ಸಂಗೀತ ಗಾನಸುಧೆ ಸಾನ್ವಿ ದೇಸಾಯಿ

Sanvi Desai

ಸಾನ್ವಿ ದೇಸಾಯಿ ಅವರು ಬಾಲ್ಯದಿಂದಲೇ ಸ್ವರ ಲಯ ರಾಗವನ್ನು ಮೈಗೂಡಿಸಿಕೊಂಡು ತನ್ನ ಕಂಠಸಿರಿಯಿಂದ ಎಲ್ಲರ ಮನ ಗೆಲ್ಲುತ್ತಿರುವ ಪುಟ್ಟ ಪೋರಿ. ಮೂಲತ: ಮುದ್ದೇಬಿಹಾಳದ ರಘು ದೇಸಾಯಿ ಸ್ಮಿತಾ ದಂಪತಿಯ ಮಗಳಾಗಿದ್ದು ಪೋಷಕರು ಮತ್ತು ಕುಟುಂಬದವರು ಎಲ್ಲರೂ ಹಾಡುಗಾರರು ಹಾಗಾಗಿ ಸ್ವಾಭಾತ ಸಂಗೀತ, ನಾಟಕದಲ್ಲಿ ಆಸಕ್ತಿ ಹೊಂದಿದ್ದಾಳೆ. ಸುಮಾರು ವರ್ಷಗಳಿಂದ ಮಲೇಶಿಯಾದಲ್ಲೇ ನೆಲೆಸಿದ್ದರೂ ಕೂಡ, ಸಾನ್ವಿಯ ಕನ್ನಡ ಪ್ರೇಮವನ್ನು ಮೆಚ್ಚಬೇಕಾದ್ದೇ.

6ನೇ ವಯಸ್ಸಿಗೆ ಕರೋಕೆ ಜೊತೆ ಹಾಡುವುದನ್ನು ಪ್ರಾರಂಭಿಸಿದ್ದಾರೆ 2016ರಲ್ಲಿ ಇಂಡಿಯನ್ ಮೀಟ್ ಅಂಡ್ ಗ್ರೇಟ್ ವಾರ್ಷಿಕೋತ್ಸವದಲ್ಲಿ ಸಾನ್ವಿ ಮೊದಲ ವೇದಿಕೆಯೇರಿ ಹಾಡು ಹಾಡಿ ಪ್ರೇಕ್ಷಕರ ಮನಗೆದ್ದಿದ್ದಾರೆ ಹಿಂದುಸ್ತಾನಿ ಸಂಗೀತವನ್ನು ಬೆಂಗಳೂರಿನ ರಕ್ಷಾ ಪಾಟೀಲ್ ಅವರಿಂದ ಅಂತರ್ಜಾಲದ ಮೂಲಕ ಕಲಿಯುತ್ತಿದ್ದಾರೆ. ಸಾನ್ವಿ ಹಾಡಿಗೆ ಸಂಗೀತ ನಿರ್ದೇಶಕರ ಕಲ್ಪನಾ ಜಯಂ ಕಾಂತ್ ತಾವೇ ರಚಿಸಿ ನುಡಿಸಿರುವ ಪಿಯಾನೋ ನೀಡಿದ್ದಾರೆ.

sanvi desai
sanvi desai

ಚಿಕ್ಕವಯಸ್ಸಿನಲ್ಲೇ ಸಂಗೀತ ಸರಸ್ವತಿಯ ಆಶೀರ್ವಾದ ಪಡೆದ ಸಾನ್ವಿಯನ್ನು ಅರಸಿ ಬಂದ ಪ್ರಶಸ್ತಿಗಳಂತೂ ಲೆಕ್ಕವಿಲ್ಲ. 2019ರಲ್ಲಿ ಮಲೇಶಿಯಾ ಮತ್ತು ಕರ್ನಾಟಕ ಸಂಘದ ಕರ್ನಾಟಕ ರಾಜ್ಯೋತ್ಸವದಲ್ಲಿ ಪಾಲ್ಗೊಂಡಿದ್ದರು. 2020ರ ಫೆಬ್ರವರಿಯಲ್ಲಿ ಸಿಂಗಾಪುರ ಕನ್ನಡ ಸಂಘ ಆಯೋಜಿಸಿದ್ದ ಪುರಂದರ ನಮನ ಹಿಂದುಸ್ತಾನಿ ಸಂಗೀತದ ಕಾರ್ಯಕ್ರಮದಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. 2020ರಲ್ಲಿ ನಮ್ಮವರು ವರ್ಲ್ಡ್ ವರ್ಲ್ಡ್ ಆಯೋಜಿಸಿದ ಪ್ರತಿಭಾ ಸವಾಲು ಕಾರ್ಯಕ್ರಮದಲ್ಲಿ1ನೇ ಸ್ಥಾನ ಪಡೆದಿದ್ದಾರೆ. ಹಿಂದುಸ್ತಾನಿ ಸಂಗೀತದಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ ಇತ್ತೀಚಿಗೆ ರಾ ಸಿನಿಮಾದ ನಿರ್ದೇಶಕರಾದ ರಾಜೇಶ್ ಗೌಡ ಅವರು ಭಕ್ತಿಗೀತೆ ಹಾಡಲು ಅವಕಾಶ ಕೊಟ್ಟಿದ್ದು ಅದನ್ನು ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಿದ್ದಾರೆ ಮತ್ತು ಸಾಗರೋತ್ತರ ಕನ್ನಡಿಗರು ಕಾರ್ಯಕ್ರಮದಲ್ಲಿ ಸಾನ್ವಿ ಯವರು ಹಾಡನ್ನು ಪದ್ಮಶ್ರೀ ಪುರಸ್ಕೃತ ಜೋಗತಿ ಮಂಜಮ್ಮ ಸದಾನಂದ ಗೌಡರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇತ್ತೀಚಿಗೆ ಕನ್ನಡ ಚಿತ್ರರಂಗದ ಸಂಗೀತ ಮಾಂತ್ರಿಕ ವಿ. ಮನೋಹರ್ ಅವರು ಕೂಡ ಸಾನ್ವಿ ಯವರ ಕಂಠಸಿರಿಯನ್ನು ಫೇಸ್ಬುಕ್ನಲ್ಲಿ ಪ್ರೋತ್ಸಾಹ ಮಾಡಿದ್ದಾರೆ.

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದೆಂಬಂತೆ, ಇಷ್ಟು ಚಿಕ್ಕ ವಯಸ್ಸಿಗೇ ಇಷ್ಟು ಸಾಧನೆ ಮಾಡಿದ ಸಾನ್ವಿಯ ಕೀರ್ತಿ ಇನ್ನೂ ಎತ್ತರಕ್ಕೆ ಬೆಳಗಲಿ. ಕನ್ನಡ ಸಂಗೀತ ಪ್ರಪಂಚದಲ್ಲಿ ಗಾಯಕಿಯಾಗಿ ಇನ್ನೂ ಹೆಸರು ಮಾಡಲಿ. ಆ ತಾಯಿ ಗಾನ ಸರಸ್ವತಿಯ ಆಶೀರ್ವಾದ ಸಾನ್ವಿಯ ಮೇಲೆ ಇರಲಿ ಎಂಬುದೇ ಚಿತ್ರೋದ್ಯಮ.ಕಾಮ್ ತಂಡದ ಹಾರೈಕೆ. ಗುಡ್ ಲಕ್ ಸಾನ್ವಿ.

Vidyashree

Vidyashree

Leave a Reply