( ಮುಂದುವರೆದ ಭಾಗ )
ಬದುಕಿದರೆ ಯಾರ ಹಂಗೂ ಇಲ್ಲದೆ ಸ್ವಪ್ರಯತ್ನದಿಂದ ಮುಂದೆ ಬರುವುದು ಕಷ್ಟವಲ್ಲ ಎಂದು ತೋರಿಸಿಕೊಟ್ಟ ಇಂಥಾ ನಟನರನ್ನು ಪಡೆದ ನಾವೇ ಧನ್ಯರು, ಎಷ್ಟೇ ವಷ೯ವಾದರೂ ಚಾಮಯ್ಯ ಮೇಷ್ಟ್ರು ಮತ್ತು ಕಸ್ತೂರಿ ನಿವಾಸ ರಾಮಯ್ಯ ಪಾತ್ರ ಜನಮಾನಸದಲ್ಲಿ ಉಳಿಯುತ್ತದೆ ಎಂದು ಹೇಳಿದರೆ ತಪ್ಪಾಗಲಾರದು.
ಇವರ ಚಿತ್ರರಂಗದ ಸೇವೆಗೆ ಹಲವಾರು ಪ್ರಶಸ್ತಿಗಳು ಲಭಿಸಿವೆ,
❤ಸತತ 50 ವಷ೯ಗಳ ಸೇವೆಯನ್ನು ಗುರುತಿಸಿ ತುಮಕೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ.
💜ಮೂರು ರಾಷ್ಟ್ರ ಪ್ರಶಸ್ತಿ ಕೂಡ ಪಡೆದಿದ್ದಾರೆ
💖ಡಾ.ರಾಜ್ ಕುಮಾರ್ ಪ್ರಶಸ್ತಿ
💛❤ಕನ್ನಡ ರಾಜ್ಯೋತ್ಸವ ಪ್ರಶಸ್ತಿ,
💕ಹಂಸರತ್ನ ಪ್ರಶಸ್ತಿ,
🌺ಸಾಥ೯ಕ ಸುವಣ೯ ಪ್ರಶಸ್ತಿ,
🍀ಏಳು ಬಾರಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಮೆದ್ರಾಸ್ ಫಿಲಂ ಫ್ಯಾನ್ಸ್ ಅಸೋಸಿಯೇಷನ್.
ಇಂಥ ಕಲಾವಿದರು ಈಗ ಬರುತ್ತಿರುವ ಹಲವಾರು ಹೊಸ ಕಲಾವಿದರಿಗೆ ಸ್ಪೂರ್ತಿ .
ಮೂಲತಃ ಇವರು ಮೈಸೂರಿನ ಹೊಳೇನರಸೀಪುರದವರು ಫುಡ್ ಇನ್ಸ್ಪೆಕ್ಟರ್, ಡೆಪ್ಯುಟಿ ಕಮಿಷನರ್ ಆಗಿ ಸೇವೆ ಸಲ್ಲಿಸಿದ್ದಾರೆ, ಬಹುಶಃ ಇವರ ಶಿಸ್ತು ಈ ಕೆಲಸದಿಂದ ಬಂದಿದೆ ಎಂಬ ನನ್ನ ಭಾವನೆ.
ಇನ್ನೂ ಇವರ ಸುಪುತ್ರರಾದ ಶಂಕರ್ ಅಶ್ವಥ್ ರವರು ತಂದೆ ಹೇಳಿ ಕೊಟ್ಟ ದಾರಿಯಲ್ಲಿ ನಡೆಯುತ್ತಿದ್ದಾರೆ, ಇವರು ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ, ಇವರ ಸಿನಿ ಮತ್ತು ಖಾಸಗಿ ಜೀವನದ ಪಯಣ ಚೆನ್ನಾಗಿ ಸಾಗಲಿ. ಮುಖಪುಟದಲ್ಲಿ ಗೆಳೆಯರಾದ ಮೇಲೆ ನಾನು ಅವರನ್ನು ಫೋನ್ ಮೂಲಕ ಸಂಪಕಿ೯ಸಿದಾಗ ಥೇಟ್ ತಂದೆಯ ಧ್ವನಿ ಅವರು ಮಾತಾಡೋದು, ಮೇಷ್ಟ್ರನ್ನ ನೋಡಿ ಕಣ್ತುಂಬಿಕೊಳ್ಳುವ ಭಾಗ್ಯ ನಮಗಿಲ್ಲ ಆದರೆ ಅವರ ಕುರಿತ ವಿಚಾರಗಳು ನಮಗೆ ತಿಳಿಯಲಿ.
ಇವರ ಜ್ನಾಪಕಾಥ೯ವಾಗಿ ಕೆಂಗೇರಿ ಸೆಟಲೈಟ್ ಟೌನಿನಲ್ಲಿ ಕೆ. ಎಸ್. ಅಶ್ವಥ್ ಸ್ಮರಣಾರ್ಥ ಮಕ್ಕಳ ಉದ್ಯಾನವನ್ನು ನಿಮಿ೯ಸಲಾಗಿದೆ.
“ಬಾನ ದಾರಿಯಲ್ಲಿ ಸೂಯ೯ ಜಾರಿ ಹೋದ
ಚಂದ್ರ ಮೇಲೆ ಬಂದ ಮಿನುಗುತಾರೆ ಅಂದ ನೋಡು ಎಂಥ ಚಂದ
ರಾತ್ರಿ ಆಯ್ತು ಮಲಗು ನನ್ನ ಪುಟ್ಟ ಕಂದ ನನ್ನ ಪುಟ್ಟ ಕಂದ “
ಮತ್ತೊಮ್ಮೆ ನಿಮ್ಮ ಆ ಶಿಸ್ತನ್ನು ನೋಡಬಯಸುವ ಅಭಿಮಾನಿ 🙏