ಹೊಸ ವರ್ಷದ ಶುಭ ಕಾಮನೆಗಳು

Dr Raj

ಎರಡು ಸಾವಿರದ ಇಪ್ಪತ್ತು – ಬರೀ ಸಾವು ನೋವು ಗಳಲ್ಲೇ ಕಳೆದು ಹೋಯ್ತು. ಕೊರೋನಾಸುರ ಎಂಬ ರಾಕ್ಷಸ ಇಡೀ ವಿಶ್ವವನ್ನೇ ಅಲ್ಲೊಲ್ಲ ಕಲ್ಲೊಲ್ಲ ಮಾಡಿಬಿಟ್ಟ. ಸಾವಿರಾರು ಬಲಿ ಪಡೆದ. ಹಾಗೂ ಹೀಗೂ ತೆವಳಿಕೊಂಡು 2020 ಕ್ಕೆ ಒಂದು ಗುಡ್ ಬೈ ಹೇಳಿಯೂ ಆಯಿತು. ಇನ್ನು ನಮ್ಮ ಮುಂದಿದೆ 2021.

ಹೌದು. ನನಗೆ ಹಣ ಬೇಕು, ಮನೆ ಬೇಕು, ಕಾರ್ ಬೇಕು, ಬಂಗಲೆ ಬೇಕು, ಪ್ರಸಿದ್ಧಿ ಬೇಕು, ಅಧಿಕಾರ ಬೇಕು – ಎಂದೆಲ್ಲಾ ಬೇಕುಗಳ ಹಿಂದೆ ಬಿದ್ದು ಅಲೆಯುತ್ತಿದ್ದ ಏಳು ನೂರು ಕೋಟಿ ಮಾನವ ಜೀವಿಗಳೆಲ್ಲರಲ್ಲೂ ಇಂದು ಕೇವಲ ಒಂದೇ ಪ್ರಾರ್ಥನೆ – ನನಗೆ ಅರೋಗ್ಯ ಬೇಕು. ನನ್ನ ಜೀವ ಉಳಿಯಬೇಕು. 2020 ರ ನೋವುಗಳು ಮರುಕಳಿಸದಿರಲಿ. ಜಗವೆಲ್ಲಾ ಶಾಂತಿ ಸೌಭಾಗ್ಯದಿಂದ ತುಂಬಿರಲಿ ಎಂದು ದೇವರ ಬಳಿ ಕೈ ಮುಗಿಯದವರೇ ಇಲ್ಲ. ಪ್ರತಿಯೊಬ್ಬರೂ ಜಾತಿ ಮತ ಧರ್ಮ ಬೇಧವಿಲ್ಲದೆ ದೇವರಲ್ಲಿ ಮೊರೆಯಿಡುತ್ತಿದ್ದಾರೆ.
ಕನ್ನಡದ ಕಲಾ ದೈವ – ಅಣ್ಣಾವ್ರು. 2021 ಪೂರ್ತಿ ನೆಮ್ಮದಿ, ಸುಭಿಕ್ಷೆಯಿಂದ ತುಂಬಿರಲಿ ಎಂದು ಹೊಸ ವರ್ಷದ ಆ ದಿನ ಅಣ್ಣಾವರೆಂಬ ದೇವರ ಮುಂದೆ ಸಾಲಾಗಿ ಪ್ರಾರ್ಥನೆ ಸಲ್ಲಿಸಿ ಬಂದರು – ಕನ್ನಡದ ಕಳೆಯ ಆರಾಧಕರೆಂಬ ನೂರಾರು ಭಕ್ತರು.

ಹೊಸ ವರ್ಷದ ಅಂಗವಾಗಿ ಅಣ್ಣಾವರೆಂಬ ಆ ದೇವರ ಪುತ್ಥಳಿಯನ್ನು ಅವರ ಪುಣ್ಯಭೂಮಿಯಲ್ಲಿ ವಿಶೇಷವಾಗಿ ಹೂಗಳಿಂದ ಅಲಂಕೃತಗೊಳಿಸಲಾಗಿತ್ತು. ಅಣ್ಣಾವ್ರು ಮತ್ತು ಅಮ್ಮಾವರು ಇಬ್ಬರಿಗೂ ಸಾಂಗವಾಗಿ ಪೂಜೆ ನೆರವೇರಿಸಲಾಯಿತು. ಕನ್ನಡ ಹೋರಾಟಗಾರ ಶ್ರೀ ರೂಪೇಶ್ ರಾಜಣ್ಣ ಅವರ ಉಪಸ್ಥಿತಿಯಿಂದಾಗಿ ಆ ಪುಣ್ಯಭೂಮಿ ವಿಶೇಷ ಕಳೆಗಟ್ಟಿತ್ತು. ನೂರಾರು ಅಭಿಮಾನಿಗಳಿಂದ ಅಣ್ಣಾವ್ರಿಗೆ ಜೈಘೋಷಗಳು, ಪ್ರಾರ್ಥನೆಗಳೊಂದಿಗೆ ಪುಣ್ಯಭೂಮಿ ತುಂಬಿ ಹೋಗಿತ್ತು. ಇತ್ತೀಚೆಗಷ್ಟೇ ಯಾಹೂ ನಡೆಸಿದ ಸಮೀಕ್ಷೆಯಲ್ಲಿ ಸರ್ವಶ್ರೇಷ್ಠ ನಟರಾಗಿ ಹೊರಹೊಮ್ಮಿದ ಪ್ರಯುಕ್ತ, ಓಟು ಹಾಕಿದವರಿಗೆಲ್ಲ ವಿಶೇಷ ಧನ್ಯವಾದಗಳನ್ನು ತಿಳಿಸಲಾಯಿತು. ವಿಶ್ವಮಾನವ ಡಾ. ರಾಜ್ಕುಮಾರ್ ಎಂಬ ಪುಸ್ತಕದ ಪೋಸ್ಟರ್ ಅನ್ನು ಸಹ ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.

ಇತ್ತೀಚೆಗಷ್ಟೇ ಬಿಡುಗಡೆಯಾದ ಸಿನಿಮಾ ಸುದ್ದಿಗಳ ಸೂಪರ್ ಮಾರ್ಕೆಟ್ – www.chitrodyama.com ನಲ್ಲಿ ಪ್ರಕಟಿತ ಅಂಕಣಗಳ ಸಂಗ್ರಹ – “ಚಿತ್ರೋದ್ಯಮದ ಚಿತ್ತಾರಗಳು -1” ಪುಸ್ತಕ ಪ್ರತಿಗಳನ್ನು ಅಣ್ಣಾವ್ರ ಅಭಿಮಾನಿಗಳಿಗೆ ಹಂಚಲಾಯಿತು. ೨೦೨೧ ಸಾವು ನೋವುಗಳಿಲ್ಲದೆ ಕಳೆಯಲಿ, ಹೊಸ ಭರವಸೆಯ ಬೆಳಕು ಮೂಡಲಿ ಎಂಬುದೇ ಕೋಟ್ಯಂತರ ಅಭಿಮಾನಿಗಳ ಪ್ರಾರ್ಥನೆ.

ಮಗದೊಮ್ಮೆ www.chitrodyama.com ನ ಸಮಸ್ತ ಓದುಗರಿಗೆ ಹೊಸ ವರ್ಷದ ಶುಭ ಕಾಮನೆಗಳು

admin (TNS)

admin (TNS)

ಸುಂದರ ಉದ್ಯಾನವನಗಳು, ಸಾಫ್ಟ್ವೇರ್ ಕಂಪನಿಗಳಿಂದ ಚಿರಪರಿಚಿತ ಊರು ಬೆಂಗಳೂರು.ಅಲ್ಲಿಂದ ಸುಮಾರು 100 ಕಿಲೋಮಿಟೆರ್ ದೂರದಲ್ಲಿರುವ ಊರು ಮಧುಗಿರಿ. "ಧರೆಯೊಳೆಲ್ಲೆ ಇರಲಿ ನಾನು ಮರೆಯಲಾರೆ ಮಧುಗಿರಿ" ಎಂದು ಹೊಯ್ಸಳ ದೊರೆಗಳಿಂದ ಹೊಗಳಿಸಿಕೊಂಡ ಇದೇ ಮಧುಗಿರಿ ಯ ತೊಂಡೋಟಿ ಎಂಬ ಒಂದು ಕುಗ್ರಾಮದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿದ ಇವರು ಅದೇ ಊರಿನಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಮುಗಿಸಿ, ತುಮಕೂರು ಹಾಗು ಬೆಂಗಳೂರಿನಲ್ಲಿ ತಮ್ಮ ಉನ್ನತ ವಿದ್ಯಾಭ್ಯಾಸ ವನ್ನು ಪೂರೈಸಿದರು. ನಂತರ ಮಲೇಷಿಯಾದ ಕೌಲಲಮ್ಪುರದಲ್ಲಿ ಕಂಪ್ಯೂಟರ್ ಇಂಜಿನಿಯರ್ (ಇಂಜಿನ್ ಗೆ ನೀರು ಹಾಕುವ) ಕೆಲಸ ಮಾಡುತ್ತಿದ್ದಾರೆ. ಎಸ್. ಎಲ್ ಭೈರಪ್ಪ, ಬೇಂದ್ರೆ ಯವರ ಕನ್ನಡ ಸಾಹಿತ್ಯದ ಜೊತೆ ಜೊತೆಗೆ ಯಂಡಮೂರಿ, ದೇವುಡು ರವರ ತೆಲುಗು ಸಾಹಿತ್ಯಗಳನ್ನು ಓದುವ ಹವ್ಯಾಸ ಗಳನ್ನೂ ಇಟ್ಟುಕೊಂಡ ಇವರು ಕೆಲವು ಕವನ ಹಾಗು ಕತೆಗಳನ್ನು ಸಹ ಬರೆದಿದ್ದಾರೆ. ಇವರ "ನಾನು ನಾನೇನಾ" ಎಂಬ ಕಾದಂಬರಿ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಕನ್ನಡ ಚಿತ್ರೋದ್ಯಮದ ವಿಶಿಷ್ಟ ಸಂಗತಿಗಳನ್ನು ಪರಿಚಯಿಸಲೆಂಬ ಉದ್ದೇಶದಿಂದ ಚಿತ್ರೋದ್ಯಮ.ಕಾಂ ಎಂಬ ಈ ವೆಬ್ಸೈಟ್ ಅನ್ನು ತೆರೆದು ತನ್ಮೂಲಕ ಕನ್ನಡ ಚಿತ್ರೋದ್ಯಮಕ್ಕೆ ತನ್ನ ಅಳಿಲು ಸೇವೆಯನ್ನು ಸಲ್ಲಿಸುತ್ತಿದ್ದಾರೆ.

Leave a Reply