ಚಿತ್ರರಂಗದ ಯಾವುದೇ ಹಿನ್ನಲೆಯಿಲ್ಲದೇ ಚಿತ್ರರಂಗವನ್ನು ಪ್ರವೇಶಿಸಿ ಕಠಿಣ ಪರಿಶ್ರಮದ ಮೂಲಕ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಸ್ಥಾನವನ್ನು ಪಡೆದುಕೊಂಡಿರುವ ನಟ ಭುವನ್ ಚಂದ್ರ ತಮ್ಮ ಮೊದಲ ಚಿತ್ರದಲ್ಲಿ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರೊಂದಿಗೆ ನಟಿಸಲು ಅವಕಾಶವನ್ನು ಪಡೆದ ಅದೃಷ್ಟವಂತ.ಅಲ್ಲದೇ ಹಿಡಿದ ಕೆಲಸವನ್ನು ಬಿಡದೇ ಸಂಪೂರ್ಣ ಮಾಡುವ ಹಠವಾದಿ ಕೂಡ.
ನಾಯಕನಾಗಿ ನಟಿಸಿದ ಮೊದಲ ಚಿತ್ರದಲ್ಲಿ ಅಪಾಯಕಾರಿ ಸ್ಟಂಟ್ ಗಳನ್ನು ನೈಜವಾಗಿ ಮಾಡಿ ಪ್ರೇಕ್ಷಕ ಸಮೂಹವನ್ನು ಅಚ್ಚರಿ ಪಡಿಸಿದರೆ ಅದೇ ಚಿತ್ರದಲ್ಲಿ ತಮ್ಮ ವಿಶಿಷ್ಟ ನೃತ್ಯದ ಮೂಲಕ ಅಸಂಖ್ಯಾತ ಯುವತಿಯರ ಮನಸ್ಸನ್ನೇ ಕದ್ದಿರುವ ಚೋರ ಚಿತ್ತ ಚೋರ ಕೂಡ. ತಮ್ಮ ಖಾಸಗಿ ಜೀವನದಲ್ಲಿ ಕೂಡ ಅಷ್ಟೇ ಸರಳತೆಯಿಂದ ಬದುಕುತ್ತಿದ್ದು ಪಕ್ಷಿಗಳ ಮೇಲೆ ಎಲ್ಲಿಲ್ಲದ ಪ್ರೀತಿಯಾದರೆ ಗಿಡಗಳನ್ನು ಬೆಳೆಸುವುದರಲ್ಲಿ ಅತೀವ ಆಸಕ್ತಿ. ಕ್ಯಾಮೆರಾ ಎದುರಿಗೆ ನಿಂತಾಗ ಪಾತ್ರದಲ್ಲಿಯೇ ತಲ್ಲೀನನಾಗಿ ಹೋಗುವ ಮತ್ತು ಸಾಮಾನ್ಯರಂತೆಯೇ ಬದುಕುತ್ತಿರುವ ನಟ ಭುವನ್ ಚಂದ್ರ ಇಂದಿನ ನಮ್ಮ ಸೆಲೆಬ್ರಿಟಿ.
ಕ್ಯಾಮೆರಾ ಹೊರಗಡೆ ನಟ ಭುವನ್ ಚಂದ್ರ ಅವರ ಕುರಿತು ಚಿಕ್ಕ ಪರಿಚಯ
ಚಿತ್ರೋದ್ಯಮ: ನಿಮ್ಮ ಸಿನಿಮಾ ಜರ್ನಿ ಹೇಗೆ ಆರಂಭವಾಯಿತು?
ಭುವನ್ ಚಂದ್ರ: ನನ್ನ ಮೊದಲ ಚಿತ್ರ ಸಿರಿವಂತ, ಡಾ.ವಿಷ್ಣುವರ್ಧನ್ ಅಪ್ಪಾಜಿ ನಟನೆಯ ಸಿರಿವಂತ ಚಿತ್ರದಲ್ಲಿ ಅವರ ಮಗನ ಪಾತ್ರವನ್ನು ಮಾಡಿದ್ದೆ. ಇಂದಿಗೂ ಟೀವಿಯಲ್ಲಿ ಹಾಕಿದಾಗ ಮೈಸೂರು, ತುಮಕೂರು, ಹುಬ್ಬಳ್ಳಿ ಕಡೆಯಿಂದ ಪೋನ್ ಮಾಡಿ ಹೇಳುತ್ತಾರೆ, ಅಣ್ಣ ನಿಮ್ಮ ಪಿಕ್ಚರ್ ಟಿವಿಯಲ್ಲಿ ಬರ್ತಾ ಇದೆಯೆಂದು ಸ್ಕ್ರೀನ್ ಶಾಟ್ ತೆಗೆದು ಕಳಿಸ್ತಾರೆ, ಜನ, ಮನವನ್ನು ಗೆದ್ದಂತಹ ಸಿನಿಮಾ ಅದು. ನನಗೆ ಈ ಸಿನಿಮಾದಲ್ಲಿ ಚಾನ್ಸ್ ಸಿಕ್ಕಿದ್ದು ರಾಕಲೈನ್ ವೆಂಕಟೇಶ ಸರ್ ಥ್ರೂ. ಅವರ ಸ್ಟುಡಿಯೋದಲ್ಲಿ ನನ್ನ ಫೋಟೋಸ್ ಕೊಟ್ಟಿದ್ದೆ. ಆ ಫೋಟೋಸ್ ಕೊಟ್ಟ 1 ವರ್ಷದ ನಂತರ ನನಗೆ ಕಾಲ್ ಬಂತು, ಒಂದು ಕ್ಯಾರೆಕ್ಟರ್ ಹುಡುಕ್ತಾ ಇದೀವಿ, ವಿಷ್ಣುವರ್ಧನ್ ಸರ್ ಮಗನ ಕ್ಯಾರೆಕ್ಟರ್, ಅಸೋಸಿಯೇಟ್ ಸೋಮಣ್ಣ ಪೋನ್ ಮಾಡಿದ್ದರು. ಹೋದೇ ನನ್ನ ನೋಡಿ ಓಕೆ ಚೆನ್ನಾಗಿ ಇದಾರೆ ಎಂದರು. ಆಗಲೇ ಐದಾರು ಜನ ಬಂದಿದ್ದರು, ಅಲ್ಲಿಯೇ ನನ್ನ ಸೆಲೆಕ್ಟ್ ಮಾಡಿದರು. ಈ ಚಿತ್ರ ಪ್ರವೇಶಕ್ಕೆ ಮೂಲ ಕಾರಣ ರಾಕಲೈನ್ ವೆಂಕಟೇಶ ಸರ್.
ಚಿತ್ರೋದ್ಯಮ: ಡಾ.ವಿಷ್ಣುವರ್ಧನ್ ಚಿತ್ರರಂಗದಲ್ಲಿಯೇ ಪ್ರಸಿದ್ಧ ನಟರು, ಅಂತಹ ಮೇರು ನಟನ ಜೊತೆಯಲ್ಲಿ ನಟಿಸುವುದೆಂದರೆ ಒಂದು ರೀತಿಯಲ್ಲಿ ಹಬ್ಬವೇ. ಮೊದಲ ಬಾರಿಗೆ ಡಾ.ವಿಷ್ಣುವರ್ಧನ್ ಜೊತೆಗೆ ನಟಿಸಿದಾಗ ಆ ಅನುಭವ ಹೇಗಿತ್ತು?
ಭುವನ್ ಚಂದ್ರ: ನಿಜ ಹೇಳಬೇಕೆಂದರೆ ಅದೊಂದು ಅದ್ಭುತ ಅನುಭವ, ನಾನು ಡಾ.ವಿಷ್ಣುವರ್ಧನ್ ಅಪ್ಪಾಜಿಯ ಅಪ್ಪಟ ಅಭಿಮಾನಿ, ಸೆಟ್ ನಲ್ಲಿ ಅವರ ಜೊತೆ ಕಳೆದ 35 ದಿನಗಳು ನನ್ನ ತಂದೆ ಜೊತೆ ಕಳೆದ 35 ವರ್ಷಗಳಿಗೆ ಲೆಕ್ಕವಾಗಿತ್ತು. ಇವತ್ತಿಗೂ ಮೈಸೂರು ವಿಭಾಗದಲ್ಲಿ ನನ್ನನ್ನು ಅಪ್ಪಾಜಿ ಮಗ ಎಂದೇ ಕರೆಯುತ್ತಾರೆ. ಮೈಸೂರಿನಿಂದ ನಿನ್ನೆ ನನಗೆ ಇನ್ವಿಟೇಶನ್ ಬಂದಿದೆ. ಮದನ್ ಕುಮಾರ್ ಎಂದು ವಿಷ್ಣು ವರ್ಧನ್ ಅಪ್ಪಾಜಿಯವರ ದೊಡ್ಡ ಅಭಿಮಾನಿ ನನ್ನ ಮಗಳ ಮದುವೆಯಿದ್ದು ನೀವು ಬಂದರೆ ವಿಷ್ಣುವರ್ಧನ್ ಅಪ್ಪಾಜಿ ಬಂದಷ್ಟೇ ಸಂತೋಷ ಆಗುತ್ತೆ ಎಂದು ಹೇಳಿದರು. ಅಷ್ಟರ ಮಟ್ಟಿಗೆ ಈ ಸಿರಿವಂತ ಚಿತ್ರ ನನಗೆ ಜನರ ಪ್ರೀತಿ, ವಿಶ್ವಾಸ, ಗೌರವ ಎಲ್ಲವನ್ನು ತಂದುಕೊಟ್ಟಿದ್ದು ನನ್ನನ್ನು ಸಿರಿವಂತನಾಗಿ ಮಾಡಿದೆ.
ಚಿತ್ರೋದ್ಯಮ: ನೀವು 2017 ರಲ್ಲಿ ಕಿಡಿ ಎನ್ನುವ ಸಿನಿಮಾದಲ್ಲಿ ಫಸ್ಟ್ ಟೈಮ್ ಹೀರೋ ಪಾತ್ರವನ್ನು ಮಾಡಿದ್ರಿ. ಅದರಲ್ಲೂ ಈ ಚಿತ್ರದಲ್ಲಿ ಯಾವುದೇ ಡೂಪ್ ಇಲ್ಲದೇ ಫೈಟ್ ಮಾಡಿದ್ದೀರಿ ಇದು ಖುಷಿ ವಿಷಯ ಕೂಡ, ಯಾಕೆಂದರೆ ಡೂಪ್ ಇಲ್ಲದೇ ಫೈಟ್ ಮಾಡುವುದು ಅಷ್ಟು ಸುಲಭವಲ್ಲ, ಇದನ್ನು ನೀವು ಹೇಗೆ ಮಾಡಿದೀರಿ?
ಭುವನ್ ಚಂದ್ರ : ಮೊದಲು ಒಂದು ಕಾಲವಿತ್ತು, ಜನರು ಏನು ಮಾಡಿದರೂ ಸಿಳ್ಳೆ ಹೊಡಿಯುತ್ತಿದ್ದರು,ಕಾಲ ಬದಲಾಗಿದೆ, ಟೆಕ್ನಾಲಜಿ ಬೆಳೆದಿದೆ. ಚೆನ್ನಾಗಿ ಬರಲಿ ಎನ್ನುವ ಕಾರಣಕ್ಕೆ ಒರಿಜಿನಲ್ ಆಗಿ ಮಾಡಿದ್ದೆ. ಮುಖ್ಯವಾಗಿ ಇದಕ್ಕೆ ಮೋಟಿವೇಷನ್ ಎಂದರೆ ಅಪ್ಪು . ಸ್ಕೂಲ್ ಟೈಂನಲ್ಲೆ ಅಪ್ಪು ಚಿತ್ರವನ್ನು ನೋಡಿದ್ದೆ. ಫೈಟ್ ನೋಡುವ ಸಲುವಾಗಿ 10 ರಿಂದ 15 ಸಲ ನೋಡಿದ್ದೇನೆ. ಅವರ ಫೈಟ್ ನೋಡಿ ತಲೆ ಕೆಟ್ಟು ಹೋಗಿತ್ತು. ಇವರು ಎಲ್ಲಿ ಕಲಿತಾರೆ, ನಾನು ಕಲಿಯಬೇಕು. ನಮ್ಮದು ಕಾರು ಇತ್ತು, ನನ್ನ ತಂದೆಗೆ ಗೊತ್ತಾಗದಂತೆ ಹೋಗಿ ದಿನಾಲು ಬೆಳಿಗ್ಗೆ ಪುನೀತ್ ರಾಜಕುಮಾರ್ ಮನೆ ಹತ್ತಿರ ವೇಟ್ ಮಾಡುತ್ತಿದ್ದೆ. ಅವರು ಹೊರಗೆ ಬಂದ ಕೂಡಲೇ ಅವರನ್ನು ಫಾಲೋ ಮಾಡಿಕೊಂಡು ಹೋಗಿ ಎಲ್ಲಿ ಟ್ರೇನಿಂಗ್ ತೆಗೆದುಕೊಳ್ಳುತ್ತಿದ್ದಾರೆ, ಎಷ್ಟೇ ಖರ್ಚು ಆದರೂ ಪರ್ವಾಗಿಲ್ಲ, ನಾನು ಕಲಿಯಬೇಕು ಎಂದು, ಬಹಳ ವರ್ಷಗಳ ನಂತರ ತಿಳಿಯಿತು ಅವರಿಗೆ ಕಲಿಸುತ್ತಿರುವ ಗುರುಗಳ ಹೆಸರು ಅಪ್ಪು ವೆಂಕಟೇಶ್ ಎಂದು ಗೊತ್ತಾಯಿತು. ಅವರೇ ನನಗೂ ಗುರುಗಳು ಅಪ್ಪು ವೆಂಕಟೇಶ್, ಯಶ್ ಗುರು ಕೂಡ, ಅವರು ಅಪ್ಪುವನ್ನೇ ಫಾಲೋ ಮಾಡಿದರು, ನಾನು ಫಾಲೋ ಮಾಡಿದೆ, ನನಗೆ ಮೇನ್ ಇನ್ಸ್ಪಿರೇಷನ್ ಎಂದರೆ ಅಪ್ಪು.
ಚಿತ್ರೋದ್ಯಮ: ಪ್ರೆಸೆಂಟ್ ನೀವು ಯಾವ ಚಿತ್ರಗಳಲ್ಲಿ ನಟಿಸುತ್ತಿದ್ದೀರಿ?
ಭುವನ್ ಚಂದ್ರ: ಪ್ರೆಸೆಂಟ್ ಕರೋನಾ ,ಮುಂಚೆ ಲಾಸ್ಟ್ ಯುಗಾದಿಗೆ ಸ್ಟಾರ್ಟ್ ಆಗಬೇಕಿತ್ತು, ಅದರ ಮಾತುಕತೆ ಈಗ ನಡಿತಾ ಇದೆ. ಏಕೆಂದರೆ ಕರೋನಾ ಇನ್ನು ನಮ್ಮನ್ನು ಬಿಟ್ಟು ಹೋಗಿಲ್ಲ, ಜನರು ಥಿಯೇಟರ್ ಗಳಿಗೆ ಬರುವುದಕ್ಕೆ ಹೆದರುತ್ತಿದ್ದಾರೆ, ಆದರೂ ಇನ್ನೂ ನಮಗೆ ಭಯ ಇದೆ. ಒಂದು ಕ್ರೈಂ ಥ್ರಿಲ್ಲರ್ ಕಥೆಯನ್ನು ಕೇಳಿದೀನಿ,ಅದರ ಪ್ರೆಸ್ ಮೀಟ್ ಆಗಿದ್ದು, ಒಂದು ದಿನದ ಶೂಟ್ ಆಗಿದೆ, ಆದರೆ ಕೋವಿಡ್ ಇರುವುದರಿಂದ ಮುಂದಿನ ಪ್ಲಾನ್ ಮಾಡಿಲ್ಲ. ಈ ಕೋವಿಡ್ ಟೈಂನಲ್ಲಿ ಕೆಲವು ನಿರ್ಮಾಪಕರಿಗೆ ಒಳ್ಳೆಯದಾಗಲಿ ಎನ್ನುವ ಲೆಕ್ಕದಲ್ಲಿ ಒಪ್ಪಿಕೊಂಡಿದ್ದೇನೆ. ಇನ್ನು ಕೆಲವು ಸ್ಕ್ರಿಪ್ಟ್ ಗಳು ಬಂದಿದ್ದು ಡಿಸ್ಕ್ ಶನ್ ನಡಿತಾ ಇದೆ. ಸದ್ಯದಲ್ಲೇ ಒಂದು ಅನೌನ್ಸ್ ಮಾಡುತ್ತೇನೆ .
ಚಿತ್ರೋದ್ಯಮ: ನೀವು ಸ್ಟೋರಿಗಳನ್ನು ಕೇಳುವಾಗ ಯಾವ ತರಹದ ಸ್ಟೋರಿ ನೋಡುತ್ತೀರಿ?
ಭುವನ್ ಚಂದ್ರ: ಒಂದು ಪಾತ್ರವನ್ನು ಕೊಟ್ಟರೆ ಅದನ್ನು ಪರಿಪೂರ್ಣವಾಗಿ ಮಾಡುವವನೇ ನಿಜವಾದ ಕಲಾವಿದ. ಎರಡನೆಯದು ಪ್ರೆಸೆಂಟ್ ಫ್ಯಾಮಿಲಿ ಎಂಟರ್ಟೈನ್ಮೆಂಟ್ ರೋಲ್ ಗೆ ಒತ್ತು ಕೊಡುತ್ತೇನೆ. ಅಂದರೆ ಮನೆ ಮಂದಿಯೆಲ್ಲಾ ಕುಳಿತು ನೋಡುವ ಸಿನಿಮಾ ಅಲ್ಲಿ ಡ್ಯಾನ್ಸ್ ಗೆ ಫೈಟ್ ಗೆ ಫ್ರಿಫರೆನ್ಸ್ ಕೊಡಬೇಕು, ಏಕೆಂದರೆ ಯುತ್ ಲೈಕ್ ಮಾಡುವುದು ಇದನ್ನೇ. ನಾರ್ತ್ ಕರ್ನಾಟಕದಲ್ಲಿ ಆಕ್ಷನ್, ಕಾಮಿಡಿ, ಮೈಸೂರು ವಿಭಾಗದಲ್ಲಿ ಎಮೋಷನ್ ಈ ರೀತಿ ಕರ್ನಾಟಕದ ಎಲ್ಲ ಭಾಗಗಳನ್ನು ನೋಡಿ ಮಾಡಬೇಕಾಗುತ್ತದೆ. ಯಾವುದೇ ರೀತಿಯ ಬೋರ್ ಆಗದೇ ಇರುವ ಹಾಗೆ ನೋಡಿಕೊಳ್ಳಬೇಕು ಅಲ್ವ, ನನಗೆ ಇಂತಹದೇ ಪಾತ್ರಗಳಿಗೆ ಬ್ರಾಂಡ್ ಆಗಲು ಇಷ್ಟಪಡುವುದಿಲ್ಲ, ಎಲ್ಲ ತರಹದ ಪಾತ್ರಗಳನ್ನು ಮಾಡಲು ಇಷ್ಟಪಡುತ್ತೇನೆ.
ಚಿತ್ರೋದ್ಯಮ: as a student ನಿಮ್ಮ ಕಾಲೇಜ್ ಲೈಫ್ ನಲ್ಲಿ ನೀವು ಫಸ್ಟ್ ಬೆಂಚ್ ಸ್ಟೂಡೆಂಟ್ ಅಥವಾ ಲಾಸ್ಟ್ ಬೆಂಚ್ ಸ್ಟೂಡೆಂಟಾ.
ಭುವನ್ ಚಂದ್ರ: ನನಗೆ ಸೀಟ್ ಎಲ್ಲಿ ಸಿಗುತ್ತಿತ್ತೊ ಅಲ್ಲಿ ಕುತ್ಕೋತಿದ್ದೆ. ಬೇಗ ಬಂದರೆ ಮುಂದೆ, ಲೇಟಾಗಿ ಬಂದರೆ ಮಧ್ಯದಲ್ಲಿ ಕುತ್ಕೋತಿದ್ದೆ.
ಚಿತ್ರೋದ್ಯಮ: ನಿಮ್ಮ ಕಾಲೇಜ್ ಲೈಫ್ ನಲ್ಲಿ ಕ್ರಶ್ ಆಗಿದ್ದರ ಬಗ್ಗೆ ?…
ಭುವನ್ ಚಂದ್ರ: ಕ್ರಶ್ ಅಂದರೆ ನನ್ನ ಬಿಗ್ಗೆಸ್ಟ್ ಕ್ರಶ್ ಮಾಧುರಿ ದೀಕ್ಷಿತ್, ನಂತರ ಐಶ್ವರ್ಯ ರೈ, ಇಬ್ಬರ ಡ್ಯಾನ್ಸ್ ಪರ್ಫಾರ್ಮೆನ್ಸ್ ಸೂಪರ್,ಯಾರು ಚೆನ್ನಾಗಿ ಪರ್ಫಾಮೆನ್ಸ್ ಮಾಡ್ತಾರೆಂದರೆ ನನಗೆ ತುಂಬ ಇಷ್ಟ.
ಚಿತ್ರೋದ್ಯಮ: ನಿಮ್ಮ ಜೀವನದಲ್ಲಿ ಆದರ್ಶ ವ್ಯಕ್ತಿ ಯಾರು?
ಭುವನ್ ಚಂದ್ರ: ನನಗೆ ಕ್ರಿಕೆಟ್ ಎಂದರೆ ತುಂಬ ಇಷ್ಟ, ಸಚಿನ್ ತೆಂಡೂಲ್ಕರ್ ತುಂಬ ಪರಿಣಾಮ ಬೀರಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಇವರ ಸಾಧನೆ ನೋಡಿ ನೋಡಿ ನನಗೂ ಸಾಧನೆ ಮಾಡಬೇಕು ಎನಿಸಿತು. ಇನ್ನೂ ಸಿನಿಮಾದಲ್ಲಿ ಸ್ಪೂರ್ತಿ ಡಾ.ವಿಷ್ಣುವರ್ಧನ್ ಅಪ್ಪಾಜಿ. ಇವತ್ತಿಗೂ ಅವರನ್ನು ನನ್ನ ದೇವರು ಎಂದುಕೊಂಡಿದ್ದೇನೆ.
ಚಿತ್ರೋದ್ಯಮ: ನಿಮಗೆ ಯಾವುದರಲ್ಲಿ ಇಂಟ್ರೆಸ್ಟ್ ಹೆಚ್ಚಿದೆ?
ಭುವನ್ ಚಂದ್ರ: ನನಗೆ ಕ್ರಿಕೆಟ್ ನಲ್ಲಿ ತುಂಬ ಇಂಟ್ರೆಸ್ಟ್ ನೋಡುವುದು, ಆಡುವುದು, ಗಿಡಗಳನ್ನು ಬೆಳೆಸುವುದರಲ್ಲಿ ನನಗೆ ತುಂಬಾ ಇಷ್ಟ.
ಚಿತ್ರೋದ್ಯಮ: ಒಂದು ಕಡೆಯ ಪ್ರಶ್ನೆ, ಒಂದು ವೇಳೆ ದೇವರು ಪ್ರತ್ಯಕ್ಷನಾಗಿ ನಿಮ್ಮನ್ನು ನೀವು ಬಯಸಿದ ವ್ಯಕ್ತಿಯನ್ನಾಗಿ ಮಾಡ್ತೀನಿ ಎಂದರೆ ನೀವು ಯಾರಾಗಲು ಬಯಸುತ್ತೀರಿ.
ಭುವನ್ ಚಂದ್ರ: ನನಗೆ ಯಾವ ಪೊಜಿಷನ್ ಬೇಡ, ಇರುವ ಪೊಜಿಷನ್ ಸಾಕು, ಒಂದು ವೇಳೆ ದೇವರು ಪ್ರತ್ಯಕ್ಷನಾಗಿ ವರ ಕೊಡ್ತೀನಿ ಎಂದರೆ ಈ ಕರೋನಾದಂತಹ ಯಾವ ಕಾಯಿಲೆನೂ ಕೊಡಬೇಡ ಎಲ್ಲರನ್ನು ಚೆನ್ನಾಗಿ ಇಡು ಎಂದೇ ಕೇಳಿಕೊಳ್ಳುತ್ತೇನೆ.
ಭುವನ್ ಚಂದ್ರ ಸಿನಿಮಾ ಜರ್ನಿ ಹೂವಿನ ಹಾಸಿಗೆಯಾಗಿರಲಿ, ಯಶಸ್ಸಿನ ಮೇಲೆ ಯಶಸ್ಸು ಸಿಗಲಿ ಅಂತ ಚಿತ್ರೋದ್ಯಮ.ಕಾಂ ನ ಹಾರೈಕೆ.