ಹ್ಯಾಪಿ ಬರ್ತ್‌ಡೇ ಗಾಯಕ ವಿಜಯ್ ಪ್ರಕಾಶ್‌ 💐💜🦚

ಗಾಯನ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ಗಾನಸುಧೆ ಹರಿಸುತ್ತಾ , “ಸ್ಲಂ ಡಾಗ್ ಮಿಲೇನಿಯರ್” ಚಿತ್ರದ “ಜೈ ಹೋ “ಹಾಡಿಗೆ ಆಸ್ಕರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡ ಪ್ರಪಂಚದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಮೈಸೂರಿನವರೇ ಆದ ಎನಜಿ೯ ಬೂಸ್ಟರ್, ಕವಿತೆ ಮಾಸ್ಟರ್, ಗಾಯನದ ಟ್ರಿಕ್ಕರ್ ನಮ್ಮ ಕರುನಾಡಿನ ಯಶಸ್ವಿ ಗಾಯಕರು ಶ್ರೀ. ವಿಜಯ್ ಪ್ರಕಾಶ್‌ ರವರಿಗೆ ಜನುಮ ದಿನದ ಶುಭಾಶಯಗಳು 💐🌹💜

ಇವರ ಹೆಸರಿನಲ್ಲಿ ವಿಜಯವಿದೆ ಮತ್ತು ಪ್ರಕಾಶವಿದೆ ಯಾವುದೇ ಕೆಲಸದಲ್ಲಿ ವಿಜಯವನ್ನು ಕಾಣುತ್ತಾರೆ ಮತ್ತು ಅವರಿರೋಕಡೆ ಸದಾ ಬೆಳಕೂ ಕೂಡ ಇರುತ್ತದೆ , ಇವರು ಹಲವಾರು ಸಂಗೀತ ನಿರ್ದೇಶಕರ ಜೊತೆ ಕೆಲಸ ಮಾಡಿದ್ದಾರೆ, ಅಜು೯ನ್ ಜನ್ಯ, ವಿ. ಹರಿಕೃಷ್ಣ, ಅಜನೀಶ್ ಲೋಕನಾಥ್, ರವಿ ಬಸ್ರೂರು, ಗುರುಕಿರಣ್ ಮುಂತಾದವರು.

ರಕ್ಷಿತ್ ಶೆಟ್ಟಿ, ಶಿವಣ್ಣ, ಪುನೀತ್, ಸುದೀಪ್, ರಿಷಭ್ ಶೆಟ್ಟಿ, ದಶ೯ನ್, ಅಂಬರೀಷ್, ಕಿಶೋರ್ ಇನ್ನೂ ಹಲವಾರು ನಾಯಕರಿಗೆ ಹಾಡಿದ್ದು ಹೆಚ್ಚು ಜನಪ್ರಿಯ ಗೀತೆಗಳು ಅನ್ನಿಸಿವೆ.

ಇವರು ಹಾಡಿರುವ ವಿವಿಧ ಗೀತೆಗಳು ಜನರ ಹೃದಯವನ್ನು ಗೆದ್ದಿದೆ, ಸಂಗೀತ ಕುಟುಂಬದಿಂದ ಬಂದ ಇವರು ಬಹಳ ಕಷ್ಟ ಪಟ್ಟು ಗಾಯನ ಪಟ್ಪ ಏರಿದ್ದಾರೆ, ಅವರು ನಡೆದುಬಂದ ದಾರಿ ಖಾಸಗಿ ವಾಹಿನಿಯಲ್ಲಿ ತಿಳಿಸಿದ್ದಾರೆ. ಈ ಸುದಿನ ಅವರು ಹಾಡಿರುವ ಗೀತೆಗಳ ಸಾಲುಗಳು ಅವರಿಗೆ ಸಾಲುಗಳ ಮೂಲಕ ಗೌರವ ಸಲ್ಲಿಸೋಣ .

ಇವರ ವಾಯ್ಸ್ ನಲ್ಲಿ ಮ್ಯಾಜಿಕ್ ಇದೆ, ಲವ್ ಸಾಂಗ್, ಡುಯೆಟ್ ಸಾಂಗ್, ದೋಸ್ತಿ ಸಾಂಗ್, ಭಕ್ತಿ ಗೀತೆ, ರೌದ್ರ ಗೀತೆ, ಎಣ್ಣೆ ಹಾಡು , ಟಪ್ಪಾಂಗುಚಿ ಎಲ್ಲಾ ಪ್ರಕಾರಗಳಲ್ಲಿ ಹಾಡಿ ಜನಪ್ರಿಯರಾದವರು.

“ಓಂ ಶಿವೋಹಂ ಓಂ ಶಿವೋಹಂ
ರುದ್ರನಾಮಂ ಭಜೇಹಂ “

“ಬ್ರದರ್ ಫ್ರಂ ಅನದರ್ ಮದರ್ “

ಇನ್ನೂ ಹಲವಾರು ಹಾಡುಗಳು ಹಾಡಿದ್ದಾರೆ, ನಮ್ಮ ಮನಸಲ್ಲಿ ನೆಲೆಸೋ ಸದಾ ಗುನುಗೋ ಮರೆಯಲಾಗದ ಹಾಡು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ “ರಾಜಕುಮಾರ ” ಚಿತ್ರದ “ಬೊಂಬೆಹೇಳುತೈತೆ ” ಗೀತೆ. ನಿಜಕ್ಕೂ ಈ ಗೀತೆ ಭಾವ ತುಂಬಿ ಹಾಡಿದ್ದಾರೆ, ಮೊದಲು ಜೀ ವಾಹಿನಿಯ ಗಾಯನ ಸ್ಪಧಿ೯ಯಾಗಿ ಬಂದವರು ತಮ್ಮ ಸತತ ಪರಿಶ್ರಮದ ಫಲವಾಗಿ ನಂತರ ನಮ್ಮ ಜೀ ಕನ್ನಡದ “ಸರಿಗಮಪ ” ಸರಣಿಯ ಮುಖ್ಯ ತೀಪು೯ಗಾರರಾಗಿ ಹಲಾವಾರು ಹೊಸಬರ ಸ್ಪಧಿ೯ಗಳಿಗೆ ತಮ್ಮ ಸಂಗೀತ ಮತ್ತು ಗಾಯನದ ಅನುಭವ ಹಾಗೂ ಸವಹೆಗಳನ್ನು ನೀಡುತ್ತಿದ್ದಾರೆ, ಇವರು ಕನ್ನಡ ಭಾಷೆಯಲ್ಲದೆ ತಮಿಳು, ತೆಲುಗು, ಹಿಂದಿ, ಮರಾಠಿ ಭಾಷೆಯಲ್ಲಿ ತಮ್ಮ ಗಾಯನದಿಂದ ಹೆಸರಾಗಿದ್ದಾರೆ, ಹಲವಾರು ಖಾಸಗಿ ಸಂಸ್ಥೆಗಳು ನಡೆಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.

ಇಂಥ ಮಹಾನ್ ಗಾಯಕರನ್ನು ಪಡೆದ ಕನ್ನಡಿಗರು ನಾವು ಹೆಮ್ಮೆ ಪಡುವ ವಿಷಯ.

ಇವರ ಮಡದಿ ಕೂಡ ಗಾಯಕಿ ಮಹತಿ , ಮಗಳು ಕಾವ್ಯ ಪ್ರಕಾಶ್‌.

🌹ಆರಡುಗುಲ ಬುಲ್ಲಟ್ ತೆಲುಗಿನ “ಅತ್ತಾರಿಂಟಿಕಿ ದಾರೇದಿ” ಚಿತ್ರದ ಹಾಡಿಗೆ ಟಿವಿ 9 ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.
🦋ಗಾಟಿಯ ಇಳಿದು ‘ಉಳಿದವರು ಕಂಡಂತೆ” ಚಿತ್ರದ ಹಾಡಿಗೆ ಅತ್ಯುತ್ತಮ ಹಿನ್ನೆಲೆ ಗಾಯಕ ಫಿಲಂ ಫೇರ್ ಪ್ರಶಸ್ತಿ.
🎄ನಮ್ಮೂರಲ್ಲಿ ಚಳಿಗಾಲದಲ್ಲಿ “ಬ್ಯೂಟಿಫುಲ್ ಮನಸುಗಳು” ಚಿತ್ರದ ಅತ್ಯುತ್ತಮ ಹಿನ್ನೆಲೆ ಗಾಯಕ ಕನಾ೯ಟಕ ಸಕಾ೯ರ ಪ್ರಶಸ್ತಿ.
🌻ಬೆಳಗೆದ್ದು ಯಾರ ಮುಖವ ನಾನು ನೋಡಿದೆ ಹಾಡಿಗೆ ಫಿಲಂ ಫೇರ್ ಪ್ರಶಸ್ತಿ ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿ.
👑ಜೀ ಕನ್ನಡ ದಶಕದ ಸಂಭ್ರಮ ವಾಯ್ಸ್ ಆಫ್ ಡಿಕೇಡ್ ಪ್ರಶಸ್ತಿ.
👒ಜೀ ಕನ್ನಡ ಹೆಮ್ಮೆಯ ಕನ್ನಡಿಗ 2018, 2019 ಹೆಮ್ಮೆಯ ಧ್ವನಿ ಪ್ರಶಸ್ತಿ.
🦚ಏರ್ ಟೆಲ್ ಸೂಪರ್ ಸಿಂಗರ್ ಜೂನಿಯರ್ ಅವಾಡ್೯.
🎸ಯಂಗ್ ಅಚೀವರ್ ಅವಾಡ್೯ ಜಯ ಟಿವಿ ಯಿಂದ.
🎷ಬಿಗ್ ತಮಿಳು ಅವಾಡ್೯ ಲಿಸನಸ್೯ ಚಾಯ್ಸ್(ಅತ್ಯುತ್ತಮ ಹಿನ್ನೆಲೆ ಗಾಯಕ ).
🎩ಮಿಚಿ೯ ಮ್ಯೂಸಿಕ್ ಅವಾಡ್೯ ಕ್ರಿಟಿಕ್ಸ್ ಅವಾಡ್೯, ತಮಿಳು.
🏍5ನೇ ವಿಜಯ ಅವಾಡ್೯ (ಅತ್ಯುತ್ತಮ ಹಿನ್ನೆಲೆ ಗಾಯಕ).
🏇ಸುವಣ೯ ಕಾಮಿಡಿ ಅವಾಡ್೯ (ಖಾಲಿ ಕ್ವಾಟ್ರು ಬಾಟ್ಲು, ತುಂಡ್ ಹೈಕ್ಳು ಸಹವಾಸ ಅತ್ಯುತ್ತಮ ಹಿನ್ನೆಲೆ ಗಾಯಕ ಪ್ರಶಸ್ತಿ).
🎷ಬಿಗ್ ಎಫ್ ಎಮ್ ಪ್ರಶಸ್ತಿ ಟಪ್ಪಾಂಗುಚಿ ಸಾಂಗ್ ಕುರಿ ಕೋಳಿನ.
ಇವಲ್ಲದೆ ಇನ್ನೂ ಹಲವಾರು ಪ್ರಶಸ್ತಿಗಳು ಇವರನ್ನು ಹರಸಿ ಬಂದಿವೆ.

ಕೊನೆ ಮಾತು ಇವರು ಹುಟ್ಟಿದ್ದು ಅರಮನೆ ನಗರ ಸಾಂಸ್ಕೃತಿಕ ತವರೂರು ಮೈಸೂರು, ಈ ಊರಿನಲ್ಲಿ ಜನಸಿದ ಎಷ್ಟೋ ಸಾಧಕರು, ಕಲಾವಿದರು ತುಂಬಾ ಫೇಮಸ್, ಅಲ್ಲಿಯ ಮಣ್ಣೇ ಹಾಗೆ ಏನಂತೀರಿ..

ಇವರ ಗಾಯನ ಪಯಣ ಹೀಗೆ ಮುಂದುವರಿಯಲಿ 🙏

“ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ
ನೀನೇ ರಾಜಕುಮಾರ”

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply