ಸ್ಯಾಂಡಲ್ವುಡ್ ಕಿಂಗ್ ಕೈಯಲ್ಲಿ ಚಿತ್ರೋದ್ಯಮದ ಚಿತ್ತಾರಗಳು -2

ಶಿವಣ್ಣ ಫಿಲಂ ಶೂಟಿಂಗ್ ನೋಡಲು ಜನ ಮುಗಿಬೀಳ್ತಾರೆ, ನೆಚ್ಚಿನ ಆರಾಧ್ಯ ದೈವರನ್ನು ನೋಡಿ ಕಣ್ತುಂಬಿಕೊಳ್ಳೋಕೆ, ಯಾವ ಕೊರೋನಾ ಇದ್ರೂ ತಲೆ ಕೆಡಿಸಿಕೊಳ್ಳಲ್ಲ, ಒಂದು ಸಲ ನೋಡಿ ಜೊತೆಲಿ ಫೋಟೋ ತೆಗೆಸ್ಕೊಂಡ್ರೆ ಫುಲ್ ಖುಷ್ ಆಗ್ತಾರೆ.

ಶಿವಣ್ಣ ರವರ 123ನೇ ಚಿತ್ರ ‘ ಬೈರಾಗಿ ‘ ಚಾಮರಾಜಪೇಟೆ, ಬಂಡೇ ಮಾಕಾಳಮ್ಮ ದೇವಸ್ಥಾನ ಹತ್ತಿರ ಇರೋ ಫೇಮಸ್ ಜಿಂಕೆ ಪಾಕ್೯ನಲ್ಲಿ ಶೂಟಿಂಗ್ ನಡಿತಿದೆ, ಸಾಮಾನ್ಯವಾಗಿ ಪಬ್ಲಿಕ್ ಒಳಗೆ ಬಿಡೋಲ್ಲ, ಆದ್ರೆ ಇತ್ತೀಚೆಗೆ ಶಿವಣ್ಣ ಬತ್೯ಡೇ ತಾವು ಮಾಡ್ಕೊಳಿಲ್ಲ, ಫ್ಯಾನ್ಸ್ ಶಿವಣ್ಣರನ್ನ ನೋಡ್ದೆ ಬೇಜಾರಾಗಿದ್ರು.. ಸಿಕ್ಕಿದ್ದೆ ಛಾನ್ಸ್ ನಮ್ಮ ಜನ ರಾಯಚೂರು, ಹುಬ್ಬಳ್ಳಿ, ಗುಲ್ಬರ್ಗ ಮುಂತಾದ ಕಡೆಯಿಂದ ಬಂದಿದ್ರು, ಕೆಲವರು ತಮ್ಮ ಕೆಲಸಕ್ಕೆ ರಜ ಹಾಕಿ ಬಂದಿದ್ರು, ಚಿಕ್ಕ ಚಿಕ್ಕ ಮಕ್ಕಳು ಶಿವಣ್ಣ..ಶಿವಣ್ಣ.. ಅಂತ ಕೂಗೋ ಕೂಗು ಕೇಳಿಸ್ತಿತ್ತು.

ಇದೆಲ್ಲಾ ಯಾಕ್ ಹೇಳ್ತಿದಾರೆ ಅಂದ್ಕೊಂಡ್ರಾ.. ಅಲ್ಲೇ ಕಂಡ್ರಿ ಇರೋದು ಟ್ವಿಷ್ಟ್, ಶುಕ್ರವಾರ ಬೆಳ್ಳಿಗೆ ಅನಾಮಧೇಯ ಫೋನ್ ಕಾಲ್ ಅಣ್ಣ ಶಿವಣ್ಣ ಶೂಟಿಂಗ್ ಚಾಮರಾಜಪೇಟೆ ಹತ್ತಿರ ನಡೀತಿದೆ, ಬನ್ನಿ ಅಣ್ಣ.. ನೀವು ಬಂದು ಶಿವಣ್ಣ ಭೇಟಿ ಮಾಡಿ ಅಂತ.. ಆ ಫೋನ್ ಕಾಲ್ ಮಾಡಿದ್ದು ನನ್ನ ಫೇಸ್ ಬುಕ್ ಗೆಳೆಯ.. ಶನಿವಾರದವರೆಗೂ ಶೂಟಿಂಗ್ ಇರುತ್ತೆ, ನೀವು ಬಂದು ನೋಡ್ಕೊಂಡು ಹೋಗಿ.. ಹಿಂದಿನ ದಿನ ಫ್ಯಾನ್ಸ್ಗೆ ಕ್ರಿಕೆಟ್ ಆಡಿ ಸಂತೋಷ ಪಡ್ಸಿದ್ರು..

ಇನ್ನೂ ನನ್ ವಿಷಯ ಕೇಳಿ.. ನನ್ ಮನೆ ಇರೋದು ಕುರುಬರಹಳ್ಳಿ, ಅಲ್ಲಿಂದ ಶೂಟಿಂಗ್ ಸ್ಪಾಟ್ ಹೋಗ್ಬೇಕು, ಕೆಲಸಕ್ಕೆ ಸ್ವಲ್ಪ ಬ್ರೇಕ್ ಕೊಟ್ಟು ರೆಡಿ ಆದೆ, ಗಾಡಿ ಸ್ಟಾರ್ಟ್ ಮಾಡ್ದೆ.. ಸ್ಟಾಟ್೯ ಆಗ್ತಿಲ್ಲ.. ಒಂದು ಕಡೆ ಕೋಪ ಇನ್ನೊಂದು ಕಡೆ ಮಳೆ ಬೇಡ ನನ್ ಫಜೀತಿ.. ಹಂಗೂ ಹಿಂಗೂ ಗಾಡಿ ಸ್ಟಾರ್ಟ್ ಮಾಡಿ ಸ್ವಲ್ಪ ಮುಂದೆ ಹೋದರೆ ಮಳೆ ಬತಾ೯ನೆ ಇದೆ ನಿಲ್ತಿಲ್ಲ.. ಮತ್ತೆ ಗಾಡಿ ಕೈ ಕೊಡ್ತು.. ರೋಡಲ್ಲಿ ನನ್ನ ಸ್ಥಿತಿ ನೆನ್ಸ್ಕೊಳಿ ನೀವೇ.. ಮತ್ತೆ ಒಂದು ಸಲ ಅನ್ಸುತು ಮನೆಗೆ ವಾಪಸ್ ಹೋಗೋಣ ಮಳೆ ಬಿಡ್ತಿಲ್ಲ ಹಾಳಾದ್ದು ಗಾಡಿ ಮತ್ತೆ ಸ್ಟಾಟ್೯ ಆಗ್ತಿಲ್ಲ.. ಯೋಚ್ನೆ ಮಾಡಿದೆ ಈ ಥರ ಅವಕಾಶ ಸಿಗೋದು ತುಂಬಾ ಅಪರೂಪ.. ಹೆಂಗಾನಮಾಡಿ ಬಾಸ್ ನೋಡ್ಲೇಬೇಕು ಅಂತ ಹೇಳಿ ಶೂಟಿಂಗ್ ಸ್ಪಾಟ್ ಹೋದೆ, ನನ್ನ ಅದೃಷ್ಟಕ್ಕೆ ಗಾಡಿ ಒಳಗಡೆ ನಿಲ್ಸೋಥರ ಆಯ್ತು.. ಶೂಟಿಂಗ್ ಬಸ್ ಹತ್ರ ಎನ್ ಜನ ಬೊಕ್ಕೆ ಇಟ್ಕೊಂಡು, ಕ್ಯಾಮೆರಾ ಹಿಡ್ಕೊಂಡು, ಕೇಕ್ ಹಿಡ್ಕೊಂಡ್ ಕಾಯ್ತಿದಾರೆ ನಾನು ನೋಡ್ತಿದ್ದೆ..

ಬಂದ್ರು ನೋಡಿ ನಾಟ್ಯಸಾವ೯ಭೌಮ ಬಸ್ ನಿಂದ ಇಳಿದ ತಕ್ಷಣ ಜನ ಶಿವಣ್ಣನ ಸುತ್ತ ಮುತ್ಕೊಂಡ್ರು, ಅಲ್ಲಿಯ ನಿವ೯ಹಸ್ಥರು ಜನರನ್ನು ತಡೆಯೋಕಾಗಿಲ್ಲ.. ಶಿವಣ್ಣ ನೋಡ್ತಾ ನೋಡ್ತಾ.. ಫೋಟೋ ಕೊಡ್ತಾ ಬಂದ್ರು ನೂಕು ನುಗ್ಗಲು ಜಾಸ್ತಿ ಆದಾಗ ಸ್ವಲ್ಪ ಗರಂ ಆಗಿ ಒಂದು ಕೂಗು ಹಾಕುದ್ರು ಎಲ್ಲಾ ಸೈಲೆಂಟ್.. ಬಂದಿರೋರಿಗೆಲ್ಲ ಫೋಟೋ ಸಿಗುತ್ತೆ ಆತ್ರ ಪಡ್ಬೇಡಿ ಶಿಸ್ತು ಮುಖ್ಯ ಅಂದ್ರು ಆದ್ರೂ ಜನ ಕೇಕೆ ಹಾಕೊದು ನಿಲ್ಸಲಿಲ್ಲ.. ಎಲ್ಲರದೂ ಆಯ್ತು ಇನ್ನೇನು ನನ್ ಸರದಿ ಬಂದಾಗ ಅಲ್ಲಿರೋರು ಕೇಳ್ತಾರೆ ಯಾರ್ ನೀವು.. ಫಿಲಂ ಜನ೯ಲಿಸ್ಟ್, ಕೈಯಲ್ಲಿ ಏನ್ ಬುಕ್ಕು.. ನಮ್ಮ ತಂಡ ಸೇರಿ ಬದಿ೯ರೋ ಬುಕ್ಕು ಇವಾಗ ಶಿವಣ್ಣ ನೋಡೋಕೆ ಟೈಂ ಇಲ್ಲ ಅಂದ್ರು.. ಶಿವಣ್ಣ ಕೇಳಿದ್ರು ಏನಾಗ್ಬೇಕು ಹೇಳಿ.. ನನ್ನ ಪರಿಚಯ ಮಾಡ್ಕೊಂಡೆ ನಮ್ಮ ಚಿತ್ರೋದ್ಯಮದ ಚಿತ್ತಾರಗಳು -2 , ಈ ಬುಕ್ ಮೊದ್ಲೇ ಕೊಟ್ರಲ್ಲ.. ನನ್ನ ತಂಡದ ಮಿತ್ರರು ಕೊಟ್ಟದ್ದು, ನಿಮ್ಮ ಬಗ್ಗೆ ವಿಶೇಷ ಲೇಖನ ಬರೆದಿರುವೆ ‘ಲಿವಿಂಗ್ ಲೆಜೆಂಡ್ ಶಿವಣ್ಣ’ ಪೇಜ್ ತೋರಿಸ್ದೆ.. ತುಂಬಾ ಸಂತೋಷ, ಆಲ್ ದಿ ಬೆಸ್ಟ್, ನಿಮ್ಮ ಇಡೀ ತಂಡಕ್ಕೆ ಒಳ್ಳೆಯದಾಗಲಿ… ಬಿಡುವಾದಾಗ ನೋಡ್ತಿನಿ.. ನಾನು ಹಂಗೆ ವಾಪಸ್ ಬರೋಕಾಗುತ್ತ, ನಮಗೆ ಇಷ್ಟವಾದ ಲೆಜೆಂಡ್ ಬಗ್ಗೆ ಬರೆದ್ಮೇಲೆ ಆಟೋಗ್ರಾಫ್ ಇಲ್ಲಾಂದ್ರೆ ಹೆಂಗೆ.. ಓಂ.. ಶಿವಣ್ಣ.. ಅಂತ ಆಟೋಗ್ರಾಫ್ ಕೊಟ್ಟು.. ಕೋನೇಲಿ ಅವರ ಜೊತೆ ಒಂದು ಫೋಟೋ ತೆಗೆಸ್ಕೊಂಡೆ..

ಮುಂದಿನ ಸೀನ್ ಗೆ ರೆಡಿ ಆಗಿದ್ದ ಶಿವಣ್ಣ ಪಾಕ್೯ ನಲ್ಲಿ ಶೂಟಿಂಗ್ ಜಾಗಕ್ ಹೋದ್ರು.. ನಾನು ಆಗ 3 ಘಂಟೆ ಇಬೋ೯ದು ಹೊಟ್ಟೆ ಹಸಿವು.. ಅನ್ನದ ಋಣ ಅಲ್ಲಿತ್ತು ಊಟ ಆಯ್ತು ಶಿವಣ್ಣ ಶೂಟಿಂಗ್ ಸೀನ್ ನೋಡಕೋದ್ರೆ ಅಲ್ಲಿ ಡಾಲಿ ಧನಂಜಯ್.. ಒಂದು ಸೀನ್ ನೋಡಿ ನಾನು ಸುಸ್ತು.. ಶಿವಣ್ಣ ಬಟ್ಟೆ ಪೂತಿ೯ ಕೆಸರು.. ಅವರನ್ನ ನಿಧಾನವಾಗಿ ಎಳೆದುಕೊಂಡು ಡಾಲಿ ಹೋಗೋದು, ನೋಡಿದೆ ಧಂಗಾದೆ, ಇದೇ ದೃಶ್ಯ ನಟನೆ ಬೇರೆ ನಟರು ಒಪ್ಪಿಕೊಳ್ಳೋದು ತುಂಬಾ ಕಡಿಮೆ ಆದರೆ ಯಾವ ಸೀನ್ ಆದ್ರೇನಂತೆ ಕಥೆಗೆ ತಕ್ಕ ಪಾತ್ರ ಅಭಿನಯಿಸಬೇಕು ಅನ್ನೋ ಮನೋಭಾವ ಇವರದು, ಎಷ್ಟೇ ಆದ್ರೂ ದೊಡ್ಮನೆ ದೊಡ್ಡ ಗುಣ..
ಚಿತ್ರದ ನಿದೇ೯ಶಕರು ವಿಜಯ್ ಮಿಲ್ಟನ್, ಸಂಗೀತ ನಿರ್ದೇಶಕರು ಅನೂಪ್ ಸಿಳೀನ್.. ಚಿತ್ರ ತಂಡಕ್ಕೆ ಬೆಸ್ಟ್ ಆಫ್ ಲಕ್ 🌹

ನನ್ ಖುಷಿ ಏನಪ್ಪಾಂದ್ರೆ ನೆಚ್ಚಿನ ನಟ ಬಗ್ಗೆ ಬರೆದು ಅವರನ್ನು ಭೇಟಿ ಮಾಡಿ ಅವರಿಂದ ಮೆಚ್ಚುಗೆ ಮಾತು ಕೇಳೋದು.. ನಾನು ಬರೆದಿದ್ದಕ್ಕೂ ಸಾಥ೯ಕ.

ಚಿತ್ರೋದ್ಯಮದ ಚಿತ್ತಾರಗಳು ತಂಡದ ರೂವಾರಿ ಟಿ ಎನ್ ಸುರೇಶ್, ಅಕ್ಷಯ, ಮಿತ್ರರಾದ ಸಂದೀಪ್ ಜೋಶಿ, ಘನಶ್ಯಾಮ್, ಸೌಮ್ಯ ಪ್ರತಿಯೊಬ್ಬರಿಗೂ ಅಭಿನಂದನೆಗಳು ಮತ್ತು ಶುಭಾಶಯಗಳು 💐 ನಮ್ಮ ತಂಡ ಹೀಗೆ ಬೆಳೆಯಲಿ ಎನ್ನುವುದು ನನ್ನ ಆಶಯ..

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply