ಹ್ಯಾಪಿ ಬರ್ತ್‌ಡೇ ಯುವರಾಜ ನಿಖಿಲ್ ಗೌಡ 💐🏍🏇🦋

“ನಿಮ್ಮಪ್ಪನೇನ್ ಹೀರೋನೇನೋ…
ಪ್ರತಿಯೊಬ್ಬ ಮಗನಿಗೂ ತನ್ ಅಪ್ಪಾನೆ ಕಣೊ ಹೀರೋ
ಪ್ರತಿಯೊಬ್ಬ ಅಪ್ಪನಿಗೂ ತನ್ ಮಗನೇ ಕಣೊ ಹೀರೋ “

ಇವರ ತಾತ ಕನ್ನಡ ಮಣ್ಣಿನ ಮಗ, ಭಾರತ ದೇಶದ ಮೊದಲ ಮಾಜಿ ಪ್ರಧಾನಿ ಯಾಗಿದ್ದವರು (ಕನಾ೯ಟಕದಿಂದ) ರಾಜಕೀಯ ಪಂಡಿತರು ಶ್ರೀ ಹೆಚ್ ಡಿ ದೇವೇಗೌಡ, ಅಪ್ಪ ಕನಾ೯ಟಕದ ಮಾಜಿ ಮುಖ್ಯಮಂತ್ರಿ ಶ್ರೀ ಹೆಚ್ ಡಿ ಕುಮಾರಸ್ವಾಮಿ ತಾಯಿ ಅನಿತ ಕುಮಾರಸ್ವಾಮಿ, ಹೆಸರು ಹೇಳಬೇಕಾ ಇನ್ನೂ.. ಅವರೇ ಯುವರಾಜ ನಿಖಿಲ್ ಕುಮಾರಸ್ವಾಮಿ, ನಿಖಿಲ್ ಗೌಡ ಹ್ಯಾಪಿ ಬರ್ತ್‌ಡೇ ನಿಮಗೆ 💐💜🎸🦋.

ತಂದೆ ಮತ್ತು ತಾತ ಇಬ್ಬರೂ ಜನತಾದಳ ಪಕ್ಷದಲ್ಲಿ ಜನಪ್ರಿಯ ನಾಯಕರು, ಹೆಚ್ ಡಿ ಕೆ ರವರು ಚಿತ್ರರಂಗದಲ್ಲಿ ಚಿತ್ರ ನಿಮಾ೯ಣ ಮಾಡಿದ್ದು ಚಿತ್ರಗಳು ಚಂದ್ರ ಚಕೋರಿ ಸೂಯ೯ವಂಶ ಯಶಸ್ವಿ ಪ್ರದಶ೯ನಗೊಂಡಿದೆ.

ನಿಖಿಲ್ ನೋಡೋಕೆ ಸೂಪರ್, ಕಟ್ಟು ಮಸ್ತಾದ ದೇಹ, ಎಲ್ರೂ ಅನ್ಕೊಬೋದು ಮಿನಿಸ್ಟರ್ ಮಗ ತಾನೆ ಹೇಗಾದರೂ ಫಿಲಂ ಲ್ಯಾಂಡಲ್ಲಿ ಮಿಂಚ್ತಾರೆ ಅಂತ ಆದ್ರೆ ಅವರು ಎಷ್ಟೇ ದೊಡ್ಡ ಫ್ಯಾಮಿಲಿ ಯಿಂದ ಬಂದ್ರೂ ಚಿತ್ರರಂಗಕ್ಕೆ ಬರೋಕು ಮುಂಚೆ ಸಾಕಷ್ಟು ಟ್ರೈನಿಂಗ್ ಪಡಿಬೇಕು, ಡಿಫರೆಂಟ್ ಸ್ಟೈಲ್, ಆಕ್ಟಿಂಗ್ ಲೆವೆಲ್, ವೆರೈಟಿ ಲುಕ್ಸ್ ಇವೆಲ್ಲಾ ಹೆಸರಾಂತ ಫಿಲಂ ಇನ್ಸ್ಟಿಟ್ಯೂಟ್ ನಲ್ಲಿ ಕಲಿತಿರೋದೆ ಬೆಳ್ಳಿ ತೆರೆಯ ಮೇಲೆ ಮಿಂಚೋದಕ್ಕೆ ಕಾರಣ ಅಂತ ಹೇಳಬಹುದು. ಬಹುಶಃ ತಂದೆಯ ಆಸೆ ಇರುತ್ತೆ ಮಗ ಚಿತ್ರರಂಗಕ್ಕೆ ಎಂಟ್ರಿ ಕೊಡಬೇಕು ಅನ್ನೋದು.

2016 ರಲ್ಲಿ ಮಗನನ್ನು “ಜಾಗ್ವಾರ್” ಚಿತ್ರದ ಮೂಲಕ ನಾಯಕ ನಟನಾಗಿ ಚಿತ್ರರಂಗಕ್ಕೆ ಕರೆತಂದರು, ಪ್ರೇಕ್ಷಕರೂ ಕೂಡ ತೆರೆಯ ಮೇಲೆ ನೋಡಿ ಖುಷಿ ಪಟ್ಟರು, ಈ ಚಿತ್ರ ತೆಲುಗಿನಲ್ಲೂ ತೆರೆ ಕಂಡು ಅಲ್ಲಿಯ ಜನರು ಇವರನ್ನು ಗುರುತಿಸಿದರು.

ಜಾಗ್ವಾರ್ ಚಿತ್ರದ ನಟನೆಗೆ ಅತ್ಯುತ್ತಮ ಚೊಚ್ಚಲ ನಟ (ಡೆಬುಟಂಟ್ )ಎಂದು ಗುರುತಿಸಿ ಸೈಮಾ ಪ್ರಶಸ್ತಿ ಲಭಿಸಿದೆ.

2019 ಎ ಹಷ೯ ನಿದೇ೯ಶನದ “ಸೀತಾರಾಮ ಕಲ್ಯಾಣ “ ಕೌಟುಂಬಿಕ ಚಲನಚಿತ್ರದಲ್ಲಿ ನಟಿಸಿ ಜನಮೆಚ್ಚುಗೆ ಗಳಿಸಿದರು, ತೆಲುಗಿನ ರಿಮೇಕ್
ಸೂಪರ್ ಹಿಟ್ ಆದ ಹಾಡು “ನಿನ್ನ ರಾಜ ನಾನು, ನನ್ನ ರಾಣಿ ನೀನು “.

ಇದೇ ವಷ೯ದಲ್ಲಿ ಮತ್ತೊಂದು ಚಿತ್ರ ಎಂ ಮುನಿರತ್ನ ನಿಮಾ೯ಣ, ನಾಗಣ್ಣ ನಿದೇ೯ಶನದ ಬಿಗ್ ಬಜೆಟ್ ಸಿನಿಮಾ ದಶ೯ನ್, ಅಜು೯ನ್ ಸಜಾ೯, ಶಶಿಕುಮಾರ್ ಇತರರ ಜೊತೆಗೆ ಅಭಿಮನ್ಯು ಪಾತ್ರ ಮಾಡಿದ “ಕುರುಕ್ಷೇತ್ರ ” ಮೊದಲು ಮಾಡಿದ 2 ಚಿತ್ರಗಳಿಗಿಂತ ವಿಭಿನ್ನ ನಟನೆ, ಜನಮನ್ನಣೆ.

ಒಂದು ವಿಷಯ ನಿಮ್ ಹತ್ರ ಹೇಳೋಕೆ ಇಷ್ಟ ಪಡುವೆ ಇವರ ತಂದೆ ಜಿಂದಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯೋವಾಗ ಅವರನ್ನ ಭೇಟಿ ಮಾಡುವ ಅವಕಾಶ ನನಗೆ ಸಿಕ್ಕಿತು, ಕುಮಾರಣ್ಣ ಆರೋಗ್ಯ ವಿಚಾರಿಸಿದು ಅಲ್ಲದೆ ಅಂದು ನಿಖಿಲ್ ರವರನ್ನು ಮಾತನಾಡಿಸಿ ಸ್ವಲ್ಪ ಹೊತ್ತು ಕಾಲ ಕಳೆದೆ ಆಗ ನಾನೇ ಒಂದು ವಿಶಯ ಕೇಳಿದೆ ಸರ್ ನೀವು ನೋಡೋಕೆ ಚೆನ್ನಾಗಿದ್ದೀರ ನೀವು ಯಾಕೆ ಹೀರೋ ಆಗಿ ಫಿಲಂ ಮಾಡಬಾದು೯ ಅದಕ್ಕೆ ಆ ಸಮಯ ಬರಲಿ ನೋಡೋಣ ಅಂದ್ರು ಅದಾದ ಕೆಲವಷ೯ದಲ್ಲಿ ಹೀರೋ ಆಗಿ ಪ್ರವೇಶ.

ಫೆಬ್ರುವರಿ 10 2020 ರಲ್ಲಿ ರೇವತಿ ಅವರ ಜೊತೆ ನಿಶ್ಚಿತಾರ್ಥ, ಎಂ ಕೃಷ್ಣಪ್ಪ (ಕಾಂಗ್ರೆಸ್ ನಾಯಕರು) ರವರ ಮೊಮ್ಮಗಳು, ತಾಜ್ ವೆಸ್ಟೆಂಡ್ ನಲ್ಲಿ , ಮದುವೆ ಏಪ್ರಿಲ್ 17 2020 ರಾಮನಗರ, ಜಾನಪದ ಲೋಕದಲ್ಲಿ ನಡೆಯಿತು. ಇಬ್ಬರೂ ಅನ್ಯೋನ್ಯವಾಗಿ ಜೀವನ ಮಾಡುತ್ತಿದ್ದಾರೆ.

ಇವರ ಇಡೀ ಕುಟುಂಬ ರಾಜಕೀಯಕ್ಕೆ ಮೀಸಲಿದ್ದು ಜನರಿಗಾಗಿ, ರೈತರ ಸಮಸ್ಯೆಗಳನ್ನು ಪರಿಹರಿಸಲು ತಮ್ಮಿಂದಾದ ಸಹಕಾರ ನೀಡೋದು, ತಂದೆ ಮತ್ತು ತಾತ ರನ್ನು ಆದಶ೯ವಾಗಿಟ್ಟಕೊಂಡು ನಿಖಿಲ್ ಕೂಡ ಪಕ್ಷದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳೋದು, ಅವರು ಹೇಳಿದಂತೆ ನಡೆದುಕೊಳ್ಳೋದು, ಲಾಕ್ ಡೌನ್ ಸಮಯದಲ್ಲಿ ಎಷ್ಟೋ ಜನರಿಗೆ ಸಹಾಯ ಮಾಡೋದು ಹೀಗೆ..

ರೈಡರ್ ಮುಂದಿನ ಚಿತ್ರದಲ್ಲಿ ನಟಿಸುತ್ತಿರುವ ಇವರಿಗೆ ಚಿತ್ರರಂಗದಲ್ಲಿ ಇನ್ನೂ ಹೆಚ್ಚು ಸಿನಿಮಾ ನಟಿಸಲಿ, ರಾಜಕೀಯದಲ್ಲಿ ಹೆಸರು ಮಾಡಲಿ ಅನ್ನೋದೆ ಅಭಿಮಾನಿಗಳ ಆಶಯ, ಹ್ಯಾಪಿ ಬರ್ತ್‌ಡೇ ಯುವರಾಜ ನಿಖಿಲ್ ಗೌಡ್ರೆ 💐🦋💐

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply