“ಶ್ರೀ ದುರ್ಗಾ ಆಗಿ ಉಗ್ರಾವತರಾದಲ್ಲಿ ಬರಲಿದ್ದಾರೆ ಪ್ರಿಯಾಂಕ ಉಪೇಂದ್ರ”
“ಶ್ರೀ ದುರ್ಗಾ” ಅಂದ್ರೆ ನಟಿ ಪ್ರಿಯಾಂಕ ಅವ್ರೇನಾದ್ರು ಪೌರಾಣಿಕ ಅಥವಾ ಭಕ್ತಿ ಪ್ರಧಾನ ಸಿನಿಮಾದಲ್ಲಿ ನಟಿಸುತ್ತಿದ್ದಾರಾ! ಅಂದ್ಕೊಂಡ್ರೆ ನಿಮ್ಮ ಊಹೆ ತಪ್ಪು…
ಈ ಹಿಂದೆ ಸೆಕೆಂಡ್ ಹಾಫ್ ಸಿನಿಮಾದಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿ ನಟಿಸಿದ ಪ್ರಿಯಾಂಕ ,ಮತ್ತೋಮ್ಮೆ ಪೊಲೀಸ್ ಪಾತ್ರದಲ್ಲಿ ಕಾಣಲಿದ್ದಾರೆ.ಆದರೆ ಈ ಬಾರಿ ಕಿಡಿಗೇಡಿಗಳ ಬೆನ್ನು ಮುರಿಯೋ ಖಡಕ್ ಇನ್ಸ್ಪೆಕ್ಟರ್ ರೋಲ್ ನಲ್ಲಿ ರಾರಾಜಿಸಿಲಿದ್ದಾರೆ.”ಉಗ್ರಾವತರ” ಅನ್ನೋ ಶಿರ್ಶೆಕೆಯಲ್ಲಿ,ಗುರುಮೂರ್ತಿ ನಿರ್ದೇಶಿಸಿ, ಮುನಿಕೃಷ್ಣ ನಿರ್ಮಿಸುತ್ತಿರುವ ಚಿತ್ರದಲ್ಲಿ ಪ್ರಿಯಾಂಕ ಉಪೇಂದ್ರ I.P.S” ಶ್ರೀ ದುರ್ಗಾ”ಆಗಿ ಬರಲಿದ್ದಾರೆ. ಇದು ಒಂದು ಪಕ್ಕಾ ಆಕ್ಷನ್ ಥ್ರಿಲ್ಲರ್ ಸಿನಿಮಾ.ಚಿತ್ರದಲ್ಲಿ ಅದ್ದೂರಿ ಫೈಟ್ ಸನ್ನಿವೇಶಗಳಿದ್ದು ,ಯಾವುದೇ ಡೂಪ್ ಇಲ್ಲದೆ ಎಲ್ಲವನ್ನು ಪ್ರಿಯಾಂಕ ಅವರೇ ನಿಭಾಯಿಸಿದ್ದಾರೆ,ಅದಕ್ಕಾಗಿ ಹಲವು ತಿಂಗಳ ಕಾಲ ವಿಶೇಷ ತರಬೇತಿ ಪಡೆದಿದ್ದಾರೆ.
ಚಿತ್ರದ ಇನ್ನೊಂದು ವಿಶೇಷವೆನಂದರೇ, ಪ್ರಮುಖ ಪಾತ್ರದಲ್ಲಿ ಹಿಂದಿಯ ನಟ “ಜಾಕಿ ಶ್ರಾಫ್” ಅಭಿನಯಿಸಿದ್ದಾರೆ.ಅವರಿಗಾಗಿ ದೊಡ್ಡ ಆಕ್ಷನ್ ಸನ್ನಿವೇಶ ಸಂಯೋಜಿಸಲಾಗಿದೆ.
ಈಗಾಗಲೇ 40ರಷ್ಟು ಭಾಗ ಚಿತ್ರೀಕರಣ ಮುಗಿದಿದ್ದು ಲಾಕ್ಡೌನ್ ಸಡಿಲದ ನಂತರ ಚಿತ್ರೀಕರಣ ಭರದಿಂದ ಸಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.