“ಸೆಂನ್ಸೇಷನಲ್ “ಡೈರೆಕ್ಟರ್ ಮಣಿ ರತ್ನಂ ಬತ್೯ಡೇ ಸ್ಪೆಷಲ್ 💐💙🎩💐

mani ratnam

ಭಾರತ ಚಿತ್ರರಂಗದಲ್ಲಿ ತಮ್ಮದೇ ಆದ ಕ್ಷೇತ್ರದಲ್ಲಿ ಹೆಸರು ಮಾಡಿದ ಇಬ್ಬರು ಮಹಾನ್ ದಿಗ್ಗಜರ ಜನುಮ ದಿನ ಇಂದು, ಅವರಿಗೆ ಶುಭಾಶಯಗಳು ಹೇಳೋಣ. ಹೆಸರಾಂತ ನಿದೇ೯ಶಕರು ಶ್ರೀ. ಮಣಿರತ್ನಂ, ಹೆಸರಾಂತ ಸಂಗೀತ ನಿರ್ದೇಶಕರು ಸಾವಿರದ ಸರದಾರ ಇಳಯರಾಜ

“ನಗೂ ಎಂದಿದೆ ಮಂಜಿನ ಬಿಂದು ನಲೀ ಎಂದಿದೆ ಗಾಳಿ ಇಂದೂ “

ಈ ಸಾಲು ಕೇಳೋವಾಗ ನಮಗೆ ನೆನಪಿಗೆ ಬರುವ ಚಿತ್ರ “ಪಲ್ಲವಿ ಅನುಪಲ್ಲವಿ ” ಇದರ ನಿದೇ೯ಶಕರು ಭಾರತ ಚಿತ್ರರಂಗದಲ್ಲಿ ಹೆಸರು ಮಾಡಿದ ಮಣಿರತ್ನಂ ರವರು, ಮೊದಲು ಕನ್ನಡ ಚಿತ್ರ ನಿದೇ೯ಶನ ಮಾಡಿರೋದು ಹೆಮ್ಮೆಯ ವಿಚಾರ.

ನಂತರ ಇವರು ನಿದೇ೯ಶಿಸಿದ ಚಿತ್ರಗಳು ಒಂದಕ್ಕಿಂತ ಒಂದು ಸೂಪರ್ ಹಿಟ್ ಆಗಿದೆ. ಮೌನರಾಗಂ, ಪಗಲ್ ನಿಲವು, ನಾಯಕನ್, ರೋಜಾ, ಬಾಂಬೆ, ಅಗ್ನಿ ನಚತ್ರಂ, ಗೀತಾಂಜಲಿ, ಅಂಜಲಿ, ತಳಪತಿ, ತಿರುಡ ತಿರುಡ, ಇರುವರ್, ದಿಲ್ ಸೆ, ಅಲೈಪಾಯುದೆ, ಕಣ್ಣತ್ತಿಲ್ ಮುತ್ತಮಿಟ್ಟಾಳ್, ಆಯುಧ ಎಳುತ್ತು, ಯುವ, ಗುರು, ರಾವಣ್, ಕಡಲ್, ಒ ಕಾದಲ್ ಕಣ್ಮಣಿ, ಕಾಟ್ರು ವೆಳಿಯಿಡೈ, ಚೆಕ್ಕ ಚಿವಂದ ವಾನಂ ಮುಂತಾದ ಚಿತ್ರಗಳು.

ಇವರ ವಿಶೇಷತೆ ಯಾವುದೇ ಚಿತ್ರಗಳಲ್ಲಿ ನೈಜ ಘಟನೆಗಳನ್ನು, ಕುಟುಂಬದ ಹೊಣೆಯೊತ್ತಿರುವ ವಿಚಾರವನ್ನು, ಪ್ರೇಮ ಕಾವ್ಯವನ್ನು ಜನರಿಗೆ ತಿಳಿಸುವುದು. ಪ್ರೇಮಕ್ಕೂ ದೊಡ್ಡ ದೊಡ್ಡ ಘಟನೆಗೂ ಕಥೆ ಇಟ್ಟಿರುವುದು.

ಇವರು ಹಲವಾರು ನಾಯಕರುಗಳ ಜೊತೆ ಕೆಲಸ ಮಾಡಿದ್ದಾರೆ ರಜನಿಕಾಂತ್,ಮಮ್ಮೂಟಿ,ಕೋಕಿಲಾ ಮೋಹನ್, ಅನಿಲ್ ಕಪೂರ್, ಮೋಹನ್ ಲಾಲ್, ಕಮಲ್ ಹಾಸನ್, ಅರವಿಂದ್ ಸ್ವಾಮಿ, ನಾಗಾಜು೯ನ, ಕಾತಿ೯ಕ್, ಅಭಿಷೇಕ್ ಬಚ್ಚನ್, ವಿಜಯ್ ಸೇತುಪತಿ, ಪ್ರಕಾಶ್‌ ರಾಜ್, ಅರುಣ್ ವಿಜಯ್, ಸಿಲಂಬರಸನ್, ಜಯಂ ರವಿ ಇನ್ನೂ ಹಲವು ನಾಯಕರು.

ನಾಯಕಿರು ರೇವತಿ, ಮಧುಬಾಲ,ಮನಿಷಾ ಕೋಯ್ರಾಲ, ಐಶ್ವರ್ಯ ರೈ, ಅದಿತಿ ರಾವ್ ಹೈದರಿ, ತ್ರಿಶಾ, ಶಾಲಿನಿ, ಐಶ್ವರ್ಯ ರಾಜೇಶ್, ಜ್ಯೋತಿಕ, ಲಕ್ಷ್ಮಿ, ಶರಣ್ಯ ಮತ್ತಿತರರು.

ನಾಯಕನ್ ಚಿತ್ರದ ಕಮಲ್ ಹಾಸನ್ ನಟನೆ ಮರೆಯಲಾಗದು, ಮೌನ ರಾಗಂ ಚಿತ್ರದ ಪ್ರತಿಯೊಬ್ಬರ ಪಾತ್ರ ಮರೆಯಲಾಗದು. ರೋಜಾ ಚಿತ್ರದ ಅರವಿಂದ್ ಸ್ವಾಮಿ ಪಾತ್ರ ಕಣ್ಣು ಕಟ್ಟಿದ ಹಾಗಿದೆ, ಗೀತಾಂಜಲಿ ಚಿತ್ರದ ಪ್ರೇಮ ಕಾವ್ಯ ಪಾತ್ರಗಳು ಮರೆಯಲಾಗದು, ಅಂಜಲಿ ಚಿತ್ರದ ಬೇಬಿ ಶ್ಯಾಮಿಲಿ ಪಾತ್ರನೂ ಸಹ ಹೇಳ್ತಾ ಹೋದ್ರೆ ಸಮಯ ಸಾಲೋಲ್ಲ.

ಇವರ ಮತ್ತೊಂದು ವಿಶೇಷವೆಂದರೆ ಚಿತ್ರಕ್ಕೆ ಸಂಗೀತ ನೀಡಿದ ಎ. ಆರ್. ರಹಮಾನ್ , ಇಳಯರಾಜ ಇದ್ದೇ ಇರುತ್ತಾರೆ, ಪ್ರತಿಯೊಂದು ಹಾಡಿನ ಚಿತ್ರೀಕರಣ, ಚಿತ್ರೀಕರಣ ನಡೆಯುವ ಸ್ಥಳಗಳು ಒಬ್ಬ ಪ್ರಸಿದ್ಧ ನಿದೇ೯ಶಕರಿಗೆ ಬೇಕಾದಂತ ಚಾಣಾಚಕ್ಷತೆ ಇವರಲ್ಲಿದೆ.

ಇನ್ನೂ ಇವರು ಮದುವೆಯಾಗಿರುವುದು ಬಂಧನ, ಸುಪ್ರಭಾತ, ಅಮೃತವಷಿ೯ಣಿ ಚಿತ್ರದಲ್ಲಿ ನಟಿಸಿದ ಅತ್ಯುತ್ತಮ ನಟಿ ಸುಹಾಸಿನಿ ರವರನ್ನು, ಇವರಿಗೆ ಒಬ್ಬ ಮಗನಿದ್ದಾರೆ.

ಇವರ ಚಿತ್ರರಂಗದ ಯಶಸ್ಸಿಗೆ ಪ್ರಶಸ್ತಿಗಳ ಸರಮಾಲೆಯೇ ಇದೆ.

*ಬಾಂಬೆ ಅತ್ಯುತ್ತಮ ಚಿತ್ರ ಫಿಲಂ ಫೇರ್ ಪ್ರಶಸ್ತಿ

*ಸಾಥಿಯ ಚಿತ್ರಕ್ಕೆ ಅತ್ಯುತ್ತಮ ಚಿತ್ರಕಥೆ ಫಿಲಂ ಫೇರ್ ಪ್ರಶಸ್ತಿ.

*ಯುವ ಚಿತ್ರಕ್ಕೆ ಅತ್ಯುತ್ತಮ ಚಿತ್ರ ಕಥೆ ಫಿಲಂ ಫೇರ್ ಪ್ರಶಸ್ತಿ.

*ಫಿಲಂ ಫೇರ್ ಪ್ರಶಸ್ತಿ ದಕ್ಷಿಣ ಭಾಗ

*ಮೌನರಾಗಂ ಅತ್ಯುತ್ತಮ ನಿದೇ೯ಶಕರು

*ಗೀತಾಂಜಲಿ ಅತ್ಯುತ್ತಮ ನಿದೇ೯ಶಕರು

*ಅಂಜಲಿ ಅತ್ಯುತ್ತಮ ನಿದೇ೯ಶಕರು

*ಬಾಂಬೆ ಅತ್ಯುತ್ತಮ ನಿದೇ೯ಶಕರು

*ಕಣ್ಣತ್ತಿಲ್ ಮುತ್ತಮಿಟ್ಟಾಳ್ ಅತ್ಯುತ್ತಮ ನಿದೇ೯ಶಕರು.

*ಪಲ್ಲವಿ ಅನುಪಲ್ಲವಿ ಅತ್ಯುತ್ತಮ ಚಿತ್ರಕಥೆಗೆ ಕನಾ೯ಟಕ ಸಕಾ೯ರದ ಪ್ರಶಸ್ತಿ ಲಭಿಸಿದೆ.

ರಾಷ್ಟ್ರೀಯ ಪುರಸ್ಕಾರಗಳು

#ಮೌನರಾಗಂ(ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರ ,         

# ಗೀತಾಂಜಲಿ (ಅತ್ಯುತ್ತಮ ಮನರಂಜನಾ ಚಲನಚಿತ್ರ),         

#ಅಂಜಲಿ(ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರ ,

#ರೋಜಾ(ರಾಷ್ಟ್ರೀಯ ಭಾವೈಕತೆ ಸಾರುವ ಅತ್ಯುತ್ತಮ ಚಲನಚಿತ್ರ),

#ಬಾಂಬೆ (ರಾಷ್ಟ್ರೀಯ ಭಾವೈಕ್ಯತೆ ಸಾರುವ ಚಲನಚಿತ್ರ)

#ಭಾರತ ಸರ್ಕಾರದಿಂದ ಪದ್ಮಶ್ರೀ ಗೌರವ ನೀಡಿದ್ದಾರೆ.

ಇವಲ್ಲದೆ ವಿದೇಶದಿಂದ ಮತ್ತು ಖಾಸಗಿ ಸಂಸ್ಥೆಗಳು ನೀಡುವ ಪ್ರಶಸ್ತಿಗಳು ಇವರನ್ನು ಹರಸಿ ಬಂದಿವೆ.

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply