ತ್ರಿವೇಣಿ ಅವರ ಈ ಕಾದಂಬರಿ ಆಗಿನ ಕಾಲಕ್ಕೇ ಅಂತರ್ಜಾತೀಯ ವಿವಾಹ ಮತ್ತು ವಿಧವಾ ವಿವಾಹದ ಬಗೆಗೆ ಬರೆಯಲ್ಪಟ್ಟಿತ್ತು. 1968ರಲ್ಲಿ ಬಂದ ಸಿನಿಮಾ.
ವಿಶೇಷವೆಂದರೆ ದುಷ್ಟ ಪಾತ್ರಗಳಲ್ಲಿ ಜನಪ್ರಿಯರಾದ ದಿನೇಶ್, ರಂಗ, ಪಾಪಮ್ಮ, ಇಂದಿರಾ ಜಾರ್ಜ್, ಬಿ ವಿ ರಾಧ, ಜಯಶ್ರೀ (ಕೆಲವು ಸಿನಿಮಾಗಳಲ್ಲಿ ದುಷ್ಟ ಪಾತ್ರ) ಎಲ್ಲರೂ ಇಲ್ಲಿ ಭಾರೀ ಒಳ್ಳೆಯ ಜನ. ನಾಗೇಂದ್ರ ರಾಯರು ಕೊನೆಯಲ್ಲಿ ಚಿಗುರುವ ಹಣ್ಣೆಲೆ. ಅರುಣ್ ಕುಮಾರ್ (ಗುರುರಾಜುಲು ನಾಯ್ಡು) ಮತ್ತು ನವನಟಿ ಪ್ರೇಮಲತಾಗೆ ಎರಡು ಹಾಡುಗಳಿವೆ. ಇದೇ ಹುಡುಗ ಇದೇ ಸೊಬಗ(ಪಿಬಿಎಸ್ ಎಲ್ ಆರ್ ಈಶ್ವರಿ) ಹಾಲಲಿ ಮಿಂದವಳೋ (ಬಾಲಮುರಳೀಕೃಷ್ಣ ಮತ್ತು ಬೆಂಗಳೂರು ಲತಾ).. ಪಿ. ಸುಶೀಲ ಮತ್ತು ಎಲ್ ಆರ್ ಈಶ್ವರಿ (ಮಲ್ಲೆ ಮಾಲೆ ನಲ್ಲಗೆಂದು ಹಿಡಿದು ಬಾರಮ್ಮ) ಮತ್ತು ಅತ್ಯಂತ ಜನಪ್ರಿಯ ಹೂವೂ ಚೆಲುವೆಲ್ಲಾ ನಂದೆಂದಿತು… ಹಾಗೂ ಸುಂದರ ಜೋಗುಳ ‘ಬಾರ ಒಲಿದು ಬಾರ ನಿದಿರೆ ತಾರಾ ಕಂದಗೆ’.
ರಾಜ್‌ಕುಮಾರ್ ಗಂಡನಾಗಿ, ವಿಧುರನಾಗಿ, ಪುಟ್ಟ ಮಂಜನ(ಬೇಬಿ ರಾಣಿ) ತಂದೆಯಾಗಿ, ವಿಧವೆ ಕಲ್ಪನಾ ಕಡೆಗೆ ಮೊದಲು ಅನುಕಂಪ ನಂತರ ಪ್ರೇಮ ತೋರುವ ಪ್ರೇಮಿಯಾಗಿ ಬಹಳ ಸೊಗಸಾಗಿ ನಟಿಸಿದ್ದಾರೆ. ಕಲ್ಪನಾಗೆ ಕಲ್ಪನಾನೇ ಸಾಟಿ.
ನಾನು 5ನೇ ತರಗತಿಯಲ್ಲಿದ್ದಾಗ ‘ಹೂವೂ ಚೆಲುವೆಲ್ಲಾ ನಂದೆಂದಿತು’ ಶೂಟಿಂಗ್ ಮೈಸೂರು ಯಾದವಗಿರಿಯಲ್ಲಿನ ಮನೆಯೊಂದರ ಮುಂದೆ ನೋಡಿದ್ದೆ. ಮತ್ತೊಂದು ಸೀರಿಯಸ್ ಡಯಲಾಗ್ ಸೀನ್ ಕಲ್ಪನಾ ಮತ್ತು ರಾಜ್ ಮಧ್ಯೆ ನೋಡಿದ್ದೆ.
ತ್ರಿವೇಣಿ ಅವರ ಕಾದಂಬರಿ ಓದಿದಂತೆಯೇ ಅನ್ನಿಸಿತು ನನಗೆ ಈ ಚಿತ್ರ ನೋಡಿದಾಗ.
ಲೇಖಕರು: ಯತಿರಾಜ್ ವೀರಾಂಬುಧಿ