ಸಾವ೯ಕಾಲಿಕ ಪೋಷಕ ನಟರು ಈ ಚಾಮಯ್ಯ ಮೇಷ್ಟ್ರು

ಸರಳತೆ, ಶ್ರಧ್ಧೆ, ಶಿಸ್ತು ಮೂಲಕ ಜೀವನ ಮಾಡಿ ತಮ್ಮ ಸ್ವಪ್ರಯತ್ನದಿಂದ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿ ಪೋಷಕ ಪಾತ್ರಗಳಲ್ಲಿ ಅತ್ಯುತ್ತಮ ಅಭಿನಯ ನೀಡಿದ ಚಾಮಯ್ಯ ಮೇಷ್ಟ್ರು ಅಲಿಯಾಸ್ ಕೆ ಎಸ್ ಅಶ್ವಥ್.

ಇವರ ಬಗ್ಗೆ ಹೇಳಲು ನಾನು ತುಂಬಾ ಚಿಕ್ಕವನು ಇಂಥ ಮಹಾನ್ ಕಲಾವಿದರ ಬಗ್ಗೆ ಬರೆಯಲು ಸ್ವಲ್ಪ ಕೈ ನಡುಗುತ್ತೆ ಯಾಕೇಳಿ ನಾಗರಹಾವು ಚಿತ್ರದ ಚಾಮಯ್ಯ ಮೇಷ್ಟ್ರು ಪಾತ್ರ ಮತ್ತು ಅವರ ಶಿಸ್ತಿನ ದೃಶ್ಯಗಳು ಕಣ್ಮುಂದೆ ಬರುತ್ತೆ.ಇವರು ಸರಿಸುಮಾರು 350 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ, ನೂರು ಚಿತ್ರದಲ್ಲಿ ಪೋಷಕ ಪಾತ್ರಗಳಲ್ಲಿ ತಮ್ಮ ನಟನೆಯನ್ನು ಮಾಡಿದ್ದಾರೆ,

ಮೇರು ಕಲಾವಿದರ ಜೊತೆ ತಮ್ಮ ತೆರೆಯನ್ನು ಹಂಚಿಕೊಂಡಿದ್ದಾರೆ, ಅವರಲ್ಲಿ ಡಾ. ರಾಜ್ ಕುಮಾರ್, ಡಾ. ವಿಷ್ಣು ವಧ೯ನ್, ಡಾ. ಅಂಬರೀಷ್, ಅನಂತ್ ನಾಗ್, ಡಾ. ಶಿವರಾಜ್ ಕುಮಾರ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್,ರಾಘವೇಂದ್ರ ರಾಜ್ ಕುಮಾರ್, ಶಂಕರ್ ನಾಗ್, ರಮೇಶ್ ಅರವಿಂದ್  ಇನ್ನೂ ಹಲವಾರು ಕಲಾವಿದರ ಜೊತೆ ಪಾತ್ರಕ್ಕೆ ತಕ್ಕ ಹಾಗೆ ತಮ್ಮ ನಟನಾ ಕೌಶಲ್ಯತೆಯನ್ನು ನೀಡಿದ್ದಾರೆ.

ಅಣ್ಣಾವ್ರ ಜೊತೆ ನಟಿಸಿದ ಚಿತ್ರಗಳಲ್ಲಿ ಕೆಲವು ಹೇಳುವುದಾದರೆ :-ಜಗಜ್ಯೋತಿ ಬಸವೇಶ್ವರ, ರಣಧೀರ ಕಂಠೀರವ, ಗಾಳಿಗೋಪುರ, ನಾಗಾಜು೯ನ, ಭಕ್ತ ಕನಕದಾಸ, ದಶಾವತಾರ, ಕಲಿತರು ಹೆಣ್ಣೆ, ವೀರ ಕೇಸರಿ, ಸಂತ ತುಕಾರಾಮ್, ಸತಿಶಕ್ತಿ, ಶ್ರೀ ರಾಮಾಂಜನೇಯ ಯುದ್ಧ, ಸತ್ಯ ಹರಿಶ್ಚಂದ್ರ, ಬೆಟ್ಟದ ಹುಲಿ, ಸಂಧ್ಯಾರಾಗ, ಜೇಡರ ಬಲೆ, ಇಮ್ಮಡಿ ಪುಲಿಕೇಶಿ, ಭಾಗ್ಯದ ಬಾಗಿಲು, ಚೂರಿಚಿಕ್ಕಣ್ಣ, ಕಸ್ತೂರಿ ನಿವಾಸ, ಸಿಪಾಯಿ ರಾಮು, ಜಗ ಮೆಚ್ಚಿದ ಮಗ, ಹೃದಯ ಸಂಗಮ,ಬಿಡುಗಡೆ,ದೂರದ ಬೆಟ್ಟ,  ಮೂರುವರೆ ವಜ್ರಗಳು, ಬಂಗಾರದ ಪಂಜರ, ಎರಡು ಕನಸು, ಮಯೂರ, ರಾಜ ನನ್ನ ರಾಜ, ಬಡವರ ಬಂಧು, ವಸಂತಗೀತ, ನೀ ನನ್ನ ಗೆಲ್ಲಲಾರೆ, ಹೊಸ ಬೆಳಕು, ಚಲಿಸುವ ಮೋಡಗಳು, ಕಾಮನ ಬಿಲ್ಲು, ಶ್ರಾವಣ ಬಂತು, ಅನುರಾಗ ಅರಳಿತು, ಜೀವನ ಚೈತ್ರ, ಒಡಹುಟ್ಟಿದವರು, ಶೃತಿ ಸೇರಿದಾಗ, ಧೃವತಾರೆ, ಜ್ವಾಲಾಮುಖಿ, ಭಾಗ್ಯದ ಲಕ್ಷ್ಮಿ ಬಾರಮ್ಮ, ದೇವತಾ ಮನುಷ್ಯ ಮತ್ತು ಶಭ್ಧವೇಧಿ.

ಹಾಸ್ಯ ಪಾತ್ರಗಳು ನಮಗೆ ಜ್ನಾಪಕ ಬರೋದು ಬಂಗಾರದ ಪಂಜರ, ಹೊಸ ಬೆಳಕು. ಅತ್ಯುತ್ತಮ ಪಾತ್ರ ಕಸ್ತೂರಿ ನಿವಾಸದ ಪೋಷಕ ಪಾತ್ರ (ನನಗೆ ಅನ್ನಿಸಿದ್ದು). ಯಜಮಾನ, ಮಾಲೀಕ ಪಾತ್ರ ಬಡವರ ಬಂಧು, ಅನುರಾಗ ಅರಳಿತು. ಅಚ೯ಕರ ಪಾತ್ರ ದೇವತಾ ಮನುಷ್ಯ.ಪೋಲಿಸ್ ಆಫೀಸರ್ ಮತ್ತು ಖಳನಾಯಕ ಪಾತ್ರ ಶಭ್ಧವೇಧಿ.

( ಮುಂದುವರೆಯುವುದು )

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply