ಮೂತಿ೯ ಚಿಕ್ಕದಾದರೂ ಕೀರ್ತಿ ದೊಡ್ಡದು ಅನ್ನೋ ಮಾತು ಕೆಲವರಿಗೆ ಮಾತ್ರ ಒಪ್ಪುವುದು, ಒಬ್ಬ ಪುಟ್ಟ ಬಾಲಕ ‘ಅಮ್ಮಾವುಂ ನೀಯೇ ಅಪ್ಪಾವುಂ ನೀಯೇ ” ಅಂಥ ಹಾಡಿ ಕಳತ್ತೂರ್ ಕಣ್ಣಮ್ಮ ಚಿತ್ರಕ್ಕೆ 04ನೇ ವಯಸ್ಸಿನಲ್ಲಿ ರಾಷ್ಟ್ರಪತಿ ರವರಿಂದ ಚಿನ್ನದ ಪದಕ ಪಡೆದು ಮುಂದೆ ನಟನೆಯಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿ “ಉಲಗನಾಯಗನ್” ಎಂಬ ಬಿರುದು ಪಡೆದು ಈಗಲೂ ಚಿತ್ರರಂಗ ಅಳುತ್ತಿರುವ ನಟ, ನಿದೇ೯ಶಕ, ಗಾಯಕ, ನಿಮಾ೯ಪಕ, ಕಿರುತೆರೆಯ ಬಿಗ್ ಬಾಸ್ ರಿಯಾಲಿಟಿ ಶೋ ನಡೆಸಿಕೊಡುತ್ತಿರುವ ಪದ್ಮಶ್ರೀ, ಪದ್ಮಭೂಷಣ್ ಪ್ರಶಸ್ತಿ ಪುರಸ್ಕೃತರು ಡಾ ಕಮಲ್ ಹಾಸನ್ ಸರ್ ರವರಿಗೆ ಜನುಮ ದಿನದ ಶುಭಾಶಯಗಳು 🌹💙💐.
ಇವರನ್ನು ಚಿತ್ರರಂಗಕ್ಕೆ ಪರಿಚಯಿಸಿದವರು ಖ್ಯಾತ ನಿದೇ೯ಶಕರಾದ ಕೆ ಬಾಲಚಂದರ್ ‘ಅಪೂವ೯ ರಾಗಂಗಳ್” ಚಿತ್ರದ ಮೂಲಕ .ನಾಯಗನ್, ಸ್ವಾತಿಮುತ್ಯಂ, ಗುಣ, ಏಕ್ ದುಜೆ ಕೇ ಲಿಯೆ, ಸಾಗರ್, ಪುನ್ನಗೈ ಮಣ್ಣನ್, ಕಾದಲ್ ಪರಿಸು, ಅಪೂರ್ವ ಸಹೋದರ್ಗಳ್, ತೇವರ್ ಮಗನ್, ಅವ್ವೈ ಶಣ್ಮುಖಿ, ಇಂಡಿಯನ್, ದಶಾವತಾರಂ, ಮಹಾನದಿ, ಹೇ ರಾಮ್, ಕಾದಲಾ ಕಾದಲಾ, ವಸೂಲ್ ರಾಜ ಎಂಬಿಬಿಎಸ್, ಪಂಚತಂತಿರಂ, ಅನ್ಬೇ ಶಿವಂ, ವಿರುಮಾಂಡಿ. ವಿಶ್ವರೂಪಂ, ಸಕಲಕಲಾವಲ್ಲಭಂ, ವೆಟ್ಟೆಯಾಡು ವೆಳಿಯಾಡು…
ಕೇವಲ ತಮಿಳು ಚಿತ್ರವಲ್ಲದೆ ಕನ್ನಡ, ತೆಲುಗು, ಮಲಯಾಳಂ, ಬೆಂಗಾಳಿ ಭಾಷೆಗಳಲ್ಲಿ ನಟಿಸಿ ಜನಪ್ರಿಯರಾದರು.
ನಮ್ಮ ಕನ್ನಡ ಭಾಷೆಯಲ್ಲಿ ಪುಷ್ಪಕವಿಮಾನ, ಕೋಕಿಲ, ಮರಿಯಾ ಮೈ ಡಾಲಿ೯ಂಗ್, ಬೆಂಕಿಯಲ್ಲಿ ಅರಳಿದ ಹೂವು ಮತ್ತು ರಮೇಶ್ ಅರವಿಂದ್ ಜೊತೆ “ರಾಮ ಶ್ಯಾಮ ಭಾಮ” ಚಿತ್ರದಲ್ಲಿ ನಟಿಸಿ ಜನಮೆಚ್ಚುಗೆ ಗಳಿಸಿದ್ದಾರೆ.
ಅಣ್ಣಾವ್ರಿಗೆ ಬಹಳ ಗೌರವ ನೀಡುತ್ತಿದ್ದರು, ಶಿವಣ್ಣ ರಿಗೆ ಇವರ ನಟನೆ ಮತ್ತು ಇವರೆಂದರೆ ತುಂಬಾನೇ ಪ್ರೀತಿ ಕಮಲ್ ಸರ್ ಚಿತ್ರ ಯಾವುದೇ ಬಂದರೂ ತಪ್ಪದೇ ನೋಡುತ್ತಿದ್ದರಂತೆ. ಒಮ್ಮೆ ಅಣ್ಣಾವ್ರ ಮನೆಗೆ ಬಂದಾಗ ಶಿವಣ್ಣ ಇವರನ್ನು ಕಣ್ತುಂಬ ನೋಡಿ ಆನಂದ ಪಟ್ಟು ತಾವೇ ತಬ್ಬಿಕೊಳ್ಳುವ ಬಯಕೆ ಕೇಳಿದಾಗ ಕಮಲ್ ಹಾಸನ್ ರವರು ತಬ್ಬಿಕೊಂಡು ಅವರಿಗೆ ಖುಷಿ ಉಂಟು ಮಾಡಿರುವುದು ಶಿವಣ್ಣ ರವರು ಎಂದಿಗೂ ಮರೆಯಲಾಗದು ಎಂದು ಖಾಸಗಿ ವಾಹಿನಿಯಲ್ಲಿ ಹಂಚಿಕೊಂಡಿದ್ದಾರೆ.
ಸತತ 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಅಭಿಮಾನಿಗಳನ್ನು ರಂಜಿಸಿದ ಇವರಿಗೆ ಪ್ರಶಸ್ತಿ 05 ರಾಷ್ಟ್ರೀಯ ಪ್ರಶಸ್ತಿ, 19 ಫಿಲಂ ಫೇರ್ ಪ್ರಶಸ್ತಿ, ಕಲೈಮಾಮಿಣಿ ಪ್ರಶಸ್ತಿ, ಖಾಸಗಿ ವಾಹಿನಿಯ ಪ್ರಶಸ್ತಿ ಹರಸಿ ಬಂದಿವೆ. ಯಾವುದೇ ಚಿತ್ರಕ್ಕೆ ತಾವು ಮಾಡುವ ಪಾತ್ರ ನೈಜವಾಗಿ ಅಭಿನಯಿಸಿದರೆ ಅಭಿಮಾನಿಗಳು ನೋಡಿ ಖುಷಿ ಪಡುತ್ತಾರೆ ಎಂಬ ಸೂತ್ರ ಕಂಡುಕೊಂಡ ಇವರು ಅಭಿಮಾನಿಗಳು ಇಷ್ಟ ಪಡುವ ಹಾಗೆ ನಟಿಸಿ ಸೈ ಅನ್ನಿಸಿಕೊಂಡಿದ್ದಾರೆ, ಭಾರತೀಯ ಚಿತ್ರರಂಗದಲ್ಲಿ ಹೆಸರು ಮಾಡಿದ ಹೆಗ್ಗಳಿಕೆ. ಇವರ ಮುಂದಿನ ಎಲ್ಲಾ ಚಿತ್ರಗಳೂ ಯಶಸ್ವಿಯಾಗಲಿ ಹಾಗೂ ಇಂಡಿಯನ್ 2 ಚಿತ್ರ ಆದಷ್ಟು ಬೇಗ ಬರಲಿ ಎಂದು ಆಶಿಸೋಣ.
ದೇವರು ಇವರಿಗೆ ಆಯಸ್ಸು ಆರೋಗ್ಯ ಭಾಗ್ಯವನ್ನು ಕೊಟ್ಟು ಕಾಪಾಡಲಿ ಮುಂಬರುವ ರಾಜಕೀಯ ಕ್ಷೇತ್ರದಲ್ಲಿ ಹೆಸರು ಮಾಡಲಿ ಎನ್ನುವುದು ಅಭಿಮಾನಿಗಳ ಆಶಯ 💙