ಹಾಲುಜೇನು @39 ರ ಸಂಭ್ರಮ 💐💙💜🌹

ಹಾಲುಜೇನು

ಗಂಡ ಹೆಂಡತಿ ಇಬ್ಬರೂ ಅನ್ಯೋನ್ಯ ವಾಗಿರಬೇಕೆಂದರೆ ಆಸ್ತಿ, ಅಂತಸ್ತು, ಐಶ್ವರ್ಯ ಮುಖ್ಯವಲ್ಲ, ಇವೆಲ್ಲ ಇಂದು ಬಂದು ನಾಳೆ ಹೋಗೋ ವಸ್ತು, ಸಿರಿ ಸಂಪತ್ತು ಯಾವುದೂ ಶಾಶ್ವತವಲ್ಲ, ಗಂಡನ ಕಷ್ಟದಲ್ಲಿ ಹೆಂಡತಿ ಭಾಗಿಯಾಗಿ ಹೆಂಡತಿ ಕಷ್ಟಕ್ಕೆ ಗಂಡ ಸಾಥ್ ನೀಡಿ ಏನೇ ಆದರೂ ನಿಭಾಯಿಸಿಕೊಂಡು ಹೋಗುವವರೇ ನಿಜವಾದ ಗಂಡ ಹೆಂಡತಿ. ಪ್ರೀತಿಗಿಂತ ಬೇರೆ ಆಸ್ತಿ ಯಾವುದೂ ಇಲ್ಲ.

ತಾನು ಮದುವೆಯಾದ ಹೆಂಡತಿ ಅನಾರೋಗ್ಯದಿಂದ ಬಳಲಿರೋದನ್ನು ನೋಡಿ ಇನ್ನೊಬ್ಬ ಹೆಣ್ಣಿನ ಸಹವಾಸ ಮಾಡದೆ ತನ್ನ ಹೆಂಡತಿಯನ್ನು ಹೇಗಾದರೂ ಖಾಯಿಲೆಯಿಂದ ವಾಸಿ ಮಾಡಿ ಆಕೆಯನ್ನು ಸದಾ ಸಂತೋಷದಲ್ಲಿರಸಬೇಕೆಂದು ಪಡುವ ಪಾಡು ಅಷ್ಟಿಷ್ಟಲ್ಲ, ತನ್ನ ಹೆಂಡತಿಯನ್ನು ಉಳಿಸಿಕೊಳ್ಳಲು ಹರಸಾಹಸ ಮಾಡಿ ಕೊನೆಯಲ್ಲಿ ನಿಜವಾದ ಪ್ರೀತಿ ಗೆಲ್ಲುತ್ತೋ, ಇಲ್ಲವೋ, ಇಬ್ಬರೂ ಅಮರರಾಗ್ತಾರಾ ಅಂತ ತೋರಿಸುವ ಚಿತ್ರ “ಹಾಲುಜೇನು ” ಈ ಚಿತ್ರ ಬಿಡುಗಡೆಯಾಗಿ ಇಂದಿಗೆ 39 ವಷ೯ಗಳು.

ನಟ ಮಹಾರಾಜ ಡಾ ರಾಜ್ ಕುಮಾರ್, ಮಾದಕ ಕಣ್ಗಳ ಚೆಲುವೆ ಮಾಧವಿ , ರೂಪಾದೇವಿ, ತೂಗುದೀಪ ಶ್ರೀನಿವಾಸ್, ಶಕ್ತಿ ಪ್ರಸಾದ್, ಚಿ ಉದಯಶಂಕರ್ , ಶಿವರಾಂ, ಮುಸರಿ ಕೃಷ್ಣಮೂರ್ತಿ, ಉಮೇಶ್ ಮತ್ತಿತರ ತಾರಾಗಣ ನೋಡಬಹುದು. ಚಿತ್ರದ ಎಲ್ಲಾ ಹಾಡುಗಳೂ ಕೇಳೋಕೆ ಚೆನ್ನಾಗಿದೆ.
ಹಾಲು ಜೇನು ಒಂದಾದ ಹಾಗೆ ನನ್ನ ನಿನ್ನ ಜೀವನ, ಆನೆಯ ಮೇಲೆ ಅಂಬಾರಿ ಕಂಡೆ, ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ…

ಚಿತ್ರದ ವಿಶೇಷ ಮಾಹಿತಿಗಳು :

💙ನಿದೇ೯ಶಕರು : ಸಿಂಗೀತಂ ಶ್ರೀನಿವಾಸ್ ರಾವ್.
💜ನಿಮಾ೯ಪಕರು : ಪಾವ೯ತಮ್ಮ ರಾಜ್ ಕುಮಾರ್.
❤ರಚನೆ : ಪಿ. ಪದ್ಮರಾಜು (ಸಂಭಾಷಣೆ ಚಿ ಉದಯಶಂಕರ್)
🎩ಚಿತ್ರ ಕಥೆ : ಸಿಂಗೀತಂ ಶ್ರೀನಿವಾಸ್ ರಾವ್.
👒ಸಂಗೀತ : ಜಿ ಕೆ ವೆಂಕಟೇಶ್.
💐ಛಾಯಾಗ್ರಹಣ : ಎಸ್ ವಿ ಶ್ರೀಕಾಂತ್.
💟ಸಂಕಲನ : ಪಿ ಭಕ್ತವತ್ಸಲಂ.
🌹ನಿಮಾ೯ಣ : ಪೂಣಿ೯ಮಾ ಎಂಟರ್ ಪ್ರೈಸಸ್.
🦄ಅತಿಥಿ ನಟ : ಚಿ ಉದಯಶಂಕರ್.
🐿ಕಂಠದಾನ ಕಲಾವಿದರು : ಸರಿತ (ಮಾಧವಿಗೆ ಹಿನ್ನೆಲೆ ಧ್ವನಿ).
🐎ಕಲಾ ನಿದೇ೯ಶಕ : ಪೆಕೇಟೀ ರಂಗ.

ದಾಖಲೆಗಳ ಮಹಾರಾಜ ನಮ್ಮ ಅಣ್ಣಾವ್ರು, ಈ ಚಿತ್ರ ಬಿಡುಗಡೆ ಆಗುವವರೆಗೂ ದಕ್ಷಿಣ ಭಾರತದ ಎಲ್ಲಾ ಚಿತ್ರರಂಗದಲ್ಲಿ ಬರೀ 30, 40 ಅಡಿ ಕಟೌಟ್ ಮಾತ್ರ ನೀಡುತ್ತಿದರು ಅದರೇ ಈ ಚಿತ್ರದಿಂದ ಆ ನೀತಿಯನ್ನು ಅಭಿಮಾನಿಗಳು ಮೀರಿ 90 ಅಡಿ ಕಟೌಟ್ ಯನ್ನು ನಿಲ್ಲಿಸಿದರು ಹಾಗೂ ಆ ಕಟೌಟ್ ಗೆ “ಹಾಲು” ಹಾಗೂ “ಜೇನು” ಎರಡನ್ನೂ ಸೇರಿಸಿ ಕಟೌಟ್ ಗೆ ಅಭಿಕ್ಷೇಕ ಮಾಡಿದರು, ಆ ಅಭಿಕ್ಷೇಕ ಮಾಡಿದ ಹಾಲು ಜೇನು ಸುಮಾರು 2 ಕಿ.ಮೀ. ವರೆಗೂ ಹರಿದುಕೊಂಡು ಹೋಗಿತ್ತು, ಆ ಕಾಲದಲ್ಲಿ ಹೆಚ್ಚಾಗಿ ಕನ್ನಡ ಚಿತ್ರರಂಗದ ಮದ್ರಾಸ್ ವನ್ನೇ ನಂಬಿತ್ತು ಆದರೆ ಈ ಚಿತ್ರ 70 ರಿಂದ 80% ಬೆಂಗಳೂರಿನಲ್ಲೇ ಚಿತ್ರಿಸಲಾಗಿದೆ, ಬೆಂಗಳೂರಿನಲ್ಲೂ ಚಿತ್ರಿಕರಣ ಮಾಡಬಹುದು ಎಂದು ಕನ್ನಡ ಚಿತ್ರರಂಗದ ಕ್ಕೆ ತೋರಿಸಿಕೊಟ್ಟ ಚಿತ್ರ, ಬೆಂಗಳೂರಿನ ಪ್ರಮುಖ ಚಿತ್ರಮಂದಿರ ಸಂತೋಷ, ಶಾಂತಲಾ, ನವರಂಗ್, ಗೀತಾಂಜಲಿ, ಉಮಾ, ನಂದ, ನಳಂದ, ಶಾಂತಿ, ಈ ಚಿತ್ರದ ಗೀತೆಗಳು ಇಂದಿಗೂ ಸೂಪರ್ ಹಿಟ್ ಗೀತೆಗಳು, ನನಗೆ ಗೋತ್ತಿರುವ ಮಾಹಿತಿ ಪ್ರಕಾರ ಚಿತ್ರವನ್ನು ಅನಂತ್ ನಾಗ್ ಮಾಡಬೇಖಗಿತ್ತು ಕಾರಣಾಂತರಗಳಿಂದ ಮಾಡಲಿಲ್ಲ. ಆನಂತರ ಈ ಕಥೆಯನ್ನು ಓದಿದ ಅಮ್ಮ ಈ ಚಿತ್ರವನ್ನು ನಾವೇ ಮಾಡುತ್ತೆವೆ ಎಂದು ಮಾಡಿದರು.

ಪುರಂದರ ದಾಸರ ಕೀತ೯ನೆ ‘ಪೊಗಾದಿರೆಲೋ ರಾಗ ಬಾಗಿಲಿಂದಾಚೆ, ಬಳಸಿಕೊಂಡದ್ದು ವಿಶೇಷ.

🐧ಅತ್ಯುತ್ತಮ ಚಿತ್ರ – ಪಾವ೯ತಮ್ಮ ರಾಜ್ ಕುಮಾರ್, ಸಿಂಗೀತಂ ಶ್ರೀನಿವಾಸ್ ರಾವ್.
💎ಅತ್ಯುತ್ತಮ ನಟ : ಡಾ ರಾಜ್ ಕುಮಾರ್.
👣ಅತ್ಯುತ್ತಮ ಸಂಕಲನ : ಪಿ ಭಕ್ತವತ್ಸಲಂ.

ಇದೇ ಚಿತ್ರ ತೆಲುಗಿನಲ್ಲಿ ರೀಮೇಕ್ ಮಾಡಿದರು, ಇಳ್ಳಾಲೆ ದೇವತ, ಅಕ್ಕಿನೇನಿ ನಾಗೇಶ್ವರ ರಾವ್ ನಟನೆಗೆ, ಆದರೆ ಚಿತ್ರ ಇಲ್ಲಿ ಯಶಸ್ಸಿಯಾದಷ್ಟು ಅಲ್ಲಿ ಜನಪ್ರಿಯತೆ ಕಮ್ಮಿ ಅಂತಾನೆ ಹೇಳಬಹುದು.

ಇನ್ನೂ ಅಣ್ಣಾವ್ರ ನಟನೆ ನಿಜಕ್ಕೂ ಎಂಥವರೂ ನೋಡಿ ಬದಲಾಗುವರು, ಹೆಂಡತಿಯನ್ನು ಹೇಗೆ ನೋಡಿಕೊಳ್ಳಬೇಕು, ಈ ಚಿತ್ರ ನೋಡಿ ನಿಜ ಜೀವನದಲ್ಲಿ ಅಳವಡಿಸಿಕೊಳ್ಳೊ ಅಂಶಗಳು ಬಹಳಷ್ಟಿವೆ, ಯಾವುದೇ ಚಿತ್ರವಾಗಲಿ ಬರೀ ವ್ಯಾಪಾರಕ್ಕಲ್ಲ ಅದರಲ್ಲಿ ಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕು. ಈ ಚಿತ್ರ ಎಲ್ಲಾ ಅಭಿಮಾನಿಗಳ ಮನಸ್ಸನ್ನು ಗೆದ್ದಿದೆ.

“ಹಾಲು ಜೇನು ಒಂದಾದ ಹಾಗೆ ನನ್ನ ನಿನ್ನ ಜೀವನ “

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply