ಬಾಲಿವುಡ್ನ ಬ್ಯಾಡ್ ಬಾಯ್ , ಖಲ್ನಾಯಕ್ ಸಂಜು ಬಾಬಾ ಕೆ ಜಿ ಎಫ್-2ನೆ ಭಾಗದಲ್ಲಿ ಅಧೀರನಾಗಿ ಆರ್ಭಟಿಸಲಿದ್ದು ಸಿನಿಮಾ ತಂಡ ಅದರ ಒಂದು ಸಣ್ಣ ಪೋಸ್ಟರ್ ಹೊರ ಬಿಟ್ಟಿದ್ದಾರೆ, ” ಯುದ್ಧವೇ ಜಗದ ನಿಯಮ “ಅನ್ನೋ ಸಿದ್ಧಾ0ತವನ್ನ ನಂಬಿ ತನ್ನ ಜೀವನದಲ್ಲು ಅದನ್ನು ಅಳವಡಿಸಿಕೊಂಡಿರೋ ಅಧೀರ, ಕತ್ತಿ ಹಿಡಿದು ಆಯುಧಧಾರಿಯಾಗಿ, ಸ್ವರ್ಣ ಸಾಮ್ರಾಜ್ಯದ ಸಾಮ್ರಾಟನಾಗಲು ಸಿದ್ಧವಾಗಿದ್ದಾನೆ. ಗಿರಿ ಪರ್ವತದಂತೆ ಅಗಾಧವಾಗಿ ನಿಂತಿರುವ ರಾಕಿ ಭಾಯ್ ಜೊತೆಗಿನ ಸಮರದಲ್ಲಿ ನೆತ್ತರದ ಕೊಳವಲ್ಲ ಬದಲಿಗೆ ಹೊಳೆಯೇ ಹರಿಯಲಿದೆ.
ಹಗೆ ಹುನ್ನಾರಗಳನ್ನ ತಳಹದಿಯಾಗಿಸಿಕೊಂಡಿರುವ ಅಧೀರನ ಪಾತ್ರವು ಹಾಡಿನಲ್ಲಿ ಪರಿಚಯವಾಗುತ್ತೆ.
ಸಾಮಾನ್ಯವಾಗಿ ಕಮರ್ಷಿಯಲ್ ಚಿತ್ರದ ನಾಯಕ ಅಥವ ನಾಯಕಿಗೆ, ಸಿನಿಮಾದಲ್ಲಿನ ಅವರ ಪಾತ್ರಕ್ಕೆ ಮತ್ತು ರಿಯಲ್ ಲೈಫ್ನ ಇಮೇಜಿಗೆ ಹೊಂದುವಂತಹ ಒಂದು “ಗುಣವಾಚಕ ಭರಿತ” ಎಂಟ್ರಿ ಹಾಡು ಇರುವುದು ಸಹಜ ಆದ್ರೆ ಇದೇ ಮೊದಲ ಬಾರಿಗೆ ಒಬ್ಬ ಗುಮ್ಮನ ತಾಕತ್ತನ್ನ ವರ್ಣಿಸುವ “ಖಳನಾಯಕ”ನ ಅಟ್ಟಹಾಸವನ್ನ ಬಿಂಬಿಸುವ, ಪ್ರತ್ಯೇಕ ಗೀತೆಗೆ ರವಿ ಬಸ್ರೂರ್ ರಾಗ ಸಂಯೋಜಿಸಿದ್ದಾರೆ.
ಅದ್ರಲ್ಲೂ ಸಂಜು ಬಾಬಾ ಮೊದಲಬಾರಿಗೆ ಕನ್ನಡದಲ್ಲಿ ಅಭಿನಯಿಸಿದ್ದು, ಅವರಿಗೆ ಈ ಹಾಡು ಅದ್ದೂರಿ ಸ್ವಾಗತ ಗೀತೆಯಾಗಲಿರುವುದಂತೂ ನಿಜ.