ಮ್ಯಾಚ್ ಟೈ ಆದ್ರೆ ಸೂಪರ್ ಓವರ್.
ಸೂಪರ್ ಓವರ್ ಕೂಡ ಟೈ ಆದ್ರೆ? ಇನ್ನೊಂದು ಸೂಪರ್ ಓವರ್.
ಎಲ್ಲೋ ಊಹೆಯಲ್ಲಿ ನಡೆಯಬಹುದೇನೋ ಅನ್ನುವಂತಹ ಇಂತಹ ಸಂದರ್ಭ ನಿನ್ನೆ ಎದುರಾಯ್ತು. ಹೌದು. ಕಿಂಗ್ಸ್ ಇಲೆವೆನ್ ಮತ್ತು ಮುಂಬೈ ತಂಡಗಳ ನಡುವೆ ನಡೆದ ನಿನ್ನೆಯ ಪಂದ್ಯ ಕೊನೆಯ ನಿಮಿಷದವರೆಗೂ ರೋಚಕವಾಗಿತ್ತು. ಐ ಪಿ ಎಲ್ ನ ಮೂವತ್ತಾರನೇ ಪಂದ್ಯದ ಕದನ ಕುತೂಹಲಕಾರಿಯಾಗಿತ್ತು.
ಮುಂಬೈ ತಂಡದ ರನ್ನುಗಳ ಗುರಿ ಪಡೆದ ಪಂಜಾಬ್ ಇನ್ನೇನು ಗೆದ್ದೇ ಬಿಡ್ತು ಅನ್ನುವಷ್ಟರಲ್ಲಿ ಕೆ.ಎಲ್. ರಾಹುಲ್ ನಿರ್ಗಮನದೊಂದಿಗೆ ಪಂದ್ಯ ನಿಧಾನವಾಗಿ ಕಿಂಗ್ಸ್ ಕೈಜಾರಿತು. ಕಡೆಗೂ ಪಂದ್ಯ ಟೈ ಆಯಿತು.
ಸೂಪರ್ ಓವರ್ ನಲ್ಲಿ ಮೊದಲ ಸೂಪರ್ ಓವರ್ ನಲ್ಲಿ ಕಿಂಗ್ಸ್ ತಂಡ ಮುಂಬೈ ತಂಡಕ್ಕೆ 6 ರನ್ ಗಳ ಗುರಿ ನೀಡಿತ್ತು. ಆದರೆ ಈ ಮುಂಬೈ ಕೂಡ ಐದು ರನ್ ಹೊಡೆಯುವುದರೊಂದಿಗೆ ಸೂಪರ್ ಓವರ್ ಟೈ ಆಯಿತು.
ಎರಡನೇ ಬಾರಿ ನಡೆದ ಸೂಪರ್ ಓವರ್ ನಲ್ಲಿ ಮುಂಬೈ ತಂಡ ಕಿಂಗ್ಸ್ ತಂಡಕ್ಕೆ 12 ರನ್ ಗಳ ಟಾರ್ಗೆಟ್ ನೀಡಿತು. ಮೊದಲೇ ಎಸತವನ್ನೇ ಸಿಕ್ಸರ್ ಬಾರಿಸಿದ ಗೇಲ್ ಮುಂಬೈ ಕಿಂಗ್ಸ್ ತಂಡದಲ್ಲಿ ಭರವಸೆಯನ್ನು ಮೂಡಿಸಿದರು. ಗೇಲ್ ಜೊತೆಗೂಡಿದ ಮಾಯಾಂಕ್ ಅಗರ್ವಾಲ್ ಸಹ ಎರಡು ಬೌಂಡರಿ ಹೊಡೆಯುವುದರೊಂದಿಗೆ ತಂಡವನ್ನು ವಿಜಯದತ್ತ ಕೊಂಡೊಯ್ದರು.
ಒಟ್ಟಿನಲ್ಲಿ, ನಿನ್ನೆಯ ಕಿಂಗ್ಸ್ ಹಾಗು ಮುಂಬೈ ನ ಆಟ ಕಡೆಯ ಎಸೆತದ ವರೆಗೂ ಉಸಿರನ್ನು ಬಿಗಿಹಿಡಿದು ನೋಡುವಂತಾಗಿತ್ತು. ಕನ್ನಡಿಗರಾದ ರಾಹುಲ್ ಮತ್ತು ತಂಡದ ಕೋಚ್ ಕುಂಬ್ಳೆ ಮುಖದಲ್ಲಿ ಸಮಾಧಾನದ ಸಂತಸದ ನಗು ಮೂಡಿಸಿತು.