ಸ್ಯಾಂಡಲ್ವುಡ್ ನಲ್ಲಿನ್ನು ಕಾಮಿಡಿ ಚಿತ್ರಗಳ ಜಾತ್ರೆ

ONE CUT TWO CUT

ಕೋವಿಡ್ ಸಾಂಕ್ರಾಮಿಕದ ಸಂದಿಗ್ಧ ಅವಧಿಯಲ್ಲಿ ಆತಂಕದ ಅಲೆಯಲ್ಲಿ ನೊಂದು ಕೊಚ್ಚಿ ಹೋಗಿದ್ದ ಜನರಿಗೆ ಸಿನಿಮಾದ ಮನೋರಂಜನೆ ಸ್ವಲ್ಪ ಮಟ್ಟಿಗೆ ಮುದ ನೀಡಿದ್ದಂತೂ ನಿಜ. ಸಾಂಡ್ಲವುಡ್ನಲ್ಲಿ ಈಗ ಮತ್ತೊಮ್ಮ ನಗೆ ಹಬ್ಬ ಶುರುವಾದಂತಿದೆ. ಎಂ.ಜಿ ಶ್ರೀನಿವಾಸ ನಿರ್ದೇಶಿಸಿ ಅಭಿನಯದ “ಓಲ್ಡ್ ಮಾಂಕ್”, ದಾನಿಶ್ ಸೇಟ್ ನಟಿಸುತ್ತಿರುವ “ಒನ್ ಕಟ್ ಟು ಕಟ್”, ರಿಷಬ್ ಶೆಟ್ಟಿ ಅವರ “ಹರಿ ಕಥೆಯಲ್ಲ ಗಿರಿ ಕಥೆ” ಇಂತಹ ನಗೆ ಚಿತ್ರಗಳು ಪ್ರೇಕ್ಷಕರಿಗೆ ನಗೆಯ ಕಚಗುಳಿ ನೀಡಲು ಶೀಘ್ರದಲ್ಲೇ ತೆರೆಯ ಮೇಲೆ ಮೂಡಿಬರಲಿದ್ದಾರೆ.

ಹಿರಿಯ ನಟರಾದ ಕಲಾ ತಪಸ್ವಿ ರಾಜೇಶ್ ದಶಕಗಳ ಬಳಿಕ ಸಿನಿಮಾವೊಂದಕ್ಕಾಗಿ ಕ್ಯಾಮರಾ ಎದುರು ನಿಂತಿದ್ದಾರೆ. 60 -70ರ ದಶಕದ ಕನ್ನಡದ ಟಾಪ್ ಹೀರೊಗಳಲ್ಲಿ ಒಬ್ಬರಾಗಿದ್ದ ರಾಜೇಶ್ ” ಓಲ್ಡ್ ಮಾಂಕ್” ಅನ್ನುವ ಪರಿಪೂರ್ಣ ಕಾಮಿಡಿ ಸಿನಿಮಾದ ಮೂಲಕ ಪ್ರೇಕ್ಷಕನೆದುರು ಬರಲಿದ್ದಾರೆ. ದೇವರ ದುಡ್ಡು,ಸೊಸೆ ತಂದ ಸೌಭಾಗ್ಯ, ಕಲಿಯುಗ ಸಿನಿಮಾಗಳಲ್ಲಿನ ಇವರ ಅಭಿನಯವನ್ನು ಮರಿಯೋಕೆ ಸಾಧ್ಯವೇ?!!..85ರ ಹರೆಯದಲ್ಲೂ ಕಲಾದೇವಿಯ ಸೇವೆ ಮಾಡೋಕೆ ಸಿದ್ದವಾಗಿದ್ದರೆ. ರಾಜೇಶ್ ಅವರ ಸೊಗಸಾದ ಅಭಿನಯವನ್ನು ಮತ್ತೊಮ್ಮೆ ಕಣ್ತುಂಬಿಸಿಕೊಳ್ಳಲು ನೀವು ರೆಡಿ ತಾನೇ?

ಸಂಯುಕ್ತ ಹೊರನಾಡು – ಡಾನಿಶ್ ಸೇಠ್ ಜೋಡಿಯಾಗಿ ನಟಿಸ್ತಿರೋ “ಒನ್ ಕಟ್, ಟು ಕಟ್” ಸಿನಿಮಾಗೆ ವಂಸಿಧರ್ ಭೋಗರಾಜು ಎನ್ನುವ ಯುವ ಪ್ರತಿಭೆ ಆಕ್ಷನ್ ಕಟ್ ಹೇಳಿದ್ದಾರೆ. ಸ್ಟ್ಯಾಂಡ್ ಅಪ್ ಕಾಮಿಡಿಯಿಂದ ಕಚುಗುಳಿಯಿಟ್ಟು, ಜಾಹೀರಾತುಗಳು, ಕಿರು ಚಿತ್ರಗಳನ್ನು ನಿರ್ದೇಶಿಸಿ ಯಶಸ್ಸು ಪಡೆದಿರುವ ವಂಸಿ ಇದೀಗ ಪೂರ್ಣ ಸಿನಿಮಾದ ಲಗಾಮು ಹಿಡಿದಿದ್ದಾರೆ. ಅದಕ್ಕೆ ನಮ್ಮ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಬಂಡವಾಳ ಹೂಡಿದ್ದಾರೆ..

ಕೊರೋನಾ ಡಾ ನೋವನ್ನು ಮರೆತು ಪ್ರೇಕ್ಷಕನನ್ನು ನಕ್ಕು ನಗಿಸಲು ಸಾಲು ಸಾಲು ಚಿತ್ರಗಳು ತೆರೆ ಮೇಲೆ ಬರಲಿವೆ. ಮುಂದಿನ ದಿನಗಳಲ್ಲಿ ಕನ್ನಡದ ಪ್ರೇಕ್ಷಕನಿಗೆ ನಗೆಯ ಔತಣಕ್ಕೇನು ಕೊರತೆ ಇರದು

P. Ghanashyam

P. Ghanashyam

ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ. ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

2 thoughts on “ಸ್ಯಾಂಡಲ್ವುಡ್ ನಲ್ಲಿನ್ನು ಕಾಮಿಡಿ ಚಿತ್ರಗಳ ಜಾತ್ರೆ

Leave a Reply