ಹ್ಯಾಪಿ ಬರ್ತ್‌ಡೇ ಗಾಯಕಿ ಅನುರಾಧ ಭಟ್

ಸುಶ್ರಾವ್ಯವಾಗಿ ಹಾಡುವ ಗಾಯಕಿಯರು ನಮ್ಮ ಕನ್ನಡ ಚಿತ್ರರಂಗದಲ್ಲಿ ಇದ್ದಾರೆ ಅನ್ನೋದಕ್ಕೆ ಮತ್ತೊಂದು ಹೆಸರೇ ಅನುರಾಧ ಭಟ್. ಇವರು ಹಾಡಿರುವ ಎಲ್ಲಾ ಹಾಡುಗಳೂ ಒಂದಕ್ಕಿಂತ ಒಂದು ಚೆನ್ನಾಗಿದೆ.

ಇವರು ಶ್ರೀಕೃಷ್ಣ ಭಟ್ ಮತ್ತು ಗಾಯತ್ರಿ ಭಟ್ ರವರ ಮೊದಲ ಮಗಳು, ತಂದೆ ತಾಯಿಗೆ ಸಂಗೀತವೆಂದರೆ ಆಸಕ್ತಿ. ಓದಿದ್ದು ಕಾಮೆ೯ಲ್ ಇಂಗ್ಲೀಷ್ ಸ್ಕೂಲ್, ಸೆಂಟ್ ಆನ್ ಗಲ್ಸ್೯ ಹೈ ಸ್ಕೂಲ್, ಬಿ ಎಸ್ ಸಿ ಮತ್ತು ಎಂ ಬಿ ಎ ಪದವೀಧರೆ. ಅಂತರರಾಷ್ಟ್ರೀಯ ಕಂಪನಿಗೆ ಹೆಚ್ ಆರ್ ಡಿಪಾಟ್೯ಮೆಂಟ್ ನಲ್ಲಿ ಕೆಲಸ ಮಾಡುತ್ತಿದ್ದರು, ಸಂಗೀತದ ಮೇಲೆ ಹೆಚ್ಚಿನ ಒಲವಿದ್ದ ಕಾರಣ ಕೆಲಸ ಬಿಟ್ಟು ತಮ್ಮ ಎಲ್ಲಾ ಸಮಯವನ್ನು ಸಂಗೀತ ಕ್ಷೇತ್ರದಲ್ಲಿ ಮೀಸಲಾಗಿಟ್ಟು ಎಲ್ಲಾ ಪ್ರಕಾರಗಳನ್ನು ತಿಳಿದುಕೊಳ್ಳುವ, ಕಲಿಯುವ ನಿಧಾ೯ರ ಕೈಗೊಂಡರು.

ಕಮಲಾ ಭಟ್ ರವರ ಹತ್ತಿರ ಭರತ ನಾಟ್ಯ ತರಬೇತಿ ಪಡೆದು ಅದರಲ್ಲಿ ವಿದ್ವತ್ ರಾಗಿ, ಕನಾ೯ಟಿಕ್ ಶಾಸ್ತ್ರೀಯ ಸಂಗೀತ , ಭಕ್ತಿ ಗೀತೆ, ಲಘು ಸಂಗೀತವನ್ನು ದಿ.ಶ್ರೀನಾಥ್ ಮರಾಟೆ ರವರ ಬಳಿ ಕಲಿತಿದ್ದರು, ಅದಲ್ಲದೆ ವೀಣೆ ನುಡಿಸುವುದನ್ನು ರಂಗನಾಯಕಿ ವರದರಾಜನ್ ರವರ ಬಳಿ ಬಾಲ್ಯದಿಂದ ಕಲಿತದ್ದರಿಂದ ಹಲವಾರು ಪ್ರಶಸ್ತಿಗಳನ್ನು ಗಳಿಸಲು ಸಾಕ್ಷಿಯಾಗಿವೆ.

ಮಂಗಳೂರಿನ ಶಾಲಾ ದಿನಗಳಲ್ಲಿ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ರವರು ತೀಪು೯ಗಾರರಾಗಿ ಹೋದಾಗ ಇವರ ಗಾಯನವನ್ನು ಕೇಳಿ ಮೆಚ್ಚಿ ಇವರಿಗೆ ಹಾಡಲು ಮೊದಲ ಅವಕಾಶ ನೀಡಿದರು ನಂತರ ಗುರುಕಿರಣ್ ರವರ ಸಂಗೀತ ಕಾಯ೯ಕ್ರಮಗಳಲ್ಲಿ ಇವರು ಹಾಡೋದು ನಿರಂತರವಾಗಿ ನಡೆಯಿತು, ಭಾರತದ ಮತ್ತು ಪ್ರಪಂಚಾದ್ಯಂತ ಸಂಗೀತ ಸುಧೆ ನೀಡುವಂತಾಯಿತು, ಕಾಲೇಜು ದಿನಗಳಲ್ಲಿ ಯುಗಳ ಗೀತೆಗಳನ್ನು ಹಾಡೋ ಅವಕಾಶ ದಿಗ್ಗಜ ಗಾಯಕರು ಎಸ್ ಪಿ ಬಾಲಸುಬ್ರಹ್ಮಣ್ಯಂ ರವರ ಜೊತೆ ಹಾಡುವ ಸುವಣಾ೯ವಕಾಶ “ಎದೆ ತುಂಬಿ ಹಾಡುವೆನು ” ಶೋನಲ್ಲಿ.

ಈ ಟಿವಿ ಕನ್ನಡ “ಅನ್ವೇಷಣೆ ” ಶೋನ  ನಡೆಸಿಕೊಡುತ್ತಿದ್ದರು, ನಂತರ ಹಂಸಲೇಖ ರವರ ಬಳಿ ಆಡಿಷನ್ ನಡೆದು ಆಯ್ಕೆಯಾಗಿ “ನೆನಪಿರಲಿ ” ಚಿತ್ರದ ಬಿಟ್ ಹಾಡೋಕೆ ಅವಕಾಶ ನೀಡಿದರು. ಹಂಸಲೇಖ ರವರ ತಂಡದಲ್ಲಿ ಹಲವಾರು ಗೀತೆಗಳಿಗೆ ಕೋರಸ್ ನೀಡಿದ್ದಾರೆ, ಮೊದಲ ಪೂಣ೯ ಪ್ರಮಾಣದ ಗಾಯಕಿ ಆಗಿ ಹೊರಹೊಮ್ಮಿದ ಚಿತ್ರ “ಮೀರಾ ಮಾಧವ ರಾಘವ ” ವಸಂತ ವಸಂತ ಗೀತ.

“ಎಲ್ಲೆಲ್ಲು ಓಡುವ ಮನಸೆ, ಯಾಕಿಂತ ಹುಚ್ಚುಚ್ಚು ಮನಸೆ

ಇಲ್ಲದ ಸಲ್ಲದ ತರಲೆ, ಹೋ ಹೋದಲ್ಲಿ ಬಂದಲ್ಲಿ ತರವೆ “

ತಮ್ಮ ಮಾಧುರ್ಯ ತುಂಬಿದ ಹಾಡಿನಿಂದ ಹೆಸರಾದ ಇವರು ಎಲ್ಲರ ಮನೆಮಾತಾಗಿದ್ದಾರೆ, ಸವಾರಿ (ಮರಳಿ ಮರೆಯಾಗಿ ), ಝುಮ್ ಝುಮ್ ಮಾಯಾ (ವೀರ ಮದಕರಿ). ಜಂಗ್ಲೀ ಶಿವಲಿಂಗು (ಜಂಗ್ಲಿ), ಶ್ರೀಕೃಷ್ಣ (ಭಜರಂಗಿ), ಚಂದಚಂದ (ಅಂಜನೀಪುತ್ರ),  ಜರಾಸಂಧ, ಬಚ್ಚನ್, ಪ್ರೇಮ್ ಅಡ್ಡ, ಯಾರೋ ಇವನು ಜೋಕುಮಾರ (ಯಾರೇ ಕೂಗಾಡಲಿ), ಕಟಾರಿವೀರ ಸುರಸುಂದರಾಂಗ, ವರದನಾಯಕ, ಅಂದರ್ ಬಾಹರ್, ವೀರಪರಂಪರೆ, ಪಂಚರಂಗಿ, ಏನೋ ಒಂಥರ, ಚಿರು, ಕೃಷ್ಣನ್ ಲವ್ ಸ್ಟೋರಿ, ದುಬಾಯ್ ಬಾಬು, ಅಭಯ್, ಪರಮೇಶ ಪಾನುವಾಲ, ಸೌಂದರ್ಯ, ಗುಣವಂತ, ಚೌಕ, ಸಿದ್ಲಿಂಗು, ಮೊದಲಸಲ, ಗಣಪ ಇನ್ನೂ ಮುಂತಾದ ಚಿತ್ರಗಳಲ್ಲಿ ಹಾಡಿದ್ದಾರೆ.

ಇವರು ಸಂಗೀತ ನಿದೇ೯ಶಕರಾದ ಹಂಸಲೇಖ, ಗುರುಕಿರಣ್, ವಿ. ಹರಿಕೃಷ್ಣ, ಅಜು೯ನ್ ಜನ್ಯ, ರವಿ ಬಸ್ರೂರು, ಎಂ ಎಂ ಕೀರವಾಣಿ, ಮಣಿಶಮ೯, ತಮನ್, ಮನೋಮೂತಿ೯,ಶ್ರೀಧರ್ ಸಂಭ್ರಮ್, ವಿ. ಮನೋಹರ್, ಸಾಧು ಕೋಕಿಲ, ರಾಜೇಶ್ ರಾಮನಾಥ್ ಮುಂತಾದ ನಿದೇ೯ಶಕರ ಜೊತೆ ಕೆಲಸ ಮಾಡಿದ್ದಾರೆ.

ಹಿನ್ನೆಲೆ ಗಾಯಕಿಯಾಗಿ 5000 ಕ್ಕೂ ಹೆಚ್ಚು ಹಾಡುಗಳನ್ನು 15 ಭಾಷೆಯಲ್ಲಿ ಹಾಡಿರೋದು ಗಮನಾರ್ಹ. ಕನ್ನಡವಲ್ಲದೆ ತುಸು, ಕೊಂಕಣಿ, ಹಿಂದಿ, ತಮಿಳು, ತೆಲುಗು, ಮಲಯಾಳಂ, ಮರಾಠಿ, ಬೆಂಗಾಳಿ,  ಸಂಸ್ಕೃತ,  ಕೊಡವ, ಇಂಗ್ಲಿಷ್ ಹೀಗೆ… ಚಿತ್ರಗೀತೆಗಳಲ್ಲದೆ ಜಾನಪದ, ಭಾವಗೀತೆ, ಪಾಪ್ ಸಂಗೀತ, ಮಕ್ಕಳ ಗೀತೆಗಳು, ಟಿವಿ ಸೀರಿಯಲ್ “ಚಿನ್ನು” ಭಾಗ 1 2 3 ಬಹಳ ಜನಪ್ರಿಯವಾದವು.

ಕಾಟೂ೯ನ್ ಕ್ಯಾರೆಕ್ಟರ್ ಗಳಿಗೆ ಡಬ್ ಮಾಡಿರೋದು, ಜಿಂಗಲ್ ಗಳಿಗೆ, ಡಾಕುಮೆಂಟರಿಗಳಿಗೆ ಧ್ವನಿ ನೀಡಿರೋದು ವಿಶೇಷ.

ದೂರದಶ೯ನ ದಲ್ಲಿ ಪ್ರಸಾರವಾದ “ಬೆಳಗು” ,ಹಲವಾರು ವಾಹಿನಿಯಲ್ಲಿ ಸಂಗೀತ ಕಾಯ೯ಕ್ರಮ ನಡೆಸಿಕೊಟ್ಟಿದ್ದಾರೆ, ಈ ಟಿವಿ ಯಲ್ಲಿ  “ಎಂದೂ ಮರೆಯದ ಹಾಡು ” ಜನಶ್ರೀಯಲ್ಲಿ “ನಕ್ಷತ್ರ ಮಂಥನ “, ಉದಯ ವಾಹಿನಿಯಲ್ಲಿ “ಅಕ್ಷರಮಾಲೆ ” ಶೋ ನಡೆಸಿಕೊಟ್ಟಿರೋದು,  ಕಸ್ತೂರಿ ವಾಹಿನಿಯಲ್ಲಿ “ಸಪ್ತಸ್ವರ 3 ನಲ್ಲಿ ಮಾಗ೯ದಶಿ೯ಯಾಗಿರೋದು ನೋಡಬಹುದು.

6 ನೇ ವಯಸ್ಸಿನಲ್ಲಿ ಆಲ್ ಇಂಡಿಯಾ ರೇಡಿಯೋದ ನೇರ ಪ್ರಸಾರ, ಗಾಯಕಿಯಾದ ನಂತರ ಅಮೇರಿಕಾ, ಆಸ್ಟ್ರೇಲಿಯ, ಯೂರೋಪ್, ಸಿಂಗಾಪುರ, ಹಾಂಗ್ ಕಾಂಗ್, ದುಬೈ, ಮಸ್ಕತ್, ಖತರ್, ಕುವೈತ್ ಮತ್ತು ಬೆಹ್ರಿನ್ ನಲ್ಲಿ ಶೋ ನೀಡಿದ್ದಾರೆ, ಹೆಸರಾಂತ ಗಾಯಕರಾದ ಎಸ್ ಪಿ ಬಾಲಸುಬ್ರಹ್ಮಣ್ಯಂ, ಶಂಕರ್ ಮಹದೇವನ್, ಸುರೇಶ್ ವಾಡೇಕರ್, ಉದಿತ್ ನಾರಾಯಣ್, ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್‌, ವಿಜಯ್ ಯೇಸುದಾಸ್ ಇನ್ನೂ ಗಾಯಕರ ಜೊತೆ ಹಾಡಿರೋದು ಪ್ರಶಂಸನೀಯ.

ಇವರು ಜಿಲ್ಲಾ ಉತ್ಸವ, ಮೈಸೂರು ದಸರಾ, ವಿಶ್ವ ಕನ್ನಡ ಸಮ್ಮೇಳನ – ಬಳ್ಳಾರಿ, ಕಲಬುರ್ಗಿ, ಸಿಂಗಾಪುರ, ಲಂಡನ್, ಹಂಪಿ ಉತ್ಸವ, ಅಕ್ಕ ಸಮ್ಮೇಳನ, ಬೆಂಗಳೂರು ಗಣೇಶೋತ್ಸವ ಮುಂತಾದ ಜನಪ್ರಿಯ ಮತ್ತು ಘನತೆವೆತ್ತ ಸಮಾರಂಭಗಳಲ್ಲಿ ಸಂಗೀತ ರಸಸಂಜೆ ನೀಡಿರೋದು ಅಭಿಮಾನಿಗಳಿಗೆ ಖುಷಿಯ ವಿಚಾರ ತಾನೆ…

“ನಾನು ನೋಡಿದ ಮೊದಲ ವೀರ, ಬಾಳು ಕಲಿಸಿದ ಸಲಹೆಗಾರ

ಎಲ್ಲ ಕೊಡಿಸುವ ಸಾಹುಕಾರ ಅಪ್ಪ, ಅಪ್ಪ ಐ ಲವ್ ಯೂ ಪಾ ಅಪ್ಪ ಐ ಲವ್ ಯೂ ಪಾ”

ಚಿಕ್ಕ ಮಗುವಿನಿಂದಲೂ ಇವರು ನೋಡೋಕೆ ಎಷ್ಟು ಮುದ್ದಾಗಿ ಕಾಣಿಸುತ್ತಿದ್ದರು, ಹೇಗಿದ್ದರು ಅನ್ನೋದಕ್ಕೆ ಕೆಲವು ಭಾವಚಿತ್ರಗಳನ್ನು ಹಾಕಿರುವೆ, ನೀವೇ ನೋಡಿ ನಿಮಗೆ ಅನ್ನಿಸುತ್ತೆ , ಹೀಗೆ ನಂದಿತ ಗಾಯಕಿಯ ಬಗ್ಗೆ ಹೇಳುವಾಗ ಅವರು ಎಂಥ ಸುಸಂಸ್ಕೃತ ಹೆಣ್ಣು ಅನ್ನೋದನ್ನ ಪ್ರಸ್ತಾಪಿಸಿರುವೆನೋ ಹಾಗೆ ಇವರೂ ಕೂಡ.

ಉಗ್ರಂ ಚಿತ್ರದ “ಚನನ ಚನನ” ಗಾಯನಕ್ಕೆ ಫಿಲಂ ಫೇರ್ ದಕ್ಷಿಣ ಪ್ರಶಸ್ತಿ ಲಭಿಸಿದೆ.

ಬಹುಪರಾಕ್ ಚಿತ್ರದ “ಉಸಿರಾಗುವೆ ” ಗೀತೆಗೆ ಅತ್ಯುತ್ತಮ ಹಿನ್ನೆಲೆ ಗಾಯಕಿ ಎಂಬ ಪ್ರಶಸ್ತಿ ಜೀ ಮ್ಯೂಸಿಕ್ ವತಿಯಿಂದ ನೀಡಿದ್ದಾರೆ.

ಅಖಿಲ ಕರ್ನಾಟಕ ಪತ್ರಿಕಾ ವರದಿಗಾರರ ಸಂಘದಿಂದ ಮಾಧ್ಯಮ ಪ್ರಶಸ್ತಿ ಅತ್ಯುತ್ತಮ ಹಿನ್ನೆಲೆ ಗಾಯಕಿಗಾಗಿ ನೀಡಲಾಗಿದೆ.

ಬೆಂಕಿಪಟ್ಣ ಚಿತ್ರದ “ಇರಲಿ ಹೇಗೆ “ಗಾಯನಕ್ಕೆ ಕನಾ೯ಟಕ ಚಿತ್ರ ರಸಿಕರ ಸಂಘದವರಿಂದ ಪ್ರಶಸ್ತಿ.

ರೆಡ್ ಎಫ್ ಎಂ ರವರು ತುಳು ಚಿತ್ರದ ಗಾಯನಕ್ಕೆ ಪ್ರಶಸ್ತಿ .

ಗಾಯನ ಸೇವೆಗೆ ಆಯ೯ಭಟ ಅಂತರ ರಾಷ್ಟ್ರೀಯ ಪ್ರಶಸ್ತಿ ಗೌರವ.

ಚೌಕ ಚಿತ್ರದ “ಅಪ್ಪ ಐ ಲವ್ ಯೂ ಪಾ ” ಗಾಯನಕ್ಕೆ ಅತ್ಯುತ್ತಮ ಹಿನ್ನೆಲೆ ಗಾಯಕಿ ಎಂದು ಗುರುತಿಸಿ ಫಿಲಂ ಫೇರ್ ಪ್ರಶಸ್ತಿ.

ಇದೇ ಗೀತೆಗೆ ಸಂತೋಷಂ ಪ್ರಶಸ್ತಿ ನೀಡಿಕೆ.

ಸೈಮಾ ಪ್ರಶಸ್ತಿ ಅಪ್ಪಾ ಐ ಲವ್ ಯೂ ಪಾ ಹಾಡಿಗೆ ನೀಡಲಾಗಿದೆ. ಮಿಚಿ೯ ಮ್ಯೂಸಿಕ್ ಅವಾಡ್೯ ಮತ್ತೆ ಚೌಕ ಚಿತ್ರದ “ಅಪ್ಪ ಐ ಲವ್ ಯೂ ಪಾ ” ಹಾಡಿಗೆ ನೀಡಿರೋದು.

ಈ ಗೀತೆಯ ಬಗ್ಗೆ ಹೇಳಲೇಬೇಕು ಚೌಕ ಚಿತ್ರ, ತರುಣ್ ಸುಧೀರ್ ನಿದೇ೯ಶನ,ಅಜು೯ನ್ ಜನ್ಯ ಕಂಪೋಸ್ ಮಾಡಿರೋದು, ರಚನೆ ನಾಗೇಂದ್ರ ಪ್ರಸಾದ್, ಹಾಡನ್ನು ಎಷ್ಟು ಪ್ರೀತಿಸಿ ಹಾಡಿದ್ದಾರೆ ಅನ್ನೋದಕ್ಕೆ ಇಷ್ಟೋಂದು ಹೆಸರುವಾಸಿಯಾಗಿರೋದು, ತಂದೆ ತನ್ನ ಮಗಳಿಗೆ ಸವ೯ಸ್ವ, ಅವರು ಹೇಳಿಕೊಟ್ಟಂತೆ ಒಳ್ಳೆಯ ದಾರಿಯಲ್ಲಿ ನಡೆಯಲು ಸಾಧ್ಯ ಮತ್ತು ಎಲ್ಲಾ ತಂದೆಯರಿಗೆ ಈ ಹಾಡು ಸಮಪ೯ಣೆ ಮಾಡಿರೋದು, ಅಷ್ಟೇ ಚೆನ್ನಾಗಿ ಹಾಡಿರುವ ಅವರ ಕೋಗಿಲೆಯಂತ ಧ್ವನಿ.ಇವರು ಅನುಪಮ ಭಟ್ (ಜೀ ಕನ್ನಡ ನಿರೂಪಕಿ)  ಅಕ್ಕ, ತಂಗಿ ನಿರೂಪಕಿ ಕ್ಷೇತ್ರದಲ್ಲಿ ಕಾಯ೯ ನಿವ೯ಹಿಸಿದರೆ ಅಕ್ಕ ಗಾಯನ ಕ್ಷೇತ್ರದಲ್ಲಿ ಜನಪ್ರಿಯರಾಗಿದ್ದಾರೆ,  ಇವರ ಗಾಯನ ಪಯಣ ಹೀಗೆ ಮುಂದುವರಿಯಲಿ

ಇವರನ್ನು ಸಂಗೀತ ಸಮಾರಂಭದಲ್ಲಿ ರವೀಂದ್ರ ಕಲಾಕ್ಷೇತ್ರದಲ್ಲಿ ಭೇಟಿ ಮಾಡಿದ ಕ್ಷಣ ಸಂತಸ ತಂದಿದೆ.

ಇವರಿಗೆ ಮತ್ತೊಂದು ಹೆಸರಿದೆ “ಕನಾ೯ಟಕದ ಕೋಗಿಲೆ ” ನಿಜಕ್ಕೂ ಅವರ ಧ್ವನಿ ಕೋಗಿಲೆನೇ ಏನಂತೀರಿ ಓದುಗರೆ…

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply