ನರೇಶ್ ಭಟ್ – ಆಕ್ಟ್ 1978 ಮೂಲಕ ಅಪಾರ ಜನಗಳ ಬಾಯಲ್ಲಿ ಮನೆಮಾತಾದ ಹೆಸರು. ಮೂಲತಃ ಕುಂದಾಪುರದ ಈ ಭಟ್ರು ರಂಗಭೂಮಿಯಿಂದ ಕಲಿತು ಬಂದವರು. ಶಾಲಾ ದಿನಗಳಿಂದಲೂ ನಾಟಕ, ಕಲೆ ಗಳ ಮೇಲೆ ಆಸಕ್ತಿ. ಬೆಂಗ್ಳೂರಿಂಗೆ ಬಂಡ ಮೇಲಂತೂ ಸಿಕ್ಕ ಅವಕಾಶಗಳನ್ನು ಒಂದನ್ನೂ ಬಿಡದೆ ಚಾಲೆಂಜ್ ಆಗಿ ಸ್ವೀಕರಿಸಿ, ಸ್ವಲ್ಪ ಸಮಯದಲ್ಲೇ ಸಾಧಿಸಿ ತೋರಿಸಿದವರು. ಆಮೇಲೆ ಒಂದಷ್ಟು ಶಾರ್ಟ್ ಫಿಲಂ ಗಳನ್ನೂ ಮಾಡಿದ್ದಾರೆ. ಕೆಲವು ಶಾರ್ಟ್ ಫಿಲಂ ಗಳು ಅಂತಾರಾಷ್ಟ್ರೀಯ ಕಿರುಚಿತ್ರ ಚಿತ್ರೋತ್ಸವಗಳಿಗೂ ಸೆಲೆಕ್ಟ್ ಆಗಿವೆ. ಸಿನಿಮಾ ಇಂಡಸ್ಟ್ರಿ ಗೆ ಬರಲು ಗಾಡ್ ಫಾದರ್ ಬೇಕಿಲ್ಲ. ಸ್ವಂತ ಪ್ರತಿಭೆಯಿದ್ದರೆ ಸಾಕು ಅನ್ನುವ ನೂರಾರು ಉದಾಹರಣೆಗಳನ್ನು ನಾವು ನೋಡಿದ್ದೇವೆ. ನೂರಾ ಒಂದನೇ ಉದಾಹರಣೆ – ಈ ನಮ್ಮ ನರೇಶ್ ಭಟ್ರು.
ಚಿತ್ರೋದ್ಯಮದ ಘನಶ್ಯಾಮ್ ಜೊತೆ ನಡೆದ ಒಂದು ಕಿರು ಸಂದರ್ಶನ.
ಚಿತ್ರೋದ್ಯಮ: ಸಿನಿ ಜಗತ್ತಿಗೆ ನಿಮ್ಮ ಎಂಟ್ರಿ ಆಗಿದ್ದು ಹೇಗೆ ಸರ್?
ನರೇಶ್ ಭಟ್ : ಮುಂಚಿನಿಂದಲೂ ನನಗೆ ಶಾರ್ಟ್ ಫಿಲಂ ಗಳ ಹುಚ್ಚು. ತುಂಬಾನೇ ಶಾರ್ಟ್ ಮೂವೀಸ್ ಮಾಡಿದ್ದೆ. ಹೀಗೆ ಯಾವುದೊ ಶಾರ್ಟ್ ಮೂವಿಯಲ್ಲಿ ನನ್ನ ಪರ್ಫಾರ್ಮೆನ್ಸ್ ನೋಡಿದ ಮಂಸೋರೆ ಅವರು ನನಗೆ ಅವಕಾಶ ಕೊಟ್ರು.
ಚಿತ್ರೋದ್ಯಮ: ನೀವು ಕುಂದಾಪುರದ ಕಡೆಯವರು ಅಂತ ಕೇಳಿದ್ವಿ. ಸಿನಿ ರಂಗದಲ್ಲಿ ಗಾಡ್ ಫಾದರ್ ಅಂತ ಯಾವುದೇ ಕಾನ್ಸೆಪ್ಟ್ ಇಲ್ಲದೆ ಸ್ವಂತ ಪ್ರಯತ್ನದಿಂದ ನೆಲೆ ಕಂಡುಕೊಳ್ತಾ ಇದ್ದೀರಾ. ನಟನೆಯ ಕಡೆ ಒಲವು ಬಂದದ್ದು ಹೇಗೆ?
ನರೇಶ್ ಭಟ್ : ಚಿಕ್ಕಂದಿನಿಂದಲೂ ನನಗೆ ನಾಟಕಗಳೆಂದರೆ ಪ್ರಾಣ. ಸ್ಕೂಲ್ ಟೈಮ್ ಅಲ್ಲಿ ಕೂಡ ನಮ್ಮದೇ ಒಂದು ತಂಡ ಕಟ್ಕೊಂಡು ನಾಟಕಗಳನ್ನು ಮಾಡ್ತಾ ಇದ್ವಿ. ಆಮೇಲೆ ಒಂದಷ್ಟು ಶಾರ್ಟ್ ಫಿಲಂಸ್ ಗಳನ್ನೂ ಮಾಡಿದ್ದೆ.ಆಮೇಲೆ ರಾಜಧಾನಿಗೆ ಎಂಟ್ರಿ ಆದಮೇಲೆ ಇಲ್ಲಂತೂ ತುಂಬಾ ರಂಗಭೂಮಿಯ ಅವಕಾಶಗಳು ಸಿಕ್ಕಿದವು. ದೃಶ್ಯ ಅನ್ನುವ ಒಂದು ರಂಗಭೂಮಿಯ ತಂಡದ ಜೊತೆ ಸೇರಿ ರಂಗಭೂಮಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡೆ.
ಚಿತ್ರೋದ್ಯಮ: ಆಕ್ಟ್ 1978 ರಲ್ಲಿ ನಿಮ್ಮ ನಟನೆಗಂತೂ ಫಿದಾ ಆಗದವರೇ ಇಲ್ಲ ಅನ್ನಬಹುದು. ಆ ಸಿನಿಮಾದ ಶೂಟಿಂಗ್ ನ ಅನುಭವಗಳ ಬಗ್ಗೆ ಹೇಳ್ತೀರಾ ಪ್ಲೀಸ್?
ನರೇಶ್ ಭಟ್ : ಆಕ್ಟ್ ಸಿನಿಮಾದ ಅನುಭವದ ಬಗ್ಗೆ ಹೇಳೋಕೆ ಆಗಲ್ಲ. ಅಂತಹ ಸೂಪರ್ ಅನುಭವ ಅದು. ಸರಿಸುಮಾರು ಹದಿನೈದು ದಿನಗಳ ಕಾಲ ನನ್ನ ಶೂಟಿಂಗ್ ಇತ್ತು. ಮೈಸೂರು ಸುತ್ತಮುತ್ತ ಶೂಟಿಂಗ್. ಮಂಸೋರೆ ಅವರಂತಹ ನಿರ್ದೇಶಕರಿದ್ರೆ ಕಲಾವಿದರಿಗೆ ಯೋಚನೆ ಮಾಡುವ ಮಾತೆ ಇಲ್ಲ. ಕೆಲಸದಲ್ಲಿ ತುಂಬಾ ಶಿಸ್ತು ಮತ್ತು ಶ್ರದ್ದೆ. ಸಿನಿಮಾ ಕೂಡ ಚನ್ನಾಗಿ ಬಂತು. ಜನ ತುಂಬಾ ಪಾಸಿಟಿವ್ ಆಗಿ ತಗೊಂಡ್ರು. ಜನರಿಗೆ ಇಷ್ಟವಾದ್ರೆ ಸಾಕು ಸಾರ್. ನಮ್ಮ ಶ್ರಮ ಸಾರ್ಥಕ.
ಚಿತ್ರೋದ್ಯಮ: ಈಗ ಬೇರೆ ಕೈಲಿರುವ ಪ್ರಾಜೆಕ್ಟ್ ಗಳು ಯಾವ್ಯಾವು ಸರ್?
ನರೇಶ್ ಭಟ್ : ಈಗ ತೂತು ಮಡಿಕೆ ಅಂತ ಒಂದು ಸಿನಿಮಾ ಬರ್ತಿದೆ. ಬಹುತೇಕ ಶೂಟಿಂಗ್ ಕೆಲಸ ಎಲ ಮುಗಿದಿದೆ. ಸ್ವಲ್ಪ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೀತಾ ಇದೆ. ಎಲ್ಲಾ ನಾವಂದುಕೊಂಡಂತೆ ನಡೆದರೆ ಇಷ್ಟರಲ್ಲೇ ಸಿನಿಮಾ ಬಿಗ್ ಸ್ಕ್ರೀನ್ ಅಲಿ ರಿಲೀಸ್ ಆಗುತ್ತೆ. ಇದು ಒಂದು ಡಿಫರೆಂಟ್ ಸ್ಟೋರಿ. ಜನಕ್ಕೆ ಖಂಡಿತಾ ಇಷ್ಟ ಆಗುತ್ತೆ ಅಂತ ನಂಬಿದೀನಿ.
ಯುಗಾದಿ ನರೇಶ್ ಭಟ್ ರವರಿಗೆ ಇನ್ನಷ್ಟು ಅವಕಾಶಗಳನ್ನು ಕೊಡಲಿ. ಆ ಅವಕಾಶಗಳೆಲ್ಲಾ ಪಾಸಿಟಿವ್ ಆಗಿ ಕನ್ವರ್ಟ್ ಆಗಿ ಅತಿ ದೊಡ್ಡ ಸಕ್ಸಸ್ ಸಿಗಲಿ ಅಂತ ಚಿತ್ರೋದ್ಯಮ ತಂಡದ ಹಾರೈಕೆ.