( ಮುಂದುವರೆದ ಭಾಗ )
ಜೊತೆಯಲ್ಲಿ ಇಬ್ಬರೂ ಕೂಡಿ ಹಾಡುವ “ನಾನು ನಾನು ನೀನು ಹಾಲು ಜೇನು ” ಸುಂದರ ಹಾಡಿನ ಜೊತೆ ಅಮೋಘ ನೃತ್ಯ. ಮಾಧವಿ ರವರಿಗೆ ಮಕ್ಕಳಿರುತ್ತೆ ಆದರೆ ಎರಡನೇ ನಾಯಕಿಗೆ ಕಾರಣಾಂತರದಿಂದ ಮಕ್ಕಳಿರುವುದಿಲ್ಲ, ಶ್ರೀಮಂತ ಮನೆತನದವರು ಸಾಮಾನ್ಯರಾಗಿ ಜೀವಲು ಇಷ್ಟವಿರುವುದಿಲ್ಲ.

ಇದೇ ಸಂಧಭ೯ದಲ್ಲಿ ಬಾಲಣ್ಣರವರು ಇವರ ಸಂಸಾರದಲ್ಲಿ ಹುಳಿ ಹಿಂಡುವ ಯತ್ನ ನಂತರ ಅಂಬರೀಷ್ ರವರಿಗೆ ತಾನು ಶ್ರೀಮಂತ ಮನೆತನದವಳು ತನಗೆ ಬೇಕಾದನ್ನು ಕೊಡಿಸಬೇಕೆಂದು ಒತ್ತಾಯ ಮಾಡಿ ತಮಗೆ ಬೇಕಾದ್ದನ್ನು ಪಡೆದುಕೊಳ್ಳಲು ಆಡುವ ನಾಟಕ ಸನ್ನಿವೇಶ. ತಂದೆಗೆ ಮನೆಯ ಸಂಸಾರ ಯಾವುದೇ ಕಾರಣಕ್ಕೂ ಒಡೆಯಬಾರದು, ಇಬ್ಬಾಗವಾಗಬಾರದು ಎಂದು ಅಣ್ಣಾವ್ರ ಹತ್ತಿರ ಭಾಷೆ ಪಡೆದು ತೀರಿಹೋಗುವ ಪ್ರಸಂಗ. ತಂದೆಗೆ ಕೊಟ್ಟ ಮಾತಿನಂತೆ ಸಂಸಾರ ಯಾವುದೇ ರೀತಿಯಲ್ಲಿ ಬೇರಾಗದಂತೆ ನೋಡಿಕೊಳ್ಳುವ ಮಾತನ್ನು ಕಾಪಾಡಿಕೊಳ್ಳಲು ಮಾಡಿದ ತ್ಯಾಗದ ಮನೋಘ್ನ ಅಭಿನಯ ನಮ್ಮ ದೇವ್ರದು.
ಹೀಗೆ ತಮ್ಮ ಕೆಲಸದ ನಿಮಿತ್ತ ಹೊರಗೆ ಹೋದಾಗ ಹೆಂಡತಿ ಶ್ರೀಶಾಂತಿ ಹೇಗಾದರೂ ಮಾಡಿ ತಾನು ಶ್ರೀಮಂತದ ಮನೆಯವಳು ಹಾಗೆಯೇ ಇರಬೇಕೆಂದು ಭಾಗ ಕೇಳಿದಾಗ ಅಣ್ಣಾವೃ ಒಪ್ಪದೆ ನಂತರ ಪಂಚಾಯ್ತಿ ಯಲ್ಲಿ ನಿಧಾ೯ರ ಮಾಡಲು ಬಂದಾಗ ಕೂಡ ಅವರ ಆಣತಿಯಂತೆ ತಮ್ಮ ಇಡೀ ಕುಟುಂಬದವರ ಜೊತೆ ಮನೆ ಬಿಟ್ಟು ಹೋಗೋ ಪ್ರಸಂಗ. ತಮ್ಮ ಬಂದಾಗ ವಿಷಯ ತಿಳಿದು ತನ್ನ ಹೆಂಡತಿ ಮಾಡಿದ ನೀಚ ಕೃತ್ಯಕ್ಕೆ ಬಂದು ಹೊಡೆದು ತನ್ನ ಅಣ್ಣ ಅತ್ತಿಗೆ ಮತ್ತು ಮಕ್ಕಳನ್ನು ಹುಡುಕಿಕೊಂಡು ಕೊನೆಯಲ್ಲಿ ಮನೆಗೆ ಕರೆಯುವ ಪ್ರಸಂಗ ಕೆಟ್ಟ ಸನ್ನಿವೇಶ ನಿಮಾ೯ಣ ಮಾಡಿದ ಬಾಲಣ್ಣ ರವರಿಗೆ ಊರಿನ ಜನರು ಸರಿಯಾದ ಶಾಸ್ತಿ ಮಾಡುವ ಸನ್ನಿವೇಶ ಕೊನೆಯಲ್ಲಿ ಊರಿನ ಜನರು ತಮ್ಮ ಆಸೆ ಅಣ್ಣಾವೃ ಊರಿಗೆ ಬರಲು ಒಪ್ಪುವುದು.
ಇನ್ನೂ ಎಲ್ಲಾ ಹಾಡುಗಳೂ ಕೇಳೋಕೆ ಇಂಪಾಗಿದೆ, ಅಣ್ಣಾವ್ರ ವಸ್ತ್ರ ವಿನ್ಯಾಸ ನೋಡುಗರಿಗೆ ತುಂಬಾ ಇಷ್ಟವಾಗುವುದು, ಅವರ ಆ ಗಾಂಭೀಯ೯ ಆ ನಡೆ ನೋಡುತ್ತಿದ್ದರೆ ಅಭಿಮಾನಿಗಳು ಮೈ ಮರೆಯುತ್ತಿದ್ದರು, “ಮಧುರ ಈ ಕ್ಷಣ ನಡುಗುತಿದೆ ಛಳಿಗೆ ಮೈಮನ ” ಹಾಡಿನಲ್ಲಿ ತುಂಬಾ ಸುಂದರವಾಗಿ ಕಾಣುತ್ತಾರೆ ಮತ್ತು ಮಾಧವಿ ಕೂಡ, ಅಂಬರೀಷ್ ರವರು ಕೂಡ ಅಷ್ಟೇ ಚೆನ್ನಾಗಿ ಅಭಿನಯ ಮಾಡಿದ್ದಾರೆ.
ಮತ್ತೊಂದು ವಿಷಯ ನಿಮಗೆ ಹೇಳಬೇಕು ಡಾ. ಎಸ್ ಪಿ ಬಾಲಸುಬ್ರಹ್ಮಣ್ಯಂ ರವರು “ಜನಕನ ಮಾತ ಶಿರದಲಿ ಧರಿಸಿದ ” ಹಾಡು ಅಣ್ಣಾವ್ರಿಗಾಗಿ ಹಾಡಿರೋದು, ಹೇಗೆ ರಾಮನನ್ನು ಲಕ್ಷ್ಮಣ ಹುಡುಕುವ ಹಾಗೆ ಮತ್ತು ಅಣ್ಣಾವ್ರ ಮಗನಾಗಿ ರಾಘವೇಂದ್ರ ರಾಜ್ ಕುಮಾರ್ ರವರ ಮಗ “ವಿನಯ್ ರಾಜ್ ಕುಮಾರ್ ” ನಟಿಸಿರೋದು.
ಬಹಳ ವಷ೯ಗಳ ಅಂಬರೀಷ್ ರವರ ಕನಸು ನನಸಾಗಿದ್ದು ಈ ಚಿತ್ರ ನಟನೆಯ ಮೂಲಕ ಎಂದರೆ ತಪ್ಪಾಗಲಾರದು, ನಟಿಸುವ ಮೊದಲು ಕೆಲ ಶರತ್ತು ವಿಧಿಸಿದ್ದರು ಏನೆಂದರೆ ಯಾವುದೇ ದೃಶ್ಯದಲ್ಲಿ ಜಗಳವಾಡೋದು, ಹೊಡೆದಾಟ, ನೋವುಂಟು ಮಾಡುವ ದೃಶ್ಯ ಇರಬಾರದೆಂದು, ಹಾಗೇ ಅಣ್ಣಾವೃ ಕೂಡ ಶರತ್ತು ನೀಡಿದ್ದು ಕಟೌಟು ನಿಲ್ಲಿಸುವಾಗ ಯಾವುದೇ ತಾರತಮ್ಯ ಇರಬಾರದು , ಅವರ ದೊಡ್ಡ ಗುಣವೇನೆಂದರೆ ಅವರಿಗಿಂತ ಒಂದು ಅಡಿ ಜಾಸ್ತಿ ಕಟೌಟು ಇರಬೇಕು ಅನ್ನೋದು ಎಷ್ಟು ಕಲಾವಿದರಿಗೆ ಬರುತ್ತೆ ನೀವೇ ಹೇಳಿ…
ಮತ್ತೊಮ್ಮೆ ಹುಟ್ಟಿ ಬನ್ನಿ ಕರುನಾಡ ಧೃವತಾರೆ ಮತ್ತು ಕಲಿಯುಗ ಕಣ೯🙏