ಹ್ಯಾಪಿ ಬರ್ತ್ಡೇ ರೆಬಲ್ ಸ್ಟಾರ್

“ಮೆರೆ ಸಪುನೋಂಕಿ ರಾಣಿ ಕಬ್ ಆವೋಗೀ ತೂ , ಏಯ್ ಬುಲ್ ಬುಲ್ ಮಾತಾಡಕಿಲ್ವಾ “

ಈ ಡೈಲಾಗ್ ಕೇಳ್ತಿದ್ರೆ ನಮ್ಮ ಕಣ್ಣ ಮುಂದೆ ಬರೋದು ಮಂಡ್ಯದ ಗಂಡು, ರೆಬಲ್ ಸ್ಟಾರ್, ಕಲಿಯುಗ ಕಣ೯ ಅಂಬರೀಷ್ ರವರು, ಇಂದು ಅವರ ಜನುಮ ದಿನ, ಮೊದಲು ಅವರಿಗೆ ಶುಭಾಶಯಗಳು ತಿಳಿಸೋಣ.

ನೋಡೋಕೆ ಕಟ್ಟು ಮಸ್ತಾದ ದೇಹ, ಬೆಂಕಿಯಂತೆ ಕಣ್ಣುಗಳು, ಯಾರೇ ನೋಡಿದರೂ ಇವರ ನೋಟಕ್ಕೆ ಬೀಳದ ಹುಡುಗೀರೇ ಇಲ್ಲ, ಆ ಸಿಂಹ ಘಜ೯ನೆ, ಆ ಗೌಡರ ಗತ್ತು ನೋಡಲೆರಡು ಕಣ್ಣುಗಳು ಸಾಲದು.

ಮಳವಳ್ಳಿ ಹುಚ್ಚೇಗೌಡ ಅಮರ್ನಾಥ್ (ಅಂಬರೀಷ್) ಇವರನ್ನು ಮೊದಲು ಸಿನಿ ಜಗತ್ತಿಗೆ ಪರಿಚಯಿಸಿದವರು ಚಿತ್ರ ಬ್ರಹ್ಮ ಎಂದೇ ಖ್ಯಾತಿಯಾದ ನಿದೇ೯ಶಕರು “ಪುಟ್ಟಣ್ಣ ಕಣಗಾಲ್ “ ರವರು “ನಾಗರಹಾವು” ಚಿತ್ರದ ಮೂಲಕ, ಖಳನಾಯಕನ ಪಾತ್ರ ಸಣ್ಣದಿದ್ದರೂ ಅವರು ಬಂದು ಹೋಗುವ ಆ 15 ನಿಮಿಷಗಳು “ಸಿಗರೇಟು ಸೇದುಕೊಂಡು ಸೈಕಲ್ ತಳ್ಳಿಕೊಂಡು ನಾಯಕಿಯನ್ನು ಚೇಡಿಸುವ ದೃಶ್ಯ ” ಮನೋಜ್ಞವಾಗಿ ಮಾಡಿ ಅಭಿಮಾನಿಗಳಿಗೆ ಚಿರಪರಿಚಿತರಾದರು. ಈ ಚಿತ್ರದಲ್ಲಿ ವಿಷ್ಣುವಧ೯ನ್ ಜೊತೆ ತೆರೆ ಹಂಚಿಕೊಂಡರು ಅಲ್ಲಿಂದ ಇವರ ಸಿನಿ ಪಯಣ ಶುರುವಾಯಿತು, ಶುಭ ಮಂಗಳ ಚಿತ್ರದ ಮೂಗನ ಪಾತ್ರ, ರಂಗನಾಯಕಿ ಚಿತ್ರದ ತಮ್ಮನ ಪಾತ್ರ, ಪಡುವಾರಹಳ್ಳಿ ಪಾಂಡವರು, ಮಸಣದ ಹೂವು ಚಿತ್ರದ ನಟನೆ ಅವರ ಪ್ರತಿಭೆಗೆ ಸಾಕ್ಷಿಯಾಗಿತ್ತು.

ಇವರು ನಟಿಸಿದ ಚಿತ್ರಗಳು ನಾಗರಹೊಳೆ, ಅಂತ, ಅವಳ ಹೆಜ್ಜೆ, ಚಕ್ರವ್ಯೂಹ, ಗಂಡಬೇರುಂಢ, ಮೂರು ಜನ್ಮ, ಮೃಗಾಲಯ, ಇಂದ್ರಜಿತ್, ಹಾಂಗ್ ಕಾಂಗ್ ನಲ್ಲಿ ಏಜೆಂಟ್ ಅಮರ್, ಒಂಟಿ ಸಲಗ, ನಮ್ಮೂರ ಹಮ್ಮೀರ, ರೌಡಿ ಎಂ ಎಲ್ ಎ, ಮಣ್ಣಿನ ದೋಣಿ, ಮುಂಜಾನೆಯ ಮಂಜು, ಪಾಳೇಗಾರ, ಮಂಡ್ಯದ ಗಂಡು, ಸೋಲಿಲ್ಲದ ಸರದಾರ,ಒಲವಿನ ಉಡುಗೊರೆ, ಮಿಡಿದ ಹೃದಯಗಳು, ಕಣ೯ನ ಸಂಪತ್ತು, ಆಪರೇಷನ್ ಅಂತ , ಹೃದಯ ಹಾಡಿತು, ಗೌಡ್ರು, ಕಲ್ಲರಳಿ ಹೂವಾಗಿ, ಶ್ರೀ ಮಂಜುನಾಥ ಇನ್ನೂ ಮುಂತಾದವು.

ಅಂತ ಚಿತ್ರದ “ಕುತ್ತೆ ಕನ್ವರ್ ನಹೀ ಕನ್ವರ್ ಲಾಲ್ ಬೋಲೋ ” ಈ ಡೈಲಾಗ್ ಎಷ್ಟು ಜನಪ್ರಿಯತೆ ಆಗಿತ್ತು ಅನ್ನೋದು ನಿಮಗೆಲ್ಲ ತಿಳಿಸಿದೆ, ಈ ಚಿತ್ರ ಹಿಂದಿಯಲ್ಲೂ ಸಹ ರೀಮೇಕ್ ಆಗಿತ್ತು, ಇವರ ನಟನೆ ಇವರ ವಾಯ್ಸ್ ಗೆ ಎಲ್ಲರೂ ಭಯ ಪಟ್ಟಿದ್ದು ನಿಜ.

ಅಂಬರೀಷ್ ಮತ್ತು ವಿಷ್ಣು ವಧ೯ನ್ ರವರು “ಕುಚುಕು ಗೆಳೆಯರು ” ಅಂತ ಕರೀತಿದ್ರು, ಒಬ್ಬರನ್ನೊಬ್ಬರು ಬಿಟ್ಟು ಇರಲಾರರು, ಸ್ನೇಹಕ್ಕೆ ಸಾಕ್ಷಿಯಾಗಿ ಇವರು ನಟಿಸಿದ ಚಿತ್ರ “ದಿಗ್ಗಜರು, ಹಬ್ಬ” ದಿಗ್ಗಜರು ಚಿತ್ರದ ಇಬ್ಬರ ನಡುವೆ ಇರುವ ಸ್ನೇಹ ಬಾಂಧವ್ಯ ತೆರೆಯ ಮೇಲೆ ನೋಡಿದಾಗ ನಿಜವಾದ ಸ್ನೇಹ ಈಗಿರಬೇಕು, ಸ್ನೇಹಿತನಿಗೋಸ್ಕರ ಪ್ರಾಣವನ್ನು ಕೊಡಲು ಸಿಧ್ಧರಾಗಿರುವುದು, ಕೊನೆಯಲ್ಲಿ ಅವರಿಬ್ಬರ ದೈವಾದೀನ ದೃಶ್ಯ ಎಂಥವರಿಗೂ ಅಳು ಬರುವಂತೆ ಮಾಡಿದೆ.

ದೇವರ ಮಗ ಚಿತ್ರದಲ್ಲಿ ಶಿವಣ್ಣ, ದಶ೯ನ್ ಜೊತೆ ನಟಿಸಿರೋದು. ದಶ೯ನ್ ರವರಿಗೆ ಅಂಬರೀಷ್ ಎಂದರೆ ತಂದೆಯ ಸಮಾನ, ಅವರು ಹೇಳಿದ ಹಾಗೆ ಕೇಳುತ್ತಿದ್ದರು. ದಶ೯ನ್ ಜೊತೆ ನಟಿಸಿದ ಚಿತ್ರ “ಅಣ್ಣಾವೃ, “ಬುಲ್ ಬುಲ್ ” “ಕುರುಕ್ಷೇತ್ರ “ಜೂನಿಯರ್ ಜೊತೆ ಸೀನಿಯರ್ ನಟನೆ ಸೂಪರ್. ಕುರುಕ್ಷೇತ್ರ ಚಿತ್ರದ ಭೀಷ್ಮ ನಟನೆ ಅವರ ಕೊನೇ ಚಿತ್ರವಾಯಿತು.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಜೊತೆ “ದೊಡ್ಮನೆ ಹುಡ್ಗ ” ಚಿತ್ರದಲ್ಲಿ ನಟಿಸಿ ರಾಜೀವನಾಗಿ ಅಚ್ಚಳಿಯದೆ ಉಳಿಯುವ ಪಾತ್ರ.

ಸುದೀಪ್ ಜೊತೆ “ವೀರ ಪರಂಪರೆ ” ಚಿತ್ರದ ಊರಿನ ಗೌಡರ ನಟನೆ.

ಉಪೇಂದ್ರ ಜೊತೆ ಕಠಾರಿ ವೀರ ಸುರಸುಂದರಾಗ ಚಿತ್ರದ ಯಮಧಮ೯ ನಟನೆ.

ಅಂಬಿ ನಿಂಗ್ ವಯಸ್ಸಾಯ್ತು ಚಿತ್ರದ ಮುಗ್ಧ ಹಿರಿಯ ನಾಗರೀಕರ ನಟನೆ ಮರೆಯಲಾಗದು.

ಸ್ನೇಹ ಅನ್ನೋ ವಿಷಯ ಬಂದಾಗ ಮೊದಲು ನೆನಪಾಗೋದು ಅಂಬಿ ರವರ ಬಳಗ, ಕಾಶ್ಮೀರದಿಂದ ಹಿಡಿದು ಕನ್ಯಕುಮಾರಿ ವರೆಗೂ ಅವರ ಸ್ನೇಹ ಸಂಬಂಧವಿತ್ತು, ಸೂಪರ್ ಸ್ಟಾರ್ ರಜಿನಿಕಾಂತ್, ಮೆಗಾಸ್ಟಾರ್ ಚಿರಂಜೀವಿ, ಖುಷ್ಬು, ಜಯಪ್ರದ, ಅಂಬಿಕ, ಶತ್ರುಘ್ನ ಸಿಂಹ, ಅಮಿತಾಬ್ ಬಚ್ಚನ್, ಮೋಹನ್ ಬಾಬು, ಹೀಗೆ ಸ್ನೇಹ ದಂಡೇ ಇದೆ, ಸ್ನೇಹ ಸಂಪಾದನೆಯ ಸೂತ್ರ ಅವರನ್ನು ನೋಡಿ ಕಲಿಯಬೇಕು.

ಮುಂದುವರಿಯುವುದು

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply