ಎದೆಗಾರಿಕೆಯನ್ನ ಅಡಿಪಾಯವಾಗಿಸಿ ಭೂಗತ ಲೋಕದ ದೊರೆಯಾಗಿ ಮೆರೆದೆ “ಎಂ. ಪಿ. ಜಯರಾಜ್” ಅವರ ಆತ್ಮ ಚರಿತ್ರೆ ” ಹೆಡ್ಡು ಬುಷ್ಷು” ಅನ್ನೋ ಶೀರ್ಷಿಕೆಯಲ್ಲಿ ಸಿನಿಮಾ ತಯಾರಾಗಿದೆ. ಸಿನಿಮಾನ ಖುದ್ದು ಡಾಲಿ ಧನಂಜಯ ಅವರೇ ನಿರ್ಮಿಸಿ ಎಂ. ಪಿ ಜಯರಾಜ್ ಆಗಿ ಬೆಳ್ಳಿ ಪರದೆಯ ಮೇಲೆ ಪ್ರತ್ಯಕ್ಷವಾಗಲಿದ್ದಾರೆ, ಸಿನಿಮಾಗೆ ಆಕ್ಷನ್ ಕಟ್ ಹೇಳಿರೋದು ಶೂನ್ಯ ಎಂಬ ನವ ನಿರ್ದೇಶಕ, ಸಂಗೀತವನ್ನ ಚರಣ್ ರಾಜ್ ಒದಗಿಸಿದ್ದು, ಕರಮ್ ಚಾವ್ಲಾ ಛಾಯಾಗ್ರಹಣವನ್ನ ನಿಭಾಯಿಸಿದ್ದಾರೆ. ಇನ್ನು ಚಿತ್ರದ ಮೂಲ ಕಥೆ ಜೊತೆಗೆ ಸಂಭಾಷಣೆಯನ್ನ ಬರೆಯುವ ಹೊಣೆಗಾರಿಕೆ “ಅಗ್ನಿ ಶ್ರೀಧರ್” ಅವರದಾಗಿದೆ. ಸಿನಿಮಾದ ಚಿತ್ರೀಕರಣ ಸಂಪೂರ್ಣವಾಗಿದ್ದು, ಇಲ್ಲಿಯ ವಾಡಿಕೆಯಂತೆ ಕಡೆಯ ದೃಶ್ಯದ ಚಿತ್ರೀಕರಣದ ನಂತರ, ಕ್ಯಾಮೆರಾಗೆ ಕುಂಬಳಕಾಯಿಯನ್ನ ನೀವಾಳಿಸಿ ಒಡೆಯಲಾಯುತು. ಇನ್ನುಳಿದಂತೆ ಸಿನಿಮಾದ ತಾಂತ್ರಿಕ ವರ್ಗದವರ ಕೆಲಸ ಭರದಿಂದ ಸಾಗಿದೆ .
ಸಿನಿಮಾದ ಶೂಟಿಂಗ್ ಯಶಸ್ವಿಯಾಗಿ ಮುಗಿದ ಸಂತಸದಲ್ಲಿ ಇಡೀ ಚಿತ್ರತಂಡ ತಮಟೆಯ ಏಟಿಗೆ ಕುಣಿದು ಕುಪ್ಪಳಿಸಿದರಿ ವಿಶೇಷವೆಂದ್ರೆ ಅಗ್ನಿ ಶ್ರೀಧರ ಅವರು ಕೂಡ ಭಾಗಿಯಾಗಿ ಹೆಜ್ಜೆ ಹಾಕುವ ಮೂಲಕ ಎಲ್ಲರ ಜೋಶ್ ಹೆಚ್ಚಿಸಿದ್ರು.
ಭೂಗತ ಜಗತ್ತಿಗೆ ಸಂಭಂದಿಸಿದ ಹಾಗೆ 80ರ ದಶಕದಲ್ಲಿ ನಡೆದ ಹಲವಾರು ಘಟನೆ- ಸಂಗತಿಗಳಿಗೆ ಅಗ್ನಿ ಶ್ರೀಧರ್ ಅವರ ಕಣ್ಣು ಮತ್ತು ಲೇಖನೆ ಸಾಕ್ಷಿಯಾಗಿವೆ. ಭೂಗತ ಲೋಕದ ಕಥೆಯೊಂದು ಸಿನಿಮಾವಾಗ್ತಿದೆ ಅಂದ್ರೆ ಅಲ್ಲಿ ರಕ್ತದ ಹೊಳೆ ಹರಿಯುತ್ತೆ ಅನ್ನೋದು ಸಾಮಾನ್ಯವಾಗಿ ಎಲ್ಲರಿಗೂ ಬರೋ ಆಲೋಚನೆ, ಆ ಮಾತಿಗೆ -ಚಿಂತನೆಗೆ ವ್ಯತಿರುಕ್ತವಾಗಿ ಕಥೆ ಕಥಾನ ವಸ್ತುವನ್ನು ಸೃಷ್ಟಿಸಿ ಎಲ್ಲರ ಶ್ಲಾಘನೆಗೆ ಕಾರಣವಾದರೂ. ಆ ದಿನಗಳು- ಎದೆಗಾರಿಕೆ ಸಿನಿಮಾಗಳಲ್ಲಿ ತಮ್ಮ ನುಣುಪಾದ ಬರವಣಿಗೆಯ ಮೂಲಕ ಜಾದು ಮಾಡಿದ ಮಾಂತ್ರಿಕ ಮತ್ತೆ ಹೆಡ್ಡು ಬುಷ್ಷ ಚಿತ್ರದಲ್ಲಿ ಹೊಸ ಮೋಡಿ ಮಾಡಲಿದ್ದಾರೆ ಎಂಬುದು ಸಿನಿ ಪ್ರಿಯರ ಧೃಢವಾದ ನಂಬಿಕೆಯಾಗಿದೆ.