ಬಾಲಿವುಡ್ ಚಿತ್ರರಂಗದಲ್ಲಿ ಹೆಚ್ಚು ಜನಪ್ರಿಯ ಗಳಿಸಿದ ಸ್ಪುರದ್ರೂಪಿ ನಟರು ಮೊಹಮ್ಮದ್ ಯೂಸಫ್ ಖಾನ್ ಯಾರಿವರು ಅಂದ್ಕೊಂಡ್ರಾ.. ಒಮ್ಮೆ ಹಳೇಯ ಚಿತ್ರ ದೇವದಾಸ್ ಮುಗಲ್ ಇ ಅಜಾಮ್ ಚಿತ್ರ ನೆನಪಿಸಿಕೊಳ್ಳಿ ಆ ಚಿತ್ರದಲ್ಲಿ ನಟಿಸಿ ಜನಮೆಚ್ಚುಗೆ ಗಳಿಸಿದ ದಿಗ್ಗಜ ಕಲಾವಿದರು ಶ್ರೀ ದಿಲೀಪ್ ಕುಮಾರ್ ಸರ್ .ಅವರ ಹುಟ್ಟು ಹಬ್ಬದ ವಿಶೇಷವಾಗಿ ಕೆಲವು ನನಗೆ ತಿಳಿದಿರುವ ವಿಚಾರ ನಿಮ್ಮ ಮುಂದೆ ಹಂಚಿಕೊಳ್ಳುವೆ ಮೊದಲು ಅವರಿಗೆ ಶುಭಾಶಯಗಳು ಹೇಳೋಣ..
ಇವರು ಮತ್ತೊಬ್ಬ ದಿಗ್ಗಜ ಕಲಾವಿದರಾದ ರಾಜ್ ಕಪೂರ್ ಬಾಲ್ಯದ ಗೆಳೆಯರು, ನಂತರ ಚಿತ್ರರಂಗದಲ್ಲಿ ಉತ್ತಮ ಮಿತ್ರರೂ ಹೌದು. ನಾಸಿಕ್ ನಲ್ಲಿ ವಿಧ್ಯಾಭ್ಯಾಸ.
ಇವರು ತಮ್ಮ ತಂದೆ ತಾಯಿಗೆ 12 ಮಕ್ಕಳಲ್ಲಿ ಒಬ್ಬರು, ತಂದೆಯ ಕಷ್ಟ ನೋಡಲಾಗದೆ ಕುಟುಂಬದ ನಿವ೯ಹಣೆಗೆ ಬಾಂಬೆ ಟಾಕೀಸ್ ಮಾಲೀಕರಾದ ದೇವಿಕಾ ರಾಣಿ ಭೇಟಿ ಮಾಡಿ ಅಲ್ಲೇ 1250 ರೂ ಗೆ ಕೆಲಸ ಮಾಡಿದರು, ಅಲ್ಲೇ ಅಶೋಕ್ ಕುಮಾರ್ ಭೇಟಿ ನಂತರ ಇವರು ಉದು೯ ಭಾಷೆಯಲ್ಲಿ ಹೆಚ್ಚು ಪರಿಣಿತಿಯಾದ್ದರಿಂದ ಇವರಿಗೆ ಕಥೆ ಚಿತ್ರ ಕಥೆ ಬರೆಯುವ ಅವಕಾಶ ನೀಡಿದರು ಮುಂದೆ ದೇವಿಕಾರಾಣಿ ಇವರ ಹೆಸರನ್ನು ದಿಲೀಪ್ ಕುಮಾರ್ ಅಂತ ಬದಲಾಯಿಸಲು ಹೇಳಿದಾಗ ಒಪ್ಪಿಕೊಂಡ ಮೇಲೆ ನಟಿಸಿದ ಮೊದಲ ಚಿತ್ರ “ಜ್ವರ್ ಭಟ ” .
ಜನಪ್ರಿಯ ನಟಿ ಮಧುಬಾಲ ಜೊತೆ ಪ್ರೀತಿಯ ಪಾಶದಲ್ಲಿ ಮುಳುಗಿದ ಕುಮಾರ್ ತಾರಾನಾ ಚಿತ್ರೀಕರಣ ಸಮಯದಲ್ಲಿ. 7 ವಷ೯ ವರೆಗೂ ಸಂಬಂಧದಲ್ಲಿದ್ದರು. ನಯಾ ದೌರ್ ಚಿತ್ರ ಕೋಟ್೯ ಕೇಸ್ ಆಗಿ ನಂತರ ವಿಚ್ಛೇದನ ಪಡೆದು ಮುಗಲ್ ಈ ಅಜಾಮ್ ಚಿತ್ರ ಇವರಿಬ್ಬರು ನಟಿಸಿದ ಕೊನೆಯ ಚಿತ್ರವಾಯಿತು,
ಮತ್ತೊಬ್ಬ ನಟಿ ಸಾಯಿರಾ ಬಾನು ಜೊತೆ ವಿವಾಹ, ಇವರಿಗಿನ್ನ 22 ವಷ೯ ವಯಸ್ಸು ಚಿಕ್ಕವರು (ಸಾಯಿರಾ ಬಾನು). ಕುಮಾರ್ ಉದು೯,ಹಿಂದಿ,ಪಂಜಾಬಿ,ಆವಾಧಿ, ಭೋಜಪುರಿ, ಇಂಗ್ಲೀಷ್, ಬೆಂಗಾಳಿ, ಗುಜರಾತಿ ಮತ್ತು ಪಶಿ೯ಯನ್ ಭಾಷೆ ಪ್ರವೀಣರು.
ಇನ್ನೂ ಇವರು ನಟಿಸಿದ ಚಿತ್ರಗಳು 70 ಕ್ಕೂ ಹೆಚ್ಚು ಅದರಲ್ಲಿ ಕೆಲವು..
ಮೇಲ, ಅಂದಾಜ್, ಹಲ್ಚಲ್, ದಾಗ್, ಫುಟ್ ಪಾತ್, ಕೋಹಿನೂರ್, ಲೀಡರ್, ಧಮ೯ ಅಧಿಕಾರಿ, ಕಮ೯, ಸೌದಾಗರ್, ಆದ್ಮಿ, ಮುಸಾಫಿರ್..
ಇವರು ಹೆಚ್ಚಾಗಿ ಜನರನ್ನು ಸೆಳೆಯುತ್ತಿದ್ದದ್ದು ದುರಂತ ಕಥೆಗಳ ಪಾತ್ರದಿಂದ.
08 ಫಿಲಂ ಫೇರ್ ಪ್ರಶಸ್ತಿ ಅತ್ಯುತ್ತಮ ನಟ ಮತ್ತು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ, ಪದ್ಮ ಭೂಷಣ ಹಾಗೂ ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕೃತರು.
ಅಷ್ಟೇ ಅಲ್ಲದೆ ರಾಜ್ಯ ಸಭೆ ಸದಸ್ಯರಾಗಿ 06 ವಷ೯ ಸೇವೆ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಇವರು ವೈಜಯಂತಿಮಾಲ, ಮಧುಬಾಲ, ನಿಮ್ಮಿ, ಮೀರಾ ಕುಮಾರಿ ಮತ್ತಿತರ ನಟಿಯರ ಜೊತೆ ನಟಿಸಿದ್ದಾರೆ, ನಟಿಸಿದ ಹೆಚ್ಚು ಚಿತ್ರಗಳು ಇವರಿಗೆ ಜನಪ್ರಿಯತೆ ನೀಡಿವೆ.
ಇಂಥ ದಿಗ್ಗಜ ನಟರು ಹಲವು ಹೊಸ ನಟರಿಗೆ ಮಾಗ೯ದಶ೯ಕರು ಎಂದರೆ ತಪ್ಪಾಗಲಾರದು, ದೇವರು ಇವರಿಗೆ ಆಯಸ್ಸು ಆರೋಗ್ಯ ಭಾಗ್ಯವನ್ನು ಕೊಟ್ಟು ಕಾಪಾಡಲಿ ಎನ್ನೋಣ ಮತ್ತೆ ಇನ್ನೊಂದು ಲೇಖನದಲ್ಲಿ ನಿಮ್ಮನ್ನು ಭೇಟಿ ಮಾಡುವೆ 🙏