾರಿ, ಚಿತ್ರಗಳಲ್ಲಿ ನಟನೆ.
ಸಿಂಗ ಚಿತ್ರದಲ್ಲಿ ಮುದ್ದುಗೊಂಬೆ ಶ್ಯಾನೆ ಟಾಪಾಗೌಳೆ ಹಾಡಿಂದ ಹೆಚ್ಚು ಪ್ರಸಿಧ್ಧಿ.

ಲಾಕ್ಡೌನ್ ಸಮಯದಲ್ಲಿ ಅಭಿಮಾನಿಗಳಿಗೆ ನಿರಾಸೆ ಮಾಡದೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ನಿಗಾವಹಿಸಿ ತರಹೇವಾರಿ ಫೋಟೋ ಅಪ್ಲೋಡ್ ಮಾಡುತ್ತಿದ್ದುದು ಜೊತೆಗೆ “ಪಫೆ೯ಕ್ಟ್ ಗಲ್೯” ಹಾಡಿನ ಆಲ್ಬಂ ನಲ್ಲಿ ಹಾಟ್, ಸ್ವೀಟಾಗಿ ,ಗ್ಲಾಮರಸ್ ಬ್ಯೂಟಿಯಾಗಿ ಕಾಣಿಸಿಕೊಂಡು ಫ್ಯಾನ್ಸ್ ಗೆ ಒಳ್ಳೆ ಟ್ರೀಟ್ ಕೊಟ್ಟರು.

ಇವರ ಮುಂಬರುವ ಚಿತ್ರಗಳು, ನಿದೇ೯ಶಕರು ಯಾರೆಂದು ನೋಡೋಣ :-

💜ಒಂಭತ್ತನೇ ದಿಕ್ಕು – ದಯಾಳ್ ಪದ್ಮನಾಭನ್
🌺ತೋತಾಪುರಿ -ವಿಜಯ್ ಪ್ರಸಾದ್.
🎩ಗಜಾನನ ಆಂಡ್ ಗ್ಯಾಂಗ್ – ಅಭಿಷೇಕ್ ಶೆಟ್ಟಿ.
🦚ಓಲ್ಡ್ ಮಾಂಕ್ – ಎಂ ಜಿ ಶ್ರೀನಿವಾಸ್.
👒ತ್ರಿಬಲ್ ರೈಡಿಂಗ್ – ಶ್ರೀಮಹೇಶ್ ಗೌಡ.

ರಂಗನಾಯಕಿ ಚಿತ್ರದ ನಟನೆಗೆ ಅತ್ಯುತ್ತಮ ನಟಿ ಫಿಲ್ಮಿ ಬೀಟ್ ಪ್ರಶಸ್ತಿ ಲಭಿಸಿದೆ.

ತಮ್ಮ ವಿಶಿಷ್ಟವಾದ ಅಭಿನಯದಿಂದ ಹುಡುಗರ ಹಾಟ೯ನ್ನು ಕದ್ದಿರುವ ಈ ಹುಡುಗಿ ಚಿತ್ರರಂಗದಲ್ಲಿ ಭರವಸೆಯ ನಟಿ ಅನ್ನಿಸಿಕೊಂಡವರು, ಇನ್ನೂ ವೈವಿಧ್ಯಮಯ ಪಾತ್ರಗಳಲ್ಲಿ ವಿಶಿಷ್ಟ ಚಿತ್ರಗಳಲ್ಲಿ ನಟಿಸಿ ಅಭಿಮಾನಿಗಳನ್ನು ರಂಜಸಲಿ. ಆಲ್ ದಿ ಬೆಸ್ಟ್ ನಿಮ್ಮ ಫ್ಯೂಚರ್ ಪ್ರಾಜೆಕ್ಟ್ ಗಳಿಗೆ ಅದಿತಿ.. 🦚

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply