ಒಬ್ಬ ನಟ ಚಿತ್ರರಂಗದಲ್ಲಿ ಹೆಚ್ಚೆಂದರೆ 800- 900 ಚಿತ್ರಗಳು ನಟಿಸೋದು ಹೆಚ್ಚು ಆದರೆ ಕೆಲವು ಕಲಾವಿದರಿಗೆ ಆ ದೇವರು ನೀಡಿದ ವರ 1000 ಚಿತ್ರಗಳಲ್ಲಿ ನಟಿಸೋದು ಸುಲಭದ ಮಾತಲ್ಲ, ಪಂಡರೀಬಾಯಿ 1000 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಜನಪ್ರಿಯರಾದವರು, ತಮಿಳಿನಲ್ಲಿ ಮನೋರಮಾ ಕೂಡ 1200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದವರು.
ಒಬ್ಬ ಹಾಸ್ಯ ನಟ 1000ಕ್ಕೂ ಹೆಚ್ಚು ಚಿತ್ರ ನಟಿಸಿದ್ದಾರೆ ಅಂದ್ರೆ ಜನ ನಂಬಲು ಹಿಂಜರಿತಾರೆ, ಆದ್ರೆ ಅದೇ ಸತ್ಯ, ಆ ಸಾವಿರದ ಸರದಾರ ಬೇರಾರೂ ಅಲ್ಲ ನಮ್ಮ ಚಿತ್ರರಂಗದ ಹೆಮ್ಮೆಯ ಹಾಸ್ಯ ನಟ, ಪೋಷಕ ನಟ ಹೊನ್ನವಳ್ಳಿ ಕೃಷ್ಣ.
ಅಣ್ಣಾವ್ರ ಯಾವುದೇ ಚಿತ್ರಗಳಲ್ಲಿ ಇವರು ಇರಲೇಬೇಕು, ಅಣ್ಣಾವ್ರಿಗೆ ಇವರೆಂದ್ರೆ ಬಲು ಪ್ರೀತಿ, ಇವರಿಗೆ ಅಣ್ಣಾವ್ರೆಂದ್ರೆ ತುಂಬಾ ಇಷ್ಟ, ಇವರಿಗೆ ದೊಡ್ಮನೆ ಮೇಲೆ ಎಲ್ಲಿಲ್ಲದ ಕಾಳಜಿ.
ಚಿತ್ರರಂಗದಲ್ಲಿ ತಮ್ಮ ನಟನೆಯ ಮೂಲಕ ಜನರಿಗೆ ಆನಂದವನ್ನು ನೀಡುತ್ತಾ, ಸಹ ಕಲಾವಿದರಾಗಿ, ಹೆಚ್ಚಾಗಿ ಅಣ್ಣಾವ್ರ ಚಿತ್ರಗಳಲ್ಲಿ ನಟಿಸಿ ಅಣ್ಣಾವ್ರ ಮನಸ್ಸು ಕದ್ದ ಸಾವಿರ ಚಿತ್ರಗಳಲ್ಲಿ ಅಭಿನಯಿಸಿ “ಸಾವಿರದ ಸರದಾರ ” ಬಿರುದು ಪಡೆದ ನಮ್ಮ ಕನ್ನಡ ನಾಡಿನ ಹಿರಿಯ ಕಲಾವಿದರು , ಪುನೀತ್ ರಾಜಕುಮಾರ್ ರವರಿಗೆ ಡ್ಯಾನ್ಸ್ ಹೇಳಿಕೊಟ್ಟವರು ಶ್ರೀ. ಹೊನ್ನವಳ್ಳಿ ಕೃಷ್ಣ.
ಇವರ ಪ್ರಮುಖ ಚಿತ್ರಗಳು ಹೇಳೋದಾದರೆ ರಥ ಸಪ್ತಮಿ, ಆಸೆಗೊಬ್ಬ ಮೀಸೆಗೊಬ್ಬ, ಭೂತಯ್ಯನ ಮಗ ಅಯ್ಯು, ಜನುಮದ ಜೋಡಿ.
ಅಣ್ಣಾವ್ರ ಚಿತ್ರಗಳು ಸನಾದಿ ಅಪ್ಪಣ್ಣ, ಶಂಕರ್ ಗುರು, ಚಲಿಸುವ ಮೋಡಗಳು, ದೇವತಾ ಮನುಷ್ಯ, ಪರಶುರಾಂ, ಜೀವನ ಚೈತ್ರ, ಆಕಸ್ಮಿಕ, ಒಡಹುಟ್ಟಿದವರು…
ಶಿವಣ್ಣ ನಟಿಸಿದ ಆನಂದ್, ಸಂಯುಕ್ತ, ಮನ ಮೆಚ್ಚಿದ ಹುಡುಗಿ, ಇನ್ಸ್ಪೆಕ್ಟರ್ ವಿಕ್ರಮ್, ಓಂ, ಸಿಂಹದ ಮರಿ. ಗಾಜನೂರ ಗಂಡು, ಭಜರಂಗಿ..
ರಾಘವೇಂದ್ರ ರಾಜ್ ಕುಮಾರ್ ನಟಿಸಿದ ಗಜಪತಿ ಗವ೯ಭಂಗ ಅದರಲ್ಲಿ ಮಾಲಾಶ್ರೀ ರಿಂದ ಹೊಡೆತ, ಮದುವೆ ಗಂಡು ಆಗುವ ಪಜೀತಿ, ಜಟಕಾ ಕುದುರೆ ಹತ್ತಿ ಪ್ಯಾಟೆಗೋಗುಮ್ಮ ಪೂತಿ೯ ಹಾಡಲ್ಲಿ ನಕ್ಕು ನಗಿಸುವ ದೃಶ್ಯ ಕಣ್ಣು ಕಟ್ಟಿದಂತಿದೆ.
ಪುನೀತ್ ನಟನೆಯ ಚಲಿಸುವ ಮೋಡಗಳು ಕಾಣದಂತೆ ಮಾಯವಾದನು ಡಾನ್ಸ್ ಪವರ್ ಗೆ ಡಾನ್ಸ್ ಹೇಳಿಕೊಟ್ಟದ್ದು, ಬೆಟ್ಟದ ಹೂವು, ಅಣ್ಣಾ ಬಾಂಡ್, ದೊಡ್ಮನೆ ಹುಡುಗ, ರಾಜಕುಮಾರ, ಮಾಯಾಬಜಾರ್ ಚಿತ್ರಗಳಲ್ಲಿ ನಟನೆಯ, ಪುನೀತ್ ಅಂದ್ರೆ ಇನ್ನಿಲ್ಲದ ಪ್ರೀತಿ, ಶೂಟಿಂಗ್ ವೇಳೆಯಲ್ಲಿ ಇವರ ಜೊತೆ ಇದ್ದು ಇವರು ಹೇಳಿದಾಗೆ ನಟಿಸಿ ಜನಪ್ರಿಯರಾದರೂ ಪುನೀತ್ ರವರು ಇವರನ್ನು ಮರೆಯದೆ ತಮ್ಮ ಕುಟುಂಬದಲ್ಲಿ ಒಬ್ಬರು ಎಂದು ಭಾವಿಸುವ ಮನೋಭಾವನೆ ನಿಜಕ್ಕೂ ಶ್ಲಾಘನೀಯ.
ಹೆಚ್ಚಾಗಿ ಹೊನ್ನವಳ್ಳಿ ರವರು ಹಾಸ್ಯ ದೃಶ್ಯಗಳಲ್ಲಿ ಮಿಂಚಿರೋದು ಗಮನಿಸಿದರೆ ಲಾಕಪ್ ಡೆತ್ ಚಿತ್ರ ಆಟೋ ಡ್ರೈವರ್ ಪಾತ್ರ ಅಷ್ಟೇ ನಗಿಸುವಂತದ್ದು, ಗಂಡು ಆಟೋ ಡ್ರೈವರ್ ದುಡ್ಡು ಮಾಡೋಕೆ ಹಾಕೋ ಹೆಣ್ಣು ವೇಷ ನಿಜಕ್ಕೂ ಕಾಮಿಡಿ ಆದ್ರೂ ಕಥೆಗೆ ತಕ್ಕ ಹಾಗೆ ನಟನೆ ಮಾಡೋದ್ರಲ್ಲಿ ಸೈ ಅನ್ನಿಸಿಕೊಂಡ ನಟ ಇವರು.
ನಾಟಕಗಳಲ್ಲಿ ಇವರ ಪಾತ್ರ ಮತ್ತು ಹಾಡುಗಳು ಬಹಳ ಮನರಂಜನೆ ತಂದಿದೆ.
ಕೇವಲ ನಟನೆ ಮಾಡದೆ ಸಹ ನಿದೇ೯ಶಕರಾಗಿ ಕೆಲಸ ಮಾಡಿರೋದು ಗಮನಾರ್ಹ
ಆನಂದ್, ಚಲಿಸುವ ಮೋಡಗಳು, ಶಿವ ಮೆಚ್ಚಿದ ಕಣ್ಣಪ್ಪ, ಮನ ಮೆಚ್ಚಿದ ಹುಡುಗಿ, ಬೆಟ್ಟದ ಹೂವು, ಧೃವತಾರೆ, ಯಾರಿವನು, ಭಕ್ತ ಪ್ರಹ್ಲಾದ, ಎರಡು ನಕ್ಷತ್ರಗಳು, ಕಾಮನ ಬಿಲ್ಲು, ಹೊಸಬೆಳಕು, ಭಾಗ್ಯವಂತ, ಹಾವಿನ ಹೆಡೆ, ನೀ ನನ್ನ ಗೆಲ್ಲಲಾರೆ, ರವಿಚಂದ್ರ, ವಸಂತಗೀತ….
ಕೇವಲ ಅಣ್ಣಾವ್ರ ಚಿತ್ರಗಳಲ್ಲದೆ ಎಲ್ಲಾ ದಶ೯ನ್ , ವಿಜಯ ರಾಜೇಂದ್ರ, ಯಶ್, ಕೋಮಲ್, ಅಜಯ್ ರಾವ್, ದುನಿಯಾ ವಿಜಯ್, ಗಣೇಶ್, ರಾಮ್ ಕುಮಾರ್, ನಟರ ಜೊತೆ ತೆರೆಯಲ್ಲಿ ನಟಿಸಿದ್ದಾರೆ.
ಕೇವಲ ಬೆಳ್ಳಿ ತೆರೆ ಮಾತ್ರವಲ್ಲದೆ ಕಿರು ತೆರೆಯ ಧಾರಾವಾಹಿಗಳಲ್ಲಿ ಕೂಡ ನಟಿಸುತ್ತಿದ್ದಾರೆ.
ದೇವರು ಅವರಿಗೆ ಆಯಸ್ಸು ಕೊಟ್ಟು ಕಾಪಾಡಲಿ ಅಣ್ಣಾವ್ರ ಆಶೀವಾ೯ದ ಇವರ ಮೇಲಿರಲಿ, ಹಲವಾರು ಹೊಸ ಕಲಾವಿದರಿಗೆ ಇವರು ಮಾಗ೯ದಶ೯ನ ನೀಡಲಿ.
ಆರೋಗ್ಯದ ಕಡೆ ಗಮನ ನೀಡಲಿ, ಇಂಥ ಲೆಜೆಂಡ್ ಭೇಟಿ ಆದ ಸಮಯ ನಮ್ಮ ಪುಣ್ಯ ಭೂಮಿಯಲ್ಲಿ ಇವರಿಗೆ ನಮ್ಮ ಸಂಘದವರು ಸನ್ಮಾನ ಮಾಡುವ ಕಾಯ೯ಕ್ರಮದಲ್ಲಿ ನಾನು ಕೂಡ ಇದ್ದದ್ದು ನನ್ನ ಭಾಗ್ಯ ಎನ್ನಿಸಿದೆ.
ನೂರಾರು ಕಾಲ ಸುಖವಾಗಿ ಬಾಳಿ , ನಿಮ್ಮ ಇನ್ನೂ ಹಲವಾರು ಚಿತ್ರಗಳು ನೋಡವ ಭಾಗ್ಯ ನಮ್ಮದಾಗಲಿ ಹಾಗೂ ನಿಮ್ಮನ್ನು ಒಮ್ಮೆ ಭೇಟಿ ಮಾಡುವ ಅವಕಾಶ ಸಿಗಲಿ ಎಂದು ಕಾಯುವೆ… 🙏