ಅಂಬರೀಷ್ ರವರಿಗೆ ಅಣ್ಣಾವ್ರಂದ್ರೆ ಗೌರವ ಮತ್ತು ಪ್ರೀತಿ, ಅಣ್ಣಾವ್ರಿಗೂ ಸಹ ಅಂಬರೀಷ್ ಇದ್ದರೆ ಅಲ್ಲಿ ನಗುವಿಗೆ ಹಾಸ್ಯಕ್ಕೆ ಕೊನೆಯಿಲ್ಲ ಅಂತ ಹೇಳ್ಕೊಂಡಿದ್ದಾರೆ, ಅಂಬಿ ರವರು ಅಣ್ಣಾವ್ರ ಚಿತ್ರಗಳನ್ನು ನೋಡಿಕೊಂಡು ಬೆಳೆದವರು, ಅಣ್ಣಾವೃ ಇವರ ಕೆಲವು ಚಿತ್ರಗಳಲ್ಲಿ ಒಂದೊಂದು ಹಾಡು ಇರುತ್ತಿತ್ತು ಮಣ್ಣಿನ ದೋಣಿಯ “ಮೇಘ ಬಂತು ಮೇಘ“, ಸಪ್ತಪದಿ ಚಿತ್ರದ “ಸಪ್ತಪದೀ ಇದು ಸಪ್ತಪದೀ “,ಹೃದಯ ಹಾಡಿತು ಚಿತ್ರದ “ನಲಿಯುತಾ ಹೃದಯ “, ಮಿಡಿದ ಹೃದಯಗಳು ಚಿತ್ರದ “ತಂದೆ ಕೊಡಿಸೋ ಸುರೆ ” ಹೀಗೇ, ಪ್ರತಿಯೊಬ್ಬ ಕಲಾವಿದರಿಗೆ ಅಣ್ಣಾವ್ರ ನಟಿಸುವ ಕನಸು ಮತ್ತು ಆಸೆ ಇರುತ್ತೆ, ಅದೇ ಕನಸು ನನಸಾಗಿದ್ದು “ಒಡಹುಟ್ಟಿದವರು ” ಚಿತ್ರದ ಮೂಲಕ, ಈ ಚಿತ್ರ ಬಿಡುಗಡೆಯಾಗಿ ನಂತರ ಭಜ೯ರಿ ಹಿಟ್ಟಾಗಿದೆ. ಚಲನಚಿತ್ರ ಕಲಾವಿದರ ಸಂಘ ಕಟ್ಟಿ ಬೆಳೆಸಬೇಕೆಂಬ ಕನಸು ಅಣ್ಣಾವ್ರಿಗಿದ್ದನ್ನು ನನಸು ಮಾಡಿದ ಮಂಡ್ಯದ ಗಂಡು.
“ಆಹುತಿ ” ಚಿತ್ರದ ನಾಯಕಿ “ಸುಮಲತ ” ರವರನ್ನು ಚಿತ್ರೀಕರಣದಲ್ಲಿ ಪ್ರೀತಿ ಮಾಡಿ ನಂತರ ಪ್ರೇಮಕ್ಕೆ ತಿರುಗಿ ನಿಜವಾಗಿಯೂ ಆಹುತಿಯಾದರು ಅಂದ್ರೆ ಇಷ್ಟ ಪಟ್ಟು ಮದುವೆಯಾದರು, ಮುದ್ದಿನ ಮಗ “ಮರಿ ರೆಬಲ್ ” ಅಭಿಷೇಕ್ ಮಗನನ್ನು ಚೆನ್ನಾಗಿ ನೋಡಿಕೊಂಡರು, ಸುಮಲತ ರವರು ಚಿತ್ರರಂಗದಲ್ಲಿ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದವರು, ಸ್ಪುರದ್ರೂಪಿ ನಟಿ ತಮ್ಮ ಗಂಡನನ್ನು ಅಷ್ಟೇ ಚೆನ್ನಾಗಿ ನೋಡಿಕೊಂಡರು, ಇಬ್ಬರೂ ಆದಶ೯ ದಂಪತಿಗಳ ಹಾಗೆ.
ಇವರು ಮಂಡ್ಯ ಲೋಕಸಭೆ ಕ್ಷೇತ್ರದ ಚುನಾವಣೆಯಲ್ಲಿ ಗೆದ್ದು ಅಲ್ಲಿನ ಜನರಿಗೆ ತಮ್ಮ ಕೈಲಾದ ಸೇವೆ ಮಾಡುತ್ತಿದ್ದಾರೆ, ಮಗ ಈಗ ಚಿತ್ರಗಳಲ್ಲಿ ನಟಿಸುವ ತಯಾರಿ ಮಾಡಿ ಅಮರ್ ಅನ್ನೋ ಹೆಸರಿನ ಚಿತ್ರದಲ್ಲಿ ನಟಿಸಿ ಯುವನಟ ಎನಿಸಿಕೊಂಡು ಚಿತ್ರಗಳಲ್ಲಿ ನಟನೆಯಲ್ಲಿ ರಂಜಿಸುತ್ತಿದ್ದಾರೆ.
ರೆಬಲ್ ಸ್ಟಾರ್ ನಟನೆಯಲ್ಲದೆ ರಾಜಕಾರಣದಲ್ಲೂ ಮಿಂಚಿದ್ದಾರೆ, ವಾತಾ೯ ಮತ್ತು ಪ್ರಸಾರ ಖಾತೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಮಾಜಿ ವಸತಿ ಸಚಿವರಾಗಿದ್ದರು. ತಮ್ಮ ಅವಧಿಯಲ್ಲಿ ಮಂಡ್ಯ ಜನರಿಗೆ ಹಲವಾರು ರೀತಿಯ ಯೋಜನೆಗಳು ಇವರ ಅವಧಿಯಲ್ಲಿ ತಂದಿದ್ದಾರೆ. ಎಷ್ಟೋ ಜನ ಬಡವರಿಗೆ ಸಹಾಯ ಮಾಡಿ ಕಲಿಯುಗ ಕಣ೯ ಅಂತ ಜನ ಕರೀತಾರೆ ಇವರನ್ನು.
ಇವರ ನಟನೆಗೆ ಪ್ರಶಸ್ತಿಗಳು ಹರಸಿ ಬಂದಿವೆ.
🌻ಅಂತ ಚಿತ್ರದ ಅಭಿನಯಕ್ಕೆ ಕನಾ೯ಟಕ ಸಕಾ೯ರಿಂದ ವಿಶೇಷ ಪ್ರಶಸ್ತಿ.
🍀ಮಸಣದ ಹೂವು ಚಿತ್ರಕ್ಕೆ ಕನಾ೯ಟಕ ಸಕಾ೯ರದ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ.
🌺ಒಲವಿನ ಉಡುಗೊರೆ ಚಿತ್ರದ ನಟನೆಗೆ ಅತ್ಯುತ್ತಮ ನಟ ಫಿಲಂ ಫೇರ್ ಪ್ರಶಸ್ತಿ.
🌲ಎನ್. ಟಿ. ಆರ್ ರಾಷ್ಟ್ರೀಯ ಪ್ರಶಸ್ತಿ.
🌸ಜೀವಮಾನ ಸಾಧನೆಗೆ ಫಿಲಂ ಫೇರ್ ಪ್ರಶಸ್ತಿ.
🐅ಆಂದ್ರ ಸಕಾ೯ರದ ನಂದಿ ಪ್ರಶಸ್ತಿ.
🐱ಜೀವಮಾನ ಸಾಧನೆಗೆ ಟಿವಿ 9 ವಾಹಿನಿಯ ಪ್ರಶಸ್ತಿ.
🦁ಕನಾ೯ಟಕ ಸಕಾ೯ರದ “ಡಾ ವಿಷ್ಣುವಧ೯ನ್ ” ಪ್ರಶಸ್ತಿ.
🐎ಕನಾ೯ಟಕ ವಿಶ್ವವಿದ್ಯಾಲಯ ಧಾರವಾಡ ದಿಂದ ಗೌರವ ಡಾಕ್ಟರೇಟ್ ಪದವಿ.
🦜ಸೈಮಾ ಸಂಸ್ಥೆಯಿಂದ ಜೀವಮಾನ ಸಾಧನೆ ಪ್ರಶಸ್ತಿ.
ಮತ್ತೊಂದು ವಿಷಯ ಚಿತ್ರರಂಗದ ಯಾವುದೇ ವಿಷಯವನ್ನು ಚಚಿ೯ಸಲು ಇವರು ಪ್ರಮುಖ ವ್ಯಕ್ತಿಯಾಗಿದ್ದರು, ಇವರ ಬಳಿ ಬಂದವರಿಗೆ ನ್ಯಾಯ ದೊರಕುತ್ತಿತ್ತು. ಮಾತಲ್ಲಿ ಒರಟರಾದರೂ ಮನಸ್ಸು ಮಾತ್ರ ಮಗುವಿನಂತೆ.
ಒಂದು ವೇಳೆ ಅವರು ಬದುಕಿದ್ದರೂ ಹೀಗೆ ಹೇಳ್ತಿದ್ರಾ.. “ಲೇ ಬಡ್ಡೆತವಾ ಹೋಗಿ ನಿಮ್ ಕ್ಯಾಮೆ ನೋಡ್ರುಲಾ, ನಿಮ್ ಆರೋಗ್ಯ ನೋಡ್ಕೊಳ್ರೋ, ಸುಮ್ನೆ ಕೇಕು, ಹಾರ ಅಂತ ದುಡ್ಡು ವೇಸ್ಟ್ ಮಾಡೋದ್ ಬದ್ಲೂ ಅದೇ ದುಡ್ನ ಬಡವರಿಗೆ ಸಹಾಯ ಮಾಡ್ರೋ, ನಿಮ್ ಹೆತ್ತ ತಂದೆ ತಾಯಿ ಚೆನಾಗ್ ನೋಡ್ಕೊಳ್ರೋ, ನನ್ ಆಶೀವಾ೯ದ ಯಾವಾಗ್ಲೂ ಇತೈ೯ತೆ ಬಡ್ಡೆತವ ” ಅಂತ ಹೇಳ್ತಿದ್ರು,
ಇಂಥ ಸಿಂಹ ಘಜ೯ನೆ ಮತ್ತೆ ಹುಟ್ಟಿ ಬರಲಿ ಎನ್ನೋಣ.
“ಓ ಗುಣವಂತ ಓ ಗುಣವಂತ ನಿನ್ನಾ ಗುಣಗಾನ ಮಾಡಲು ಪದಗಳೆ ಸಿಗುತಿಲ್ಲ…