ಬಿ. ಜಯಶ್ರಿ ಅಮ್ಮಅವರಿಗೆ ಜನುಮದಿನದ ಶುಭಾಶಯಗಳು…..
ಹುಟ್ಟಿದ್ದು ಬೆಂಗಳೂರಿನಲ್ಲಿ. ತಂದೆ ಬಸವರಾಜ್, ತಾಯಿ ಜಿ.ವಿ.ಮಾಲತಮ್ಮ. ಜಯಶ್ರೀ ವೃತ್ತಿರಂಗಭೂಮಿಯ ಹೆಸರಾಂತ ಗುಬ್ಬಿ ವೀರಣ್ಣನವರ ಮೊಮ್ಮಗಳು ಕೂಡಾ. ತನ್ನ ನಾಲ್ಕನೇ ವಯಸ್ಸಿನಲ್ಲಿಯೇ ರಂಗಭೂಮಿಗೆ ಪದಾರ್ಪಣೆ. ರಂಗಭೂಮಿಯ ಅಭಿನಯದಿಂದ ಗಳಿಸಿದ ಜನಪ್ರಿಯತೆ ಇವರನ್ನು ನಾಟಕಗಳ ನಿರ್ದೇಶನಕ್ಕೆ ಕೊಂಡೊಯ್ದಿತು. ಇವರು ಪ್ರಸಿದ್ಧ National School of Drama ದಿಂದ ಪದವಿ ಪಡೆದಿದ್ದಾರೆ. ರಂಗಭೂಮಿ ಮತ್ತು ಚಲನಚಿತ್ರದಲ್ಲಿ ಕೆಲಸ ಮಾಡುತ್ತಿರುವ ಹಿರಿಯ ಕಲಾವಿದರಲ್ಲಿ ಒಬ್ಬರಾಗಿದ್ದಾರೆ. ಪ್ರಸಿದ್ಧ ಗಾಯಕರೂ ಆಗಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ ನಮ್ಮ ಸರ್ಕಾರ ಅವರನ್ನು 2010 ರಲ್ಲಿ ರಾಜ್ಯಸಭೆ ಸದಸ್ಯರನ್ನಾಗಿ ಆಯ್ಕೆ ಮಾಡಿದ್ದಾರೆ. ಇವರು ರಂಗಾಯಣದ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಇವರು 2013 ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಯನ್ನು ಕೂಡ ಪಡೆದಿದ್ದಾರೆ. ಹಂಸಲೇಖ ಅವರ ಸಾಹಿತ್ಯ ಸಂಗೀತದಲ್ಲಿ ಜಯಶ್ರೀ ಅವರ ತತ್ವಪದ ಕೇಳೋದೆ ಒಂದು ಸೊಗಸು.
ರಂಗಭೂಮಿಯವರಾದರೂ ಗಾಯನದಲ್ಲಿ ಪ್ರವೀಣರು, ಯಾವ ಹಾಡು ಕೊಟ್ಟರೂ ಹಾಡೋಕೆ ಸೈ.

ಇವರು ಕೆಲವು ಜನಪ್ರಿಯ ಗೀತೆಗಳು :
ಬಂದ ನೋಡಮ್ಮ ಬಂದ ನೋಡಮ್ಮ ನಮ್ಮ ಕಂಬ ಈ ಕದಂಬ – ಕದಂಬ, ಹೆಣ್ಣಿಂದ ನಾಕಾ ಹೆಣ್ಣಿಂದ ನರಕ ಅಂದೋನ್ಯಾವನೂ ಜೋಗಯ್ಯ – ಕೌರವ. ಕಾರ್ ಕಾರ್ ಕಾರ್ ಎಲ್ನೋಡಿ ಕಾರ್ – ನನ್ನ ಪ್ರೀತಿಯ ಹುಡುಗಿ, ರಂಭೆ ಈ ವೈಯ್ಯಾರದ ರಂಭೆ – ಆದಿತ್ಯ, ಹಟ ಹಟ ಹಟ ಗೆಲ್ಲೋನಿಗೆ ಬೇಕು ಹಟ -ಹಟವಾದಿ, ಚಿಕು ಬುಕು ರೈಲು ನಿಲ್ಲೋದಿಲ್ಲ – ಜೋಗಿ, ಕುಲುಕಬೇಡ ಕುಲುಕಬೇಡ ಸಿಲ್ಕು -ದಾಸ ..

ಇವರು ನಟಿಸಿದ ಚಿತ್ರಗಳು ಮೂಕಜ್ಜಿಯ ಕನಸುಗಳು, ಕೇರ್ ಆಫ್ ಫುಟ್ ಪಾತ್, ನಾಗಮಂಡಲ, ಚಿತ್ರಕಥಾ, ದುಗಿ೯,ಕೌರವ, ಹೂಮಳೆ, ಮಾಸ್ತಿ ಗುಡಿ ಇನ್ನೂ ಹಲವು.
ಕೌರವ ದಲ್ಲಿ ಬಿ ಸಿ ಪಾಟೀಲ್ ಅಮ್ಮನ ಪಾತ್ರ ನನಗೆ ಬಹಳ ಇಷ್ಟವಾದದ್ದು,ನಾಗಮಂಡಲದಲ್ಲಿ ಇವರ ಪಾತ್ರ ಜನಮೆಚ್ಚುಗೆ ಗಳಿಸಿದೆ.

ಕಂಠದಾನ ಕಲಾವಿದರಾಗಿ ಕಾಂಚನ, ಜಯ ಪ್ರದ, ಸುಮಲತ, ಗಾಯಿತ್ರಿ, ಅಂಬಿಕ, ಪದ್ಮಪ್ರಿಯ, ಮಾಧವಿ, ರೂಪಾದೇವಿ … ಹಿನ್ನೆಲೆ ಧ್ವನಿ ನೀಡಿದ್ದಾರೆ.
ದೇವರು ಇವರಿಗೆ ಆಯಸ್ಸು ಆರೋಗ್ಯ ಭಾಗ್ಯವನ್ನು ಕೊಟ್ಟು ಕಾಪಾಡಲಿ ಇನ್ನೂ ಹೆಚ್ಚಿನ ಗೀತೆಗಳು ಇವರ ಧ್ವನಿಯಲ್ಲಿ ಮೂಡಿಬರಲಿ