ಹಿರಿಯ ಕಲಾವಿದರು ಲೋಕನಾಥ್ ನೆನಪಿಗೆ 💐

ನಾವೆಲ್ಲ ಸಿದ್ದಲಿಂಗಯ್ಯ ನಿದೇ೯ಶನದ “ಭೂತಯ್ಯನ ಮಗ ಅಯ್ಯು ” ನೋಡಿತೀ೯ವಿ, ಅದ್ರಲ್ಲಿ ಒಬ್ಬೊಬ್ಬರ ಪಾತ್ರ ವಿಭಿನ್ನ ಜೊತೆಗೆ ಯಶಸ್ವಿ ಪ್ರದಶ೯ನ ಮತ್ತು ಪ್ರಶಸ್ತಿ ಬಂದಿದೆ, ಒಬ್ಬರ ನಟನೆ ಬಗ್ಗೆ ನಿಮ್ ಹತ್ರ ಹಂಚ್ಕೊಳೋಣ ಅಂತ ಯಾರಿರ್ಬೋದು ಅಂದ್ಕೊಂಡ್ರಾ ಆ ನಟಗೆ ಚಿತ್ರ ಸನ್ನಿವೇಶದಲ್ಲಿ ಬೇರೇರೂ ಜಗಳ ಮಾಡ್ತಿದ್ರೂ ಕ್ಯಾರೆ ಅನ್ನದೇ “ಉಪ್ಪಿನಕಾಯಿ” ವಾಸನೆ ಗೊತ್ತಾದ್ರೆ ಸಾಕು ಮೊದಲು ಹುಡ್ಕೊಂಡ್ ಹೋಗ್ತಾರೆ, ಯಾರಂತ ಗೊತ್ತಾಯ್ತಾ.. ದಿ. ಲೋಕನಾಥ್ ಅದೂ ಎರಳಿಕಾಯಿ ಅಂದ್ರೆ ಮುಗ್ದೋಯ್ತು ಚಪ್ಪರಿಸಿ ಚಪ್ಪರಿಸಿ ತಿಂತಾರೆ, ಚಿತ್ರದಲ್ಲಿ ಚಮ್ಮಾರರಾಗಿ ನಟನೆ,
ಸುಮಾರು 1000 ನಾಟಕಗಳಲ್ಲಿ ಅಭಿನಯಿಸಿ ನಟಿಸಿದ ಚಿತ್ರಗಳ ಸಂಖ್ಯೆ 650 ದಾಟಿವೆ, ಚಿತ್ರರಂಗದಲ್ಲಿ 60 ವಷ೯ಗಳ ಕಾಲ ಸುಧೀಘ೯ ಸೇವೆ ಸಲ್ಲಿಸಿದರು ಈ ದಿನ ನಾವು ಅವರನ್ನು ನೆನೆಸಿಕೊಳ್ಳೋಕೆ ಕಾರಣ ಇಂದು ಅವರ ಪುಣ್ಯ ಸ್ಮರಣೆ 🌹

ಚಿತ್ರರಂಗದಲ್ಲಿ ‘ಉಪ್ಪಿನಕಾಯಿ ಅಂಕಲ್ ‘ ಅಂತನೇ ತುಂಬಾ ಫೇಮಸ್.

ನಾಟಕಗಳು ಹೇಳ್ತಿದ್ದೆ ‘ಗೆಲಿಲಿಯೋ , ರಾಜಾರಾಮ್ ಆಸ್ಪೋಟ, ದುಷ್ಟಬುಧ್ಧಿ ಚಂದ್ರಹಾಸ …

ಪುಟ್ಟಣ್ಣ ಕಣಗಾಲ್ ರವರ ನಾಗರಹಾವು, ಈ ಚಿತ್ರದಲ್ಲಿ ಕಾಲೇಜ್ ಪ್ರಾಂಶುಪಾಲರಾಗಿ ನೀನೆ ನಂತರ ರಾಮಾಚಾರಿಯಿಂದ ಆಗುವ ಅವಾಂತರ ಕಥಾ ಸಂಗಮ, ಕಾಲೇಜು ರಂಗ, ಬಿಳಿ ಹೆಂಡ್ತಿ, ಗೆಜ್ಜೆಪೂಜೆ..

ಶಂಕರ್ ನಾಗ್ ರವರ ನಿದೇ೯ಶನದ ಮಾಲ್ಗುಡಿ ಡೇಸ್ ಧಾರಾವಾಹಿಯಲ್ಲಿ ನಟನೆ, ಮಿಂಚಿನ ಓಟ , ಒಂದು ಮುತ್ತಿನ ಕಥೆ, ನೋಡಿ ಸ್ವಾಮಿ ನಾವಿರೋದು ಹೀಗೆ ಚಿತ್ರದ ಅಭಿನಯ.

ಸಿದ್ದಲಿಂಗಯ್ಯ ಬಂಗಾರದ ಮನುಷ್ಯ ರಾಜ್ ಕುಮಾರ್ ಸಂಬಂಧಿ , ಪುಷ್ಪಕ ವಿಮಾನ, ಹೃದಯ ಸಂಗಮ,

ರೇ, ಡಕೋಟ ಎಕ್ಸ್‌ಪ್ರೆಸ್, ಪ್ರೇಮಾಚಾರಿ, ಅಮ್ಮಾವ್ರ ಗಂಡ, ಬೆಳದಿಂಗಳ ಬಾಲೆ, ತುಂಬಿದ ಮನೆ, ಕಾಕನ ಕೋಟೆ , ಕಿಟ್ಟು ಪುಟ್ಟು, ಈ ಜೀವ ನಿನಗಾಗಿ, ಮೇಘ ಮಂದಾರ, ಅರುಣ ರಾಗ ಇನ್ನೂ ಕೆಲವು ಚಿತ್ರಗಳಲ್ಲಿ ವೈವಿಧ್ಯಮಯ ಪಾತ್ರಗಳಲ್ಲಿ ನಟಿಸಿರೋದು ನೋಡಬಹುದು.

ಪ್ರಬುದ್ಧ ನಟ ಚಿತ್ರರಂಗಕ್ಕೆ ಬರಲು ಟಿ ಪಿ ಕೈಲಾಸಂ ರವರ ನಾಟಕಗಳು, ಲೋಕನಾಥ್ ರವರು ಇಂಜಿನಿಯರಿಂಗ್ ಪದವೀಧರರು.

ಮೊದಲ ಚಿತ್ರ “ಸಂಸ್ಕಾರ ” ನಟನೆಗೆ ರಾಷ್ಟ ಪ್ರಶಸ್ತಿ ಲಭಿಸಿದೆ.

ಇವರು ನಟಿಸಿದ ಉಪ್ಪಿನಕಾಯಿ ಪಾತ್ರ ಜನಕ್ಕೆ ಅದೆಷ್ಟು ಮೆಚ್ಚುಗೆ ಆಯ್ತಂದ್ರೆ ಮಂಡ್ಯದಲ್ಲಿ ನಡೆದ ಭೂತಯ್ಯನ ಮಗ ಅಯ್ಯು ಚಿತ್ರದ ಶತದಿನೋತ್ಸವ ದಿನ ಒಂದು ಅಚ್ಚರಿ ಹುಟ್ಟಿಸುವ ಘಟನೆ ಸಮಾರಂಭ ನಡೆಯೋವಾಗ ಒಬ್ಬ ಮಹಿಳೆನ ಒಳಗೆ ಬಿಡದ ಸೆಕ್ಯೂರಿಟಿ ತಳ್ಳಿ ಒಳಗೆ ಬಂದು ಲೋಕನಾಥ್ ರವರಿಗೆ ತಮ್ಮ ಬ್ಯಾಗ್ ನಿಂದ 4 ಬಾಟಲ್ ಉಪ್ಪಿನಕಾಯಿ ಕೊಟ್ಟು ಎಲ್ಲಾ ನೀವೇ ತಿನ್ನಿ ಜೊತೆಗೆ ನನ್ನ ಆಯಸ್ಸು ತಗೊಳಿ ಅಂದಾಗ ಅಲ್ಲಿದ್ದ ವಿಷ್ಣು ವಧ೯ನ್, ಲೋಕೇಶ್, ಎಂ ಪಿ ಶಂಕರ್, ದಿನೇಶ್, ಸಿದ್ದಲಿಂಗಯ್ಯ ಎಲ್ಲರೂ ಶಾಕ್ ಆದ್ರಂತೆ…

ಇವರ ಮೊಮ್ಮಗಳು ಸಿಂಧು ಲೋಕನಾಥ್ ನಟಿ, ಯಾರೇ ಕೂಗಾಡಲಿ , ಲವ್ ಇನ್ ಮಂಡ್ಯ, ಡ್ರಾಮಾ, ಲೈಫ್ ಇಷ್ಟೇನಾ ಚಿತ್ರಗಳಲ್ಲಿ ನಟನೆ.

ಹರಿಯ ಕಲಾವಿದರು ಹೃದಯ ಸಂಬಂಧಿ ಖಾಯಿಲೆ ಮತ್ತು ವಯೋವೃಧ್ಧ ಸಮಸ್ಯೆಯಿಂದ ಡಿಸೆಂಬರ್ 31 2018 ರಂದು ತಮ್ಮ 91 ವಯಸ್ಸಿನಲ್ಲಿ ನಮ್ಮನ್ನು ಅಗಲಿದರು.

ತಮ್ಮ ವಿಶಿಷ್ಟವಾದ ಅಭಿನಯದಿಂದ ಚಿತ್ರರಂಗದಲ್ಲಿ ಹೆಸರು ಮಾಡಿದ ನಟರಿಗೆ ನಮ್ಮ ನಮನಗಳು 🙏

ಇವರು ಕೊನೆಯಲ್ಲಿ ನಟಿಸಿದ ಧಾರಾವಾಹಿ ಪ್ರಿಯದಶಿ೯ನಿ, ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಿದೆ.

ಮತ್ತೆ ಹುಟ್ಟಿ ಬನ್ನಿ ಲೋಕನಾಥ್ ಅಂಕಲ್ 🙏

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply