ಸೆಲೆಬ್ರೇಟ್ ಯುಗಾದಿ ವಿಥ್ ಸೆಲೆಬ್ರಿಟಿ – ಶಿವಣ್ಣ

shivanna

ಬೆಂಗಳೂರಿನ ಹೊರವಲಯದಲ್ಲಿ “ಶಿವಪ್ಪ” ಸಿನಿಮಾ ಶೂಟಿಂಗ್ ನಡೆಯುತ್ತಿತ್ತು. ಚಿತ್ರೋದ್ಯಮ ತಂಡದ ವರದಿಗಾರ ಘನಶ್ಯಾಮ್ ಅವರು ಶೂಟಿಂಗ್ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ ಶಿವಣ್ಣನವರನ್ನು ಮಾತನಾಡಿಸಿ ಬಂದರು. ನಮಗೆಲ್ಲಾ ತಿಳಿದಂತೆ ಶಿವಣ್ಣ ಸ್ವಲ್ಪವೂ ಅಹಂ ಇಲ್ಲದ ವ್ಯಕ್ತಿ. ಚಿತ್ರೋದ್ಯಮದ ಘನಶ್ಯಾಮ್ ಅವರನ್ನು ಪ್ರೀತಿಯಿಂದ ಮಾತನಾಡಿಸಿ ಆಶೀರ್ವದಿಸಿದರು. ಶಿವಣ್ಣ ಚಿತ್ರವು ಮತ್ತೊಂದು ಓಂ ಸಿನಿಮಾದಂತೆ ಅಗಾಧ ಜನಮನ್ನಣೆ ಪಡೆಯಲಿ ಎಂಬುದು ಚಿತ್ರೋದ್ಯಮ.ಕಾಂ ತಂಡದ ಹಾರೈಕೆ. ಘನಶ್ಯಾಮ್ ಅವರು ಶಿವಣ್ಣ ಜೊತೆ ನಡೆಸಿದ ಒಂದು ಕಿರು ಸಂದರ್ಶನ:
ಚಿತ್ರೋದ್ಯಮ: ಆನಂದ್ ಸಿನಿಮಾ ದಲ್ಲಿ ನಾವು ನೋಡಿದ ಶಿವಣ್ಣನಿಗೂ ಇಂದು ನೋಡುತ್ತಿರುವ ಶಿವಣ್ಣನಿಗೂ ಯಾವುದೇ ವ್ಯತ್ಯಾಸವಿಲ್ಲ ಇಷ್ಟು ವರ್ಷಗಳೇ ಕಳೆದರೂ, ಇಂದಿಗೂ ಕೂಡ ಅದೇ ಎನರ್ಜಿ, ಅದೇ ಚಾರ್ಮ್, ಅದೇ ಶಿಸ್ತು. ಇಷ್ಟು ವರ್ಷಗಳ ಕಾಲ ನಿರಂತರವಾಗಿ ಶಿಸ್ತನ್ನು ಕಾಪಾಡಿಕೊಂಡು ಬಂದಿದ್ದೀರಿ ಇದರ ಸೀಕ್ರೆಟ್ ಏನು?
ಶಿವಣ್ಣ : ಇದೆಲ್ಲಾ ನಮ್ಮ ತಂದೆಯವರ ಬಳುವಳಿ. ಅವರಿಂದ ಕಲಿತದ್ದು ಶಿಸ್ತು. ಅಷ್ಟೇ ಅಲ್ಲದೆ ಸಿನಿಮಾ ರಂಗದಲ್ಲಿ ನಿತ್ಯ ಸಾವಿರಾರು ಅಭಿಮಾನಿಗಳನ್ನು ಭೇಟಿ ಮಾಡ್ತಾ ಇರ್ತೀವಿ. ಹೀಗಾಗಿ ನಾವು ಅವರೆಲ್ಲರೊಡನೆ ಪ್ರೀತಿಯಿಂದ ಇರಲೇಬೇಕಾಗುತ್ತದೆ ಅಭಿಮಾನಿಗಳು ತೋರಿಸುವ ಪ್ರೀತಿ ಅಭಿಮಾನ ನಮಗೆ ಶಿಸ್ತನ್ನು ನಿರಂತರವಾಗಿ ಕಾಪಾಡಿಕೊಂಡು ಹೋಗುವಂತೆ ಪ್ರೇರಣೆ ಕೊಡುತ್ತದೆ

ಚಿತ್ರೋದ್ಯಮ : “ಶಿವಣ್ಣ” ಸಿನಿಮಾದ ಬಗ್ಗೆ ಹೇಳಿ ಸರ್
ಶಿವಣ್ಣ : ಇದರಲ್ಲಿ ನನಗೆ ಒಂದು ವಿಶೇಷವಾದ ಪಾತ್ರ. ಇಡೀ ತಂಡ ಕರೋನ ಸಂಕಷ್ಟ ಸಮಯದಲ್ಲಿ ಬಹಳ ಕಷ್ಟಪಟ್ಟು ಕೆಲಸ ಮಾಡಿದ್ದಾರೆ ಸಿನಿಮಾ ಕೂಡ ತುಂಬಾ ಚೆನ್ನಾಗಿ ಮೂಡಿಬರುತ್ತಿದೆ ದಯವಿಟ್ಟು ನೋಡಿ.

ಶಿವಣ್ಣನವರ ಸಾಮಾಜಿಕ ಕಳಕಳಿಯ ಬಗ್ಗೆಯಂತೂ ಎಷ್ಟು ಹೇಳಿದರೂ ಸಾಲದು. ಮಾಸ್ಕ್ ಧರಿಸಿ. ಸುರಕ್ಷಿತವಾಗಿರಿ. ಎಲ್ಲರಿಗೂ ಅರೋಗ್ಯ ಕಾಪಾಡಿಕೊಳ್ಳುವುದನ್ನು ತಿಳಿಸಿ ಎಂದು ಪದೇ ಪದೇ ನೆನಪಿಸಿಕೊಟ್ಟರು. ಅಸಂಖ್ಯಾತ ಶಿವಣ್ಣನ ಅಭಿಮಾನಿಗಳಲ್ಲಿ ಚಿತ್ರೋದ್ಯಮ.ಕಾಂ ನ ಮನವಿ ಇಷ್ಟೇ – ಶಿವಣ್ಣ ಹೇಳಿದಂತೆ ಆರೋಗ್ಯವೇ ಮಹಾಭಾಗ್ಯ. ಸಾಮಾಜಿಕ ಅಂತರ ಗಮನದಲ್ಲಿರಲಿ. ಮಾಸ್ಕ್ ಧರಿಸಿ. ಸುರಕ್ಷಿತವಾಗಿರಿ. ಪ್ಲವ ಸಂವತ್ಸರವು ಶಿವಣ್ಣನವರಿಗೆ ಇನ್ನೂ ಹೆಚ್ಚಿನ ಯಶಸು ತಂದುಕೊಡಲಿ ಎಂಬುದೇ ಆ ದೇವರಲ್ಲಿ ಚಿತ್ರೋದ್ಯಮ.ಕಾಂ ತಂಡದ ಪ್ರಾರ್ಥನೆ.

P. Ghanashyam

P. Ghanashyam

ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ. ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply