ಏನಮ್ಮಿ ಏನಮ್ಮಿ ಯಾರಮ್ಮಿ ನೀನಮ್ಮಿ ಆಗೋಯ್ತು ನನ್ನ ಬಾಳು ಹೆಚ್ಚು ಕಮ್ಮಿ.. ವಿಜಯ ಪ್ರಕಾಶ್ ಹಾಗೂ ಅನುರಾಧ ಭಟ್ ಧ್ವನಿ ಈ ಹಾಡು ಎಷ್ಟು ಜನಪ್ರಿಯವಾಗಿದೆ ಅನ್ನೋದು ಗೊತ್ತು ಆದ್ರೆ ಈ ಗೀತೆ ಬರೆದವರು ಒಬ್ಬ ನಿದೇ೯ಶಕ, ಗೀತ ರಚನೆಕಾರ, ಸಂಭಾಶಷಣೆಕಾರ ಆಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡ ಶ್ರೀ ಚೇತನ್ ಕುಮಾರ್ ರವರಿಗೆ ಜನುಮ ದಿನದ ಶುಭಾಶಯಗಳು 💐💜💐.
ಮೂಲತಹ ಕೊಳ್ಳೆಗಾಲದವರು, ಇವರ ಚೊಚ್ಚಲ ನಿದೇ೯ಶನ ದೃವ ಸಜ೯ ಮತ್ತು ರಾಧಿಕ ಪಂಡಿತ್ ನಟನೆಯ ವಿನೂತನ ಪ್ರೇಮ ಕಥೆ “ಬಹದ್ದೂರ್ “, ಕ್ಯಾಚಿ ಡೈಲಾಗ್, ಎಮೋಷನಲ್ ಪಂಚ್, ಹಾಡುಗಳು ಅಷ್ಟೇ ಸೂಪರ್ ಹಿಟ್, ಹುಡುಗಿರು ಯಾವ ಥರ ಇತಾ೯ರೇ ಅನ್ನೋದಕ್ಕೆ ಒಂದು ಸಾಂಗ್, ಅಮ್ಮಾಟೇ. ಅಮ್ಮಾಟೇ ಹರಿಕೃಷ್ಣ ಸಂಗೀತ ಮತ್ತು ಧ್ವನಿ, ಮುಸ್ಸಂಜೆ ವೇಳೇಲಿ ವಾಣಿ ಹರಿಕೃಷ್ಣ ಧ್ವನಿ ಜನಮೆಚ್ಚುಗೆ, ಲವ್ ಸಾಂಗ್ ಹೇಮಂತ್ ಧ್ವನಿ ಯಾರಿಲ್ಲ ಯಾರಿಲ್ಲ ನಿನ್ನಂತೆ ಯಾರಿಲ್ಲ. ಒಟ್ಟಿನಲ್ಲಿ ಫಿಲಂ ಸೂಪರ್ ಹಿಟ್. ಚಿತ್ರದ ಡೈಲಾಗ್ ಎಲ್ಲರ ಬಾಯಲ್ಲೂ ಕೇಳ್ತಿದ್ವಿ..
ಮತ್ತೊಂದು ಚಿತ್ರ ಧೃವ ಸಜ೯ , ರಚಿತ ರಾಮ್ ನಟನೆ “ಭಜ೯ರಿ” ಶೀ ಇಸ್ ಮೈ ಪುಟ್ಟಗೌರಿ ವಿಜಯ್ ಪ್ರಕಾಶ್ ಧ್ವನಿ , ಆಕ್ಷನ್ ಕಾಮಿಡಿ ಫಿಲಂ, ಕ್ಯಾಚಿ ಡೈಲಾಗ್, ಸಿನಿಮಾ ಜನಪ್ರಿಯ, ಈ ಚಿತ್ರ ಬೆಫಿಫೆಐ ನಲ್ಲಿ 2ನೇ ಜನಪ್ರಿಯ ಕನ್ನಡ ಮನರಂಜನೆಯ ಚಿತ್ರ ಅನ್ನೋ ಪ್ರಶಸ್ತಿಗೆ ಪಾತ್ರವಾಯಿತು.
ನಾಯಕ ಶ್ರೀ ಮುರಳಿ ನಟನೆಯ ಭರಾಟೆ ಚಿತ್ರ ಮುರಳಿ ಧ್ವನಿಯಲ್ಲಿ ಒಂದು ಸಾಂಗ್, ಫೈಟ್, ಕೋಟಿಗೊಂದು ಮನೆತನವು ಜನಪ್ರಿಯ, ನಾಯಕ ಎರಡು ಪಾತ್ರಗಳಲ್ಲಿ ಮಿಂಚಿದ್ದಾರೆ, ಪಂಚಿಂಗ್ ಡೈಲಾಗ್. ಚಿತ್ರ ಪರವಾಗಿಲ್ಲ.
🏍ಏನಮ್ಮಿ ಏನಮ್ಮಿ ಗೀತೆ ರಚನೆಗೆ ಸೈಮಾ 2019ಅತ್ಯುತ್ತಮ ಗೀತೆ ರಚನೆಕಾರ ಪ್ರಶಸ್ತಿ,
🎩 ಚಿತ್ರಸಂತೆ 2019 ಜನಪ್ರಿಯ ಗೀತೆ ಪ್ರಶಸ್ತಿ,
🦋ಹಂಗಾಮ ಮ್ಯೂಸಿಕ್ 2019 ಸಾಂಗ್ ಆಫ್ ದಿ ಇಯರ್ ಕನ್ನಡ ಪ್ರಶಸ್ತಿ.
🎄ಚಿತ್ರ ರೈಸಿಂಗ್ ಸ್ಟಾರ್ ಚೇತನ್ ಕುಮಾರ್.
ಮುಂಬರುವ ಚಿತ್ರ “ಜೇಮ್ಸ್ ” ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆ, ಈಗಾಗಲೇ ಟೀಸರ್ ಲಾಂಚಾಗಿ “ವಿ ಕಾಲ್ ಹಿಮ್ ಜೇಮ್ಸ್ ” ಹಾಡು ಭಾರೀ ಸೌಂಡ್ ಮಾಡಿ ಜನಪ್ರಿಯವಾಗಿದೆ, ಪುನೀತ್ ಇದ್ದ ಮೇಲೆ ಡಿಫರೆಂಟ್ ಸ್ಟೈಲ್ ಆಫ್ ಮ್ಯೂಸಿಕ್, ಡಾನ್ಸ್, ಫೈಟ್ಸ್ ಜನ ಎಕ್ಸ್ಪೆಕ್ಟ್ ಮಾಡ್ತಾರೆ. ಥಿಯೇಟರ್ ನಲ್ಲಿ ಪುನೀತ್ ಎಂಟ್ರಿಗೆ ಫ್ಯಾನ್ಸ್ ಫಿದಾ ಆಗೋದು ನೋ ಡೌಟ್, ರಾಜಕುಮಾರ ಚಿತ್ರದ ನಾಯಕಿ ಪ್ರಿಯಾ ಆನಂದ್ ಈ ಚಿತ್ರದಲ್ಲಿ ನಾಯಕಿ, ಪುನೀತ್ ಮತ್ತು ಪ್ರಿಯಾ ಆನಂದ್ ಜೋಡಿ ಈಗಾಗಲೇ ಮೋಡಿ ಮಾಡಿದೆ, ಚಿತ್ರೀಕರಣ ಭರದಿಂದ ಸಾಗಿದೆ, ಬೆಂಗಳೂರು, ಹಂಪಿ ಬಳ್ಳಾರಿ ಯಲ್ಲಿ ಚಿತ್ರೀಕರಣ, ಟಗರು ಖ್ಯಾತಿಯ ಚರಣ್ ರಾಜ್ ಸಂಗೀತ ನಿದೇ೯ಶನ, ಕಿಶೋರ್ ಪತ್ತಿಕೊಂಡ ನಿಮಾ೯ಣವಿದ್ದು ಛಾಯಾಗ್ರಹಣ ಶ್ರೀಷಾ ಕುಡುವಳ್ಳಿ, ದೀಪು ಎಸ್ ಕುಮಾರ್ ಸಂಕಲನದ ಜವಾಬ್ದಾರಿ, ಅನು ಪ್ರಭಾಕರ್, ಆದಿತ್ಯ ಮೆನನ್, ರಂಗಾಯಣ ರಘು, ಸಾಧುಕೋಕಿಲ ಮತ್ತಿತರರು ತಾರಾಗಣದಲ್ಲಿದ್ದಾರೆ, ಚಿತ್ರ ಆದಷ್ಟು ಬೇಗ ತೆರೆಗೆ ಬರಲಿ ಅಪ್ಪು ಅಭಿಮಾನಿಗಳು ಅವರನ್ನು ನೋಡಿ ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ.
ಚೇತನ್ ಕುಮಾರ್ ರವರ ಮುಂದಿನ ಚಿತ್ರಗಳಿಗೆ ಆಲ್ ದಿ ಬೆಸ್ಟ್ ಮತ್ತು ಇನ್ನೂ ಹೆಚ್ಚು ಗೀತೆಗಳು ನಿಮ್ಮಿಂದ ಮೂಡಿ ಬರಲಿ ಎಂದು ಆಶಿಸುವೆವು 🙏