ಹ್ಯಾಪಿ ಬರ್ತ್‌ಡೇ ಅವಿನಾಶ್ 🌹

ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ನಮ್ಮ ಕನ್ನಡ ನಟ ತಮ್ಮ ವಿಶಿಷ್ಟವಾದ ಅಭಿನಯದಿಂದ ಪ್ರೇಕ್ಷಕರ ಮನಸ್ಸನ್ನು ಗೆದ್ದ “ಅವಿನಾಶ್ ” ರವರಿಗೆ ಜನುಮ ದಿನದ ಶುಭಾಶಯಗಳು 💐

ಕನ್ನಡ ಭಾಷೆಯಲ್ಲದೆ ತಮಿಳು ,ತೆಲುಗು, ಮಲಯಾಳಂ ಸೇರಿ 400ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ವಿವಿಧ ನಟನೆಗೆ ಹೆಸರಾಗಿರುವರು, ನಟಿಸಿದ ಹಲವಾರು ಚಿತ್ರಗಳು ವಿಮಶೆ೯ಗೊಳಗಾಗಿ ಮತ್ತು ಲಾಭ ತಂದುಕೊಟ್ಟವು.

ಮೂಲತಃ ಯೆಲಂದೂರು ಚಾಮರಾಜನಗರ ಜಿಲ್ಲೆ, ಮೈಸೂರು, ಇಂದಿರಾ ಮತ್ತು ಬಿ ಕೆ ನಾರಾಯಣ ರಾವ್ ಮಗ, ಹಾಡ್೯ವಿಕ್ ಹೈ ಸ್ಕೂಲ್ ನಲ್ಲಿ ವಿಧ್ಯಾಭ್ಯಾಸ ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಇಂಗ್ಲೀಷ್ ಲಿಟರೇಚರ್ ನಲ್ಲಿ ಪದವಿ, ಕಾಲೇಜು ದಿನಗಳಲ್ಲಿ ನಾಟಕಗಳಲ್ಲಿ ಆಸಕ್ತಿ, ಈ ಅವಧಿಯಲ್ಲಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ತದನಂತರ ಮತ್ತು ಎಂ ಇ ಎಸ್ ಕಾಲೇಜಿನಲ್ಲಿ ಪ್ರೊಫೆಸರ್ ವೃತ್ತಿ. ರಂಗಭೂಮಿಯಲ್ಲಿ ಹೆಚ್ಚು ಕಲಿಯಲು ಲಂಡನ್ ಮೆರ್ಮೈಡ್ ಕಂಪನಿಯಲ್ಲಿ ತರಬೇತಿ.

ಖ್ಯಾತ ಗಾಯಕಿ ಬಿ ಜಯಶ್ರೀ “ಸ್ಪಂದನ ” ಮತ್ತು ಶಂಕರ್ ನಾಗ್ ರವರ “ಸಂಕೇತ್ ” ರಂಗಭೂಮಿಯಲ್ಲಿ ನಟನೆ,ಜಿ ವಿ ಅಯ್ಯರ್ ನಿದೇ೯ಶನದ “ಮದ್ವಾಚಾಯ೯” ಚಿತ್ರ ದಲ್ಲಿ ಮೊದಲ ನಟನೆ, ಮುಂದೆ ಶಿವರಾಜ್ ಕುಮಾರ್ ಜೊತೆ “ಸಂಯುಕ್ತ ” ದಲ್ಲಿ ಗುರುತಿಸಿಕೊಂಡರು,

ಕೆ ಬಾಲಚಂದರ್, ಗಿರೀಶ್ ಕಾಸರವಳ್ಳಿ, ಟಿ ಎನ್ ಸೀತಾರಾಮ್, ಎ ಆರ್ ಮುರುಗದಾಸ್, ಪುರಿ ಜಗನ್ನಾಥ್, ಪಿ ವಾಸು, ವೆಟ್ರಿಮಾರನ್, ಯೋಗರಾಜ್ ಭಟ್, ಸುಸೀಂದ್ರನ್, ಗೌತಮ್ ಮೆನನ್, ಟಿ ಎಸ್ ನಾಗಾಭರಣ ಇನ್ನೂ ಹಲವಾರು ನಿದೆ೯ಶಕರ ಚಿತ್ರಗಳಲ್ಲಿ ಅಭಿನಯ.

ರಾಜ್ ಕುಮಾರ್, ರಜನಿಕಾಂತ್, ಮಮ್ಮೂಟಿ, ವಿಷ್ಣು ವಧ೯ನ್, ನಾಗಾಜು೯ನ್, ವೆಂಕಟೇಶ್, ವಿಜಯ್, ವಿಕ್ರಮ್, ಅಜಿತ್, ಪುನೀತ್ ರಾಜಕುಮಾರ್, ಯಶ್, ಸೂರ್ಯ, ಕಾತಿ೯, ಮಹೇಶ್ ಬಾಬು ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ.

ದ್ವೀಪ ಚಿತ್ರಕ್ಕೆ ರಾಷ್ಟ ಪ್ರಶಸ್ತಿ ನಟಿ ಸೌಂದರ್ಯ ವಿರುದ್ಧ ನಟನೆ, ಚಿನ್ನಾರಿ ಮುತ್ತ ರಾಷ್ಟ ಪ್ರಶಸ್ತಿ, ಚಿಗುರಿದ ಕನಸು, ಸಿಂಗಾರೆವ್ವ, ಮತದಾನ ಚಿತ್ರದ ಅತ್ಯುತ್ತಮ ನಟನೆ ರಾಷ್ಟ್ರ ಪ್ರಶಸ್ತಿ.
ಪಿ ವಾಸು ನಿದೇ೯ಶನದ ಚಂದ್ರಮುಖಿ, ಆಪ್ತ ಮಿತ್ರ, ಆಪ್ತ ರಕ್ಷಕ ಚಿತ್ರದ ಅಭಿನಯ ಇವರನ್ನು ರಾಷ್ಟ ಮಟ್ಟದಲ್ಲಿ ಹೆಸರು ಮಾಡಲು ಕಾರಣ.

ಮಾಯಾಮೃಗ ಜನಪ್ರಿಯ ಧಾರಾವಾಹಿ ನಟಿ ಮಾನವಿಕ ರವರೊಂದಿಗೆ ಪ್ರೇಮ ವಿವಾಹ, ಇದರಲ್ಲೂ ಅವಿನಾಶ್ ನಟನೆ ನೋಡಬಹುದು. ಮಾಳವಿಕ ಸಹ ಚಿತ್ರಗಳಲ್ಲಿ ನಟಿಸಿದ್ದಾರೆ, “ಗಾಲವ್ ” ಒಂದು ಗಂಡು ಮಗುವಿದೆ.

ಇವರು ನಟಿಸಿದ ಇನ್ನೂ ಕೆಲವು ಚಿತ್ರಗಳು..

ರಾವಣ ರಾಜ್ಯ, ತಕ೯, ಯುದ್ಧ ಕಾಂಡ, ಮಣ್ಣಿನ ದೋಣಿ, ಆಕಸ್ಮಿಕ, ನಿಶ್ಕಷ೯, ಲಾಕಪ್ ಡೆತ್, ಹೃದಯ ಹೃದಯ, ಕೋಟಿಗೊಬ್ಬ, ಡಾನ್, ತಿರುಮಲೈ, ಕಲಾಸಿಪಾಳ್ಯ, ಆಕಾಶ್, ಅಪ್ಪು, ಅಮೃತಧಾರೆ, ಹುಡುಗರು, ಕಡ್ಡಿಪುಡಿ, ಪವರ್ ಎನ್ನೈ ಅರಿಂದಾಲ್ , ರಾಜಕುಮಾರ, ಜಾಗ್ವಾರ್, ನಟಸಾವ೯ಭೌಮ ಹೇಳ್ತಿದ್ರೆ ಪಟ್ಟಿ ನಿಲ್ಲೋಲ್ಲ.

ಅಣ್ಣ, ತಮ್ಮ, ಪೋಲೀಸ್ ಅಧಿಕಾರಿ, ಖಳನಟ , ಫ್ರೆಂಡ್ , ಗುರು ಹೀಗೆ ಬಹಳಷ್ಟು ಪಾತ್ರಗಳಲ್ಲಿ ಇವರ ನಟನೆ ಕಾಣಬಹುದು. ಕೆಲವು ಚಿತ್ರಗಳಲ್ಲಿ ಪಾತ್ರಕ್ಕೆ ಹೇಳಿಮಾಡಿಸಿದಂತೆ ಇವರು.

🌹ಕನಾ೯ಟಕ ಸಕಾ೯ರ ಪ್ರಶಸ್ತಿ ಮತದಾನ ಚಿತ್ರದ ಪೋಷಕ ನಟ ಪ್ರಶಸ್ತಿ,
💜ಫಿಲಂ ಫೇರ್ ಪ್ರಶಸ್ತಿ ಆಪ್ತರಕ್ಷಕ ಚಿತ್ರ ಅತ್ಯುತ್ತಮ ಪೋಷಕ ನಟ.
ದ್ವೀಪ,
👑ಸಿಂಗಾರೆವ್ವ ಚಿತ್ರದ ನಟನೆಗೆ ತೀಪು೯ಗಾರರ ಆಯ್ಕೆ ಪ್ರಶಸ್ತಿ.
🎸ಸಿನಿ ರಂಗದ ಜನಪ್ರಿಯ ಪ್ರಶಸ್ತಿ ಉದಯ ವಾಹಿನಿಯಿಂದ.
🏍ಪೃಥ್ವಿ ಚಿತ್ರದ ನಟನೆಗೆ ಸುವಣ೯ ಟಿವಿ ಪ್ರಶಸ್ತಿ.
👒ಆಯ೯ಭಟ, ರಾಜ್ಯೋತ್ಸವ, ಕೆಂಪೇಗೌಡ ಪ್ರಶಸ್ತಿ ಗೌರವ.

ನಿಜಕ್ಕೂ ಇಂಥ ಪ್ರತಿಭಾವಂತ ನಟ ನಮ್ಮ ಕನ್ನಡ ನಾಡಿನಲ್ಲಿರೋದು ಹೆಮ್ಮೆಯ ವಿಷಯ,

“ಯುವರತ್ನ” ಮತ್ತು ಇವರ ಮುಂಬರುವ ಎಲ್ಲಾ ಚಿತ್ರಗಳಿಗೆ ನಮ್ ಟೀಮ್ ಕಡೆಯಿಂದ ಬೆಸ್ಟ್ ಆಫ್ ಲಕ್ ಮತ್ತು ಹ್ಯಾಪಿ ಬರ್ತ್‌ಡೇ ಒನ್ಸ್ ಅಗೇನ್ ಅವಿನಾಶ್ ರವರಿಗೆ 💐

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply