ದಾಖಲೆ ಮೇಲೇ ದಾಖಲೆಗಳನ್ನ ಅತಿ ವೇಘವಾಗಿ, ಫ್ರೀ ಹಿಟ್ ನಲ್ಲಿ ಸಿಕ್ಸ್ಬಾರಿಸಿದಂತೆ, K.G.F- 2 ಸಿನಿಮಾದ ಟೀಸರ್ ಹೊಡೆದು ಧೂಳೆಬ್ಬಿಸಿದೆ, ಆ ಧೂಳು ಕೆಲವರ ಕಣ್ಣಿಗೆ ಬಿದ್ದ ಕಾರಣ ಅವರ ಕಣ್ಣುಗಳು ಸಧ್ಯಕ್ಕೆ ಕೆಂಪಾಗಿವೆ.. ಅದೇನೇ ಇರಲಿ ಇಂದು ಕೆಂಪಾದ ಅಂತ ಕಣ್ಣುಗಳಿಗೆ ಮತ್ತೊಂದು ವಿಷಯ ಗೋಚರಿಸಲಿದೆ. K.G.F ಸಿನಿಮಾದ ಬಳಿಕ ಹೊಂಬಾಳೆ ಫಿಲ್ಮ್ಸ್ ನ ಬ್ಯಾನ್ನರ್ ನಲ್ಲಿ ತಯಾರಾಗುತ್ತಿರೋ ಮತ್ತೊಂದು PAN ಇಂಡಿಯಾ ಸಿನಿಮಾ ” ಸಲಾರ್” ಚಿತ್ರದ ಮುಹೂರ್ತ ಇಂದು ಹೈದ್ರಾಬಾದನಲ್ಲಿ ನಡೆದಿದ್ದು, ಆ ಸಿನಿಮಾದ ಮುಹೂರ್ತಕ್ಕೆ ರಾಕಿಂಗ್ ಸ್ಟಾರ್ ಯಶ್ ಮುಖ್ಯ ಅತಿಥಿಯಾಗಿ ಪಾದಾರ್ಪಣೆ ಮಾಡಿರುವುದು ನಾಮಗೆಲ್ಲಾ ಹೆಮ್ಮೆಯ ವಿಷಯ. ತೆಲುಗಿನ ಪ್ರಭಾಸ್ ಅಭಿನಯದ ಈ ಸಿನಿಮಾಗೆ ಪ್ರಶಾಂತ್ ನೀಲ್ಸಾರಥಿಯಾಗಿದ್ದರೆ. ಸಿನಿಮಾನ ದೊಡ್ಡ ಮಟ್ಟದ್ದಲ್ಲಿ ತಯಾರಿಸಲು ನಿರ್ಧರಿಸಿದ್ದು, ಜಾಹೀರಾತುಗಳಲ್ಲಿ “ First Indian cinema” ಮೊದಲ ಭಾರತೀಯ ಸಿನಿಮಾ ಅಂತ ಘೋಷಿಸಲಾಗಿದೆ.
ಇನ್ನು ನಮ್ಮ ಕರ್ನಾಟಕದಲ್ಲಿಯು ಕೂಡ ಇಬ್ಬರು ಸೂಪರ್ ಸ್ಟಾರ್ ಪುತ್ರರ ಸಿನಿಮಾ ಚಾಲುವಾಗಿದೆ.
ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುತ್ರ jr ರೆಬೆಲ್ ಸ್ಟಾರ್ ಅಭಿಷೇಕ್ ಅವರ ಎರಡನೆ ಸಿನಿಮಾವಾದ “ಬ್ಯಾಡ್ಮಾನ್ನರ್ಸ್” ಮುಹೂರ್ತದ ಪೂಜೆ ಕೆಲಸ ಇಂದು ಚಾಮುಂಡೇಶ್ವರಿ ಬೆಟ್ಟದ್ದಲ್ಲಿಜರಗಿತು, ಸಿನಿಮಾದ ನಿರ್ದೇಶಕರಾದ ಸೂರಿ, ಸಂಭಾಷಣೆಕಾರರಾದ ಮಾಸ್ತಿ , ನಿರ್ಮಾಪಕ ಸುಧೀರ್ ಅವರ ಉಪಸ್ಥಿತಿಯೊಂದಿಗೆ ಸುಮಲತಾ, D Boss ಕೂಡ ಇದ್ದು ಇಡೀ ಸಿನಿಮಾಗೆ ತಂಡಕ್ಕೆ ಶುಭ ಕೋರಿ ಅಭಿಷೇಕ ರನ್ನ ಆಶೀರ್ವದಿಸಿದರು.
ಟೈಗರ್ ಪ್ರಭಾಕರ ಅವರ ಮಗ ವಿನೋದ್ ಪ್ರಭಾಕರ್ ಈಗ ಲಂಕಾಸುರ ಆಗಿದ್ದಾರೆ, ಕನ್ನಡದದಲ್ಲಿ ಮೊದಲು ಪರಿಪೂರ್ಣ Action-Drama ಸಿನಿಮಾಗಳ ಟ್ರೆಂಡ್ ಶುರು ಮಾಡಿದ್ದು ಪ್ರಭಾಕರ್ ಅವರೇ ಈಗ ಅಪ್ಪನ ಹಾದಿಯನ್ನ ಪಾಲಿಸಿ ಅವರ ಮಾದರಿಯ ಸಿನಿಮಾಗಳಲ್ಲಿ ತಾವು ಭಾಗಿಯಾಗಿದ್ದಾರೆ. ಲಂಕಾಸುರ ಸಿನಿಮಾದಲ್ಲಿ ಲೂಸ್ ಮಾದ ಯೋಗಿ ಕೂಡ ನಟಿಸಲಿದ್ದು ಹೊಸ ಪ್ರತಿಭಗಳತಂಡವಿದಾಗಿದೆ. ಪ್ರಮೋದ್ ಕುಮಾರ D.S ನಿರ್ದೇಶನವಿದ್ದು, ವಿಜೇತ ಕೃಷ್ಣ ಸಂಗೀತ ಸಂಯೋಜಿಸಿದ್ದು, ಹೇಮಾವತಿ ಮುನಿಸ್ವಾಮಿ ಎoಬವರು ಸಿನಿಮಾಗೆ ಹಣಾಹೂಡಿದ್ದಾರೆ.
ಎಲ್ಲಾ ಬೆಳವಣಿಗಿಗೆಗಳು ಕಂಡಿರುವ ಚಿತ್ರ ಪ್ರೇಮಿಗಳ ದಿಲ್ ಫುಲ್ಲ್ಕುಶ್ಶಾಗಿದೆ…