“ಜೋಗದ ಸಿರಿ ಬೆಳಕಿನಲ್ಲಿ
ತುಂಗೆಯ ತೆನೆ ಬಳುಕಿನಲ್ಲಿ
ಸಹ್ಯಾದ್ರಿಯ ಲೋಹದದಿರ
ಉತ್ತುಂಗದ ನಿಲುಕಿನಲ್ಲಿ
ನಿತ್ಯ ಹರಿದ್ವರ್ಣ ವನದ
ತೇಗ ಗಂಧ ತನುಗಳಲ್ಲಿ
ನಿತ್ಯೋತ್ಸವ ತಾಯೆ ನಿತ್ಯೋತ್ಸವ
ನಿನಗೆ ನಿತ್ಯೋತ್ಸವ ತಾಯೆ ನಿತ್ಯೋತ್ಸವ “
ಪದ್ಮಶ್ರೀ ಪುರಸ್ಕ್ರುತ ನಾಡೋಜ ಡಾ. ಕೆ. ಎಸ್ ನಿಸಾರ್ ಅಹಮದ್ ರವರು ನಮ್ಮನ್ನು ಅಗಲಿದ್ದಾರೆ, ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಮತ್ತೊಮ್ಮೆ ಹುಟ್ಟಿ ಬರಲಿ ಎಂದು ದೇವರಲ್ಲಿ ಪ್ರಾಥಿ೯ಸೋಣ 🙏 ಇವರ ಸಾಹಿತ್ಯ ಸಾಧನೆ ಕೇವಲ ಕನ್ನಡ ಭಾಷೆಯಲ್ಲದೆ ತಮಿಳು, ತೆಲುಗು, ಮಲಯಾಳಂ, ಹಿಂದಿ ಭಾಷೆಗೆ ತಜು೯ಮೆಯಾಗಿದೆ, ನಮ್ಮ ಬೆಂಗಳೂರಿನ ದೇವನಹಳ್ಳಿ ಯವರು ಎಂದು ಹೇಳೋಕೆ ಹೆಮ್ಮೆ ಆಗುತ್ತೆ.
ಇವರು ಮನಸು ಗಾಂಧಿ ಬಜಾರು, ನಿತ್ಯೋತ್ಸವ, ಸಂಜೆ ಐದರ ಮಳೆ, ಮನದೊಂದಿಗೆ ಮಾತುಕಥೆ , ನವೋಲ್ಲಾಸ, ನಾನೆಂಬ ಪರಕೀಯ ಅನಾಮಿಕ ಮುಂತಾದ ಕವನ ಸಂಕಲನಗಳು, ವೈಚಾರಿಕ ಕೃತಿಗಳು, ಮಕ್ಕಳ ಕಥೆಗಳನ್ನು ರಚಿಸಿದ್ದಾರೆ,
ಇವರ ಸಾಧನೆಗೆ ಪ್ರಶಸ್ತಿಗಳು ಹರಸಿ ಬಂದಿವೆ, ಅವುಗಳಲ್ಲಿ ಕೆಲವು ಗಮನಿಸುವುದಾದರೆ
ಕನಾ೯ಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ -1982
ಪಂಪ ಪ್ರಶಸ್ತಿ -2017
ನಾಡೋಜ ಪ್ರಶಸ್ತಿ -2003
ರಾಜ್ಯೋತ್ಸವ ಪ್ರಶಸ್ತಿ -1981
ಪದ್ಮಶ್ರೀ ಪ್ರಶಸ್ತಿ -2008
ಕುವೆಂಪು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ
ಕೆಂಪೇಗೌಡ ಪ್ರಶಸ್ತಿ
ಇವರು 2007 ರಲ್ಲಿ ಶಿವಮೊಗ್ಗ ದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಕವಿ, ಕಲಾವಿದರ ಬಗ್ಗೆ ಡಾ. ರಾಜ್ ಕುಮಾರ್ ರವರಿಗೆ ಅಪಾರ ಗೌರವ
ಯುಗದ ಕವಿ,ನಿತ್ಯೋತ್ಸವದ ಹರಿಕಾರ ಮತ್ತು ಅಣ್ಣಾವ್ರ ಸ್ನೇಹ ಬಹಳ ಚೆನ್ನಾಗಿತ್ತು. ಪರಸ್ಪರ ಇಬ್ಬರಲ್ಲೂ ಅಂಥ ನಿರ್ಮಲ ಸ್ನೇಹಭಾವ ಇತ್ತು. ರಾಜ್ ಕುಮಾರ್ ಅವರನ್ನು ತಮ್ಮ ಮನೆಯ ಊಟಕ್ಕೆ ಒಮ್ಮೆ ಆಹ್ವಾನಿಸಿದರು ಕವಿ ನಿಸಾರ್ ಅಹ್ಮದ್ ಅವರು. ಘಮಭರಿತ ಬಿಸಿಬಿಸಿ ಬಿರಿಯಾನಿ ಊಟ ನಿಸಾರರ ಮನೆಯಲ್ಲಿ ರಾಜ್ ಗಾಗಿ ಸಿದ್ದವಾಗಿತ್ತು. ಮಾಂಸದ ಊಟದಲ್ಲಿ ಒಂದು ಕೈ ಮೇಲೆ ಎಂಬಂತೆ ಬಿರಿಯಾನಿಯನ್ನು ಅವತ್ತು ಚಪ್ಪರಿಸಿ ತಿಂದಿದ್ದರು ಡಾ. ರಾಜ್ ಕುಮಾರ್ ರವರು. ಊಟ ಮುಗಿದ ಬಳಿಕ ರಾಜ್ ಕುಮಾರ್ ರವರು ಕೈತೊಳೆಯಲು ಹೋದರು. ನಿಸಾರ್ ಅಹ್ಮದ್ ಅವರು ಅಣ್ಣಾವ್ರಿಗೆ ಕೈ ತೊಳೆಯಲು ಬಿಸಿನೀರನ್ನು ಕೊಟ್ಟಾಗ, ಅಣ್ಣಾವ್ರು ” ಬೇಡ ಬಿಸಿನೀರಿನಲ್ಲಿ ಕೈ ತೊಳೆದರೆ ಬಿರಿಯಾನಿ ವಾಸನೆ ಹೋಗಿಬಿಡುತ್ತದೆ.” ಎಂದು ಹೇಳಿ ತಣ್ಣೀರಿನಲ್ಲೇ ಕೈ ತೊಳೆದರಂತೆ.
ರಾಜ್ ಅವರ ಇಂಥ ರುಚಿಕಟ್ಟು ಊಟದ ಸವಿನೆನಪು ನಿಸಾರರಲ್ಲಿ ಶಾಶ್ವತವಾಗಿ ಉಳಿದು ಹೋಯ್ತು. ನಿಸಾರರಲ್ಲಿ ರಾಜ್ ಬಗ್ಗೆ ಇವತ್ತಿಗೂ ಧನ್ಯತಾ ಭಾವವಿತ್ತು. 💕
ನಾನು ಇವರನ್ನು ಒಂದು ಸಮಾರಂಭದಲ್ಲಿ ಭೇಟಿ ಮಾಡಿದ್ದು ನನ್ನ ಸೌಭಾಗ್ಯ ಎಂದೇ ಭಾವಿಸುವೆ.
“ಹೋಗಿ ಬನ್ನಿ ಮಹನೀಯರೆ ನಿಮ್ಮ ಬರುವಿಕೆಯನ್ನು ನಮ್ಮ ಅಣ್ಣಾವೃ ಕಾದುನೋಡುತ್ತಿರುತ್ತಾರೆ, ನೀವು ಅವರ ಜೊತೆ ಇದ್ದರೆ ಕಾಲ ಕಳೆಯುವುದು ತಿಳಿಯದು”.
ಭಾವಪೂರ್ಣ ನಮನಗಳು 😥💐🙏