ಹ್ಯಾಪಿ ಬರ್ತ್‌ಡೇ ವಿಜಯ್ ಸೇತುಪಥಿ ಸರ್ 💐💜🌹

ಇವರು ಹುಟ್ಟಿದ್ದು ರಾಜಪಾಳಯಂ, ಬೆಳೆದಿದ್ದು ಚೆನ್ನೈ, ವಿಜಯ್ ಗುರುನಾಥ ಸೇತುಪಥಿ (ವಿಜಯ್ ಸೇತುಪಥಿ) ಎಂ ಜಿ ಆರ್ ಸೆಕೆಂಡರಿ ಸ್ಕೂಲ್ ಕೊಡಂಬಾಕ್ಕಂ ಮತ್ತು ಲಿಟಲ್ ಏಂಜೆಲ್ಸ್ ಹೆಚ್ ಆರ್ ಸ್ಕೂಲ್ ನಲ್ಲಿ ವಿಧ್ಯಾಭ್ಯಾಸ. ವಿದ್ಯೆಯಲ್ಲಿ ಅಷ್ಟುಕಷ್ಟೆ ಆಂದ್ರೆ ಆವರೇಜ್ ವಿಧ್ಯಾರ್ಥಿ, ಸ್ಪೋಟ್ಸ್೯ ಹಾಗೂ ಇತರೆ ಚಟುವಟಿಕೆಗಳಲ್ಲಿ ಇಂಟ್ರೆಸ್ಟ್ ಇಲಿ೯ಲ್ಲ.

ಇವರ ನಿಜ ಜೀವನ ಬೆಳೆದು ಬಂದ ಹಾದಿ ಒಂದು ರೀತಿ ಎಲ್ಲರೂ ತಿಳ್ಕೊಬೇಕು ಅದುಕ್ಕೂ ಮೊದಲು ಹ್ಯಾಪಿ ಬರ್ತ್‌ಡೇ ವಿಜಯ್ ಸೇತುಪಥಿ ಸರ್ 💐🌹💜.

16 ನೇ ವಯಸ್ಸಿನಲ್ಲಿ ನಮ್ಮವರ್ (1994) ಚಿತ್ರದ ಆಡಿಷನ್ ನೆಲ್ಲಿ ರಿಜೆಕ್ಟ್ ಆದಕ್ಕೆ ಕಾರಣ “ಕುಳ್ಳಗೆ ” ಇದ್ದರಿಂದ. ತಮ್ಮ ಪಾಕೆಟ್ ಮನಿಗೋಸ್ಕರ ರಿಟೇಲ್ ಸ್ಟೋರ್ ನಲ್ಲಿ ಸೇಲ್ಸ್‌ಮನ್ ಆಗಿ ಕೆಲಸ, ಫುಡ್ ಜಾಯಿಂಟ್ ನಲ್ಲಿ ಕ್ಯಾಶಿಯರ್, ಫೋನ್ ಬೂತ್ ಆಪರೇಟರ್ ಹೀಗೆ…
ಬ್ಯಾಚುಲರ್ ಆಫ್ ಕಾಮರ್ಸ್ ಡಿಗ್ರಿ ಧನರಾಜ್ ಬೇಡ್ ಜೈನ್ ಕಾಲೇಜ್, ತೊರೈಪಾಕಂ.

ಸಿಮೆಂಟ್ ಬಿಸ್ನೆಸ್ ಕಂಪನಿಯಲ್ಲಿ ಅಕೌಂಟ್ ಅಸ್ಸಿಸ್ಟೆಂಟ್ ಕೆಲಸ ಮಾಡ್ತಾ ಕಂಪನಿಯವರೆ ಇವರಿಗೆ ದುಬೈ, ಯುನೈಟೆಡ್ ಅರಬ್ ಎಮಿರೇಟ್ಸ್ ಗೆ ಹೋಗಿ ಬರುವ ಅವಕಾಶ, ಹೆಚ್ಚಾಗಿ ಭಾರತದಲ್ಲಿರೋದ್ಕಿಂತ ದುಬೈನಲ್ಲಿ ಇದ್ದಿದ್ದೆ ಹೆಚ್ಚು, 2 ವಷ೯ ದುಬೈನಲ್ಲಿರೊವಾಗ ಒಬ್ಬ ಹುಡುಗಿ ಮೀಟಾಗಿ 2003 ರಲ್ಲಿ ಜೆಸ್ಸಿ ಜೊತೆ ವಿವಾಹ.
ಕೆಲಸ ಅಷ್ಟು ಇಷ್ಟವಾಗದೆ ಮರಳಿ ಇಂಡಿಯಾ ವಾಪಸ್ ನಂತ್ರ ಒಂದು ಸಲ ನಿದೇ೯ಶಕ “ಬಾಲು ಮಹೇಂದ್ರ” ಫೋಟೋಜೆನಿಕ್ ಫೇಸ್ ನಿಮ್ದು ಅಂತ ಹೇಳಿರೋದು ಜ್ನಾಪಕ ಆಗಿ ಕೂತು ಪಿ ಪಟ್ಟಾರೈ ನಾಟಕ ಕಂಪನಿಯಲ್ಲಿ ಅಕೌಂಟೆಂಟ್ ಮತ್ತು ನಟನಾಗಿ , ಇಲ್ಲಿಂದನೇ ದೊಡ್ಡ ದೊಡ್ಡ ನಟರನ್ನ ಅಬ್ಸವ್೯ ಮಾಡ್ತಿದ್ರು.
ಕಲೈಯರ್ ಟಿವಿ “ನಾಳೆಯ ಇಯಕು೯ನರ್ ” ಶಾಟ್೯ ಮೂವಿ ಪ್ರಾರಂಭ.

ಮತ್ತೊಬ್ಬ ನಿದೇ೯ಶಕ ಸೆಲ್ವರಾಘವನ್ ಭೇಟಿ ಮಾಡಿದಾಗ ಪುದುಪೇಟೈ (ಧನುಶ್ ಜೊತೆ ನಟನೆ), ಜೊತೆಗೆ ತಮಿಳು – ಕನ್ನಡ ಅಖಾಡ ಚಿತ್ರ, ಕಾರಣಾಂತರದಿಂದ ಕನ್ನಡದಲ್ಲಿ ರೀಲೀಸ್ ಆಗಲಿಲ್ಲ ತಮಿಳಿನಲ್ಲಿ ರಿಲೀಸ್ ಆಯಿತು.
ಡೈರೆಕ್ಟರ್ ಸುಸೀಂದ್ರನ್ ಚಿತ್ರ ವೆನಿಲಾ ಕಬಡ್ಡಿ ಕೊಳು, ನಾನ್ ಮಹಾನ್ ಅಲ್ಲ ಚಿತ್ರದಲ್ಲಿ ಸಹ ನಟನಾಗಿ ಗುರುತು. ಡೈರೆಕ್ಟರ್ ಸೀನು ರಾಮಸ್ವಾಮಿ ಸೇತುಪಥಿ ಟ್ಯಾಲೆಂಟ್ “ತೆನ್ಮರುಕು ಪರುವಕಾಟ್ರು ” ಚಿತ್ರದ ಕುರುಬ ನಟನೆ ಎಲ್ಲರ ಗಮನ ಸೆಳೆದು “ರಾಷ್ಟ್ರ ಪ್ರಶಸ್ತಿ ” ಜೊತೆಗೆ “ಬೆಸ್ಟ್ ತಮಿಳ್ ಫಿಲಂ ಆಫ್ ದಿ ಇಯರ್ ” ಪಡೆದಿವೆ.

ಇವರು ನಟಿಸಿದ ಚಿತ್ರಗಳು ಕೆಲವು ಸುಂದರಪಾಂಡಿಯನ್, ಪಿಜ್ಜಾ, ಸೂದು ಕವ್ವುಂ, ರಮ್ಮಿ, ಪನ್ನಾಯಾರುಂ ಪದ್ಮಿನಿಯುಂ, ಜಿಗದಾ೯ಂಡ, ನಾನುಂ ರೌಡಿದ, ಸೇತುಪಥಿ, ಧಮ೯ ದುರೈ, ವಿಕ್ರಂ ವೇದ, ರೆಕ್ಕ, 96, ಸೀತಕತ್ತಿ, ಪೆಟ್ಪ, ಆಂಡವನ್ ಕಟ್ಟಳೈ ..
ಧನುಶ್, ರಜಿನಿಕಾಂತ್, ವಿಜಯ್, ಶಶಿಕುಮಾರ್, ಮೆಗಾಸ್ಟಾರ್ ಚಿರಂಜೀವಿ ಜೊತೆ ನಟನೆ.
ಖಳನಟರಾಗಿ ನಂತರ ನಾಯಕ ನಟರಾಗಿ, ಹಾಸ್ಯ ಸನ್ನಿವೇಶಗಳು, ತಮ್ಮದೇ ಶೈಲಿಯ ಡೈಲಾಗ್ ಮತ್ತು ಡಾನ್ಸ್ ನಿಂದ ಜನಪ್ರಿಯ.

ಇವರ ನಟನೆಯನ್ನು ಮೆಚ್ಚಿ ಜನರು ನೀಡಿದ ಬಿರುದು “ಮಕ್ಕಳ್ ಸೆಲ್ವಂ”.
ನಟನೆಗೆ ಹಲವಾರು ಪ್ರಶಸ್ತಿಗಳು ಬಂದಿವೆ, ಅವಲ್ಲಿ ಕೆಲವು :-

🎷ಸುಂದರಪಾಂಡಿಯನ್ ಚಿತ್ರದ ಅತ್ಯುತ್ತಮ ಖಳನಟ ಪ್ರಶಸ್ತಿ ತಮಿಳು ನಾಡು ಸಕಾ೯ರ.
🌹ನಡುವುಲೆ ಕೊಂಜುಂ ಪಕ್ಕತ್ತು ಕಾಣುಂ ಅತ್ಯುತ್ತಮ ನಟ, ಉದಯೋನ್ಮಕ ನಟ ನಾವೇ೯ ತಮಿಳ್ ಫಿಲಂ ಫೆಸ್ಟಿವಲ್ ಅವಾಡ್, ಎಡಿಸನ್ ಅವಾಡ್೯…
🦚ಪಿಜ್ಜಾ ಚಿತ್ರದ ನಟನೆಗೆ ಅತ್ಯುತ್ತಮ ನಟ ಸೈಮಾ, ಬಿಗ್ ಎಫ್ ಎಮ್ ಪ್ರಶಸ್ತಿ.
👒ಧಮ೯ದುರೈ ಚಿತ್ರದ ನಟನೆಗೆ ಅತ್ಯುತ್ತಮ ನಟ ಪ್ರಶಸ್ತಿ ನಾವೇ೯ ತಮಿಳ್ ಫಿಲಂ ಫೆಸ್ಟಿವಲ್, ಏಶಿಯಾ ವಿಷನ್ ಅವಾಡ್೯.
🎩ವಿಕ್ರಂ ವೇದ ಚಿತ್ರದ ನಟನೆಗೆ ಅತ್ಯುತ್ತಮ ಖಳನಟ ಆನಂದವಿಕಟನ್, ಫಿಲಂ ಫೇರ್ ಅವಾಡ್೯, ವಿಜಯ್ ಅವಾಡ್೯.
🏍ಸೂಪರ್ ಡಿಲಕ್ಸ್ ಚಿತ್ರದ ನಟನೆಗೆ ಅತ್ಯುತ್ತಮ ನಟ ಇಂಡಿಯನ್ ಫಿಲಂ ಫೆಸ್ಟಿವಲ್ ಮೆಲ್ಬೋನ್೯.
👑96 ಚಿತ್ರದ ನಟನೆಗೆ ಅತ್ಯುತ್ತಮ ನಟ ಫಿಲಂ ಫೇರ್ ಪ್ರಶಸ್ತಿ ಸೌತ್ ಲಭಿಸಿವೆ.

ಡಬ್ಬಿಂಗ್ ಆಟಿ೯ಸ್ಟ್ ಆಗಿ ಮರುದವೇಲು, ಅತ್ತಿ ಚಿತ್ರದ ಹಿನ್ನೆಲೆ ಗಾಯಕ, ಜುಂಗ, ಮೇಕು೯ ತೊಡಚಿ೯ ಮಾಲೈ ಚಿತ್ರದ ನಿಮಾ೯ಪಕ, ಡಿಯರ್ ಕಾಮರೇಡ್, ದೇವರಾಟ್ಟಂ ಚಿತ್ರದ ಹಿನ್ನೆಲೆ ಗಾಯಕ…

ನವರಸ ವೆಬ್ ಸೀರಿಸ್ ಕೂಡ ಮಾಡ್ತಿದ್ದಾರೆ. ಟೆಲಿವಿಷನ್ ಶೋ ಪೆಣ್ ಮತ್ತು ನಮ್ಮ ಊರು ಹೀರೋ ಹಾಸ್ಟಾಗಿ ನಡೆಸಿಕೊಟ್ಟಿದ್ದಾರೆ.ಟೀ ಪೋಡು, ಸ್ಪಿರಿಟ್ ಆಫ್ ಚೆನ್ನೈ, ಮಾಟ್ರಂಗಳ್ ಒಂಡ್ರೆದಾನ್, ಮಚಾನ್ ಮಚಾನ್ ಮ್ಯೂಸಿಕ್ ವಿಡಿಯೋ ಪ್ರೊಮೋಷನಲ್ ಸಾಂಗ್ ನಲ್ಲಿ ಕಾಣಬಹುದು.

ಜೆಸ್ಸಿ ರವರ ಜೊತೆ ವಿವಾಹ, ಸೂರ್ಯ ಮಗ, ಶ್ರೀಜ ಮಗಳು, ಮಗನಿಗೆ ಸೂಯ೯ ಹೆಸರಿಡೊ ಕಾರಣ ಅವರ ಸ್ಕೂಲ್ ಫ್ರೆಂಡ್ ನೆನಪಿಗೆ, ಸೂರ್ಯ ತೀರೋಗಿರೋದರಿಂದ.

ಮಗ ನಾನುಂ ರೌಡಿದಾನ್ ಚಿತ್ರದಲ್ಲಿ ನಟನೆ, ಸಿಂಧುಬಾದ್ ಚಿತ್ರದಲ್ಲೂ ಅಪ್ಪನ ಜೊತೆ ನೋಡಬಹುದು.

ವಿಜಯ್ ಸೇತುಪಥಿ ಕಷ್ಟದಲ್ಲಿರುವ ಎಷ್ಟೋ ಜನರಿಗೆ ತಮ್ಮಿಂದಾದ ಸಹಾಯ, ಸಾಮಾಜಿಕ ಚಟುವಟಿಕೆಗಳು, ಟ್ರಸ್ಟ್‌ ವತಿಯಿಂದ ಹಲವಾರು ಸೌಲಭ್ಯಗಳನ್ನು ಒದಗಿಸುತ್ತಿರೋದು ಹೆಮ್ಮೆಯ ವಿಷಯ. ನಾಸ್ತಿಕದ ಅರಿವಿರುವವರು ತಮ್ಮಲ್ಲಿರುವ ಆಲೋಚನೆಗಳನ್ನು ಭಾಷಣದ ಮೂಲಕ ಜನರಿಗೆ ತಿಳಿಸುತ್ತಿರುವರು.

ಮುಂಬರುವ ಚಿತ್ರಗಳು ತುಘಲಕ್, ಕಡೇಸಿ ವಿವಸಾಯಿ, ಉಪ್ನೇನ, ಲಾಭಂ, ಕೊರೋನಾ ಕುಮಾರ್, ಮುಂಬೈಕಾರ್ ಹೀಗೆ ಇನ್ನೂ..

ಯಾವಾಗ ಚಿತ್ರದ ಆಡಿಷನ್ ನಲ್ಲಿ ಇವರನ್ನು ರಿಜೆಕ್ಟ್ ಮಾಡಿದ್ರೋ ಆಗ ಅಷ್ಟಕ್ಕೇ ಬೇಜಾರಾಗಿ ಕೊರಗದೆ ಅದನ್ನೇ ಚಾಲೆಂಜಾಗಿ ಸ್ವೀಕರಿಸಿ ತಾನು ಒಬ್ಬ ಪ್ರತಿಭಾವಂತ ನಟ, ನಿಮಾ೯ಪಕ, ಚಿತ್ರಬರಹಗಾರ, ಹಿನ್ನೆಲೆ ಗಾಯಕ, ಗೀತ ರಚನೆಕಾರ ಅಂತ ತೋರಿಸಿಕೊಟ್ಟ ಇವರ ಪರಿಶ್ರಮಕ್ಕೆ ನಾವೆಲ್ಲರೂ ಹ್ಯಾಟ್ಸ್ ಆಫ್ ಹೇಳ್ಬೇಕು.

ಸಂಕ್ರಾಂತಿ ಹಬ್ಬದ ವಿಶೇಷ ಮಾಸ್ಟರ್ ಚಿತ್ರದಲ್ಲಿ ಇವರ ನಟನೆಗೆ ಜನ ಮೆಚ್ಚುಗೆ ಪಡೆದಿರೋದು ಮತ್ತು ಮುಂಬರುವ ಇತರೆ ಹಾಗೂ ಮುಂದಿನ ದಿನಗಳಲ್ಲಿ ಮತ್ತೆ ಕನ್ನಡ ಚಿತ್ರದಲ್ಲಿ ನಟಿಸಲಿ, ಮತ್ತೊಮ್ಮೆ ನಮ್ಮ ತಂಡದಿಂದ ಹ್ಯಾಪಿ ಬರ್ತ್‌ಡೇ ವಿಜಯ್ ಸೇತುಪಥಿ ಸರ್ 🌹💜🌹

ಶ್ರೀನಿವಾಸ್ ಎ

ಶ್ರೀನಿವಾಸ್ ಎ

ಶ್ರೀನಿವಾಸ್. ಎ - ಇವರು ಬೆಂಗಳೂರಿನ ಕುರುಬರಹಳ್ಳಿ ನಿವಾಸಿಯಾಗಿದ್ದು ಪ್ರಸ್ತುತ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಬಿ. ಕಾಂ ಪದವೀಧರರಾಗಿದ್ದು, ಕಂಪ್ಯೂಟರೈಸ್ಡ್ ಫೈನಾನ್ಶಿಯಲ್ ಕೋರ್ಸ್ ಜೊತೆಗೆ ಡಿ. ಟಿ. ಪಿ ತರಬೇತಿ ಪಡಿದಿದ್ದಾರೆ, ಹಲವಾರು ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ,ಹುಟ್ಟಿನಿಂದ ಅಣ್ಣಾವ್ರ ಅಭಿಮಾನಿ, ಚಲನಚಿತ್ರಗಳು, ಹಾಡುಗಳೆಂದರೆ ಬಹಳ ಇಷ್ಟವಾದವು, ಗಾಯಕರೂ ಕೂಡ, ರಾಜ್ಯ ಮಟ್ಟದ ಗಾಯನ ಸ್ಪಧೆ೯ಯಲ್ಲಿ ಭಾಗಿ , ಗಾಯನ ಕ್ಷೇತ್ರದಲ್ಲಿ ಹಲವು ಬಾರಿ ಪ್ರಯತ್ನ ಸಫಲವಾಗಿಲ್ಲ, ಹೆಚ್ಚಾಗಿ ರಾಜವಂಶದ ಮೇಲೆ ಅಭಿಮಾನ, ನಾನು ಹಾಗೂ ಹೀಗೂ ಲೇಖನ ಬರೆಯೋದಕ್ಕೆ ಅಪ್ಪಾಜಿ ಆಶೀವಾ೯ದ, ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮದ ಓದುಗರಿಗೆ ಹಂಚಿಕೊಳ್ಳಲಿದ್ದಾರೆ, ಚಿತ್ರ ಜಗತ್ತಿನ ಬಗ್ಗೆ ಹೆಚ್ಚಿನ ಒಲವು ಜೊತೆಗೆ ಕೈಲಾದ ಸಮಾಜ ಸೇವೆ, ಕನ್ನಡ ನಾಡಿನ ಸಂಘದಲ್ಲಿ ಸದಸ್ಯನಾಗಿ ಸೇವೆ, ಬಿಡುವಿನ ವೇಳೆಯಲ್ಲಿ ಸಮಯ ಸಿಕ್ಕಾಗ ಹಳೇ ಕಲಾವಿದರ ಭೇಟಿ ಮಾಡಿ ಅವರ ಜೀವನ ಕುರಿತು ಮಾಹಿತಿ ಕಲೆ ಹಾಕಿ ಓದುಗರಿಗೆ ತಿಳಿಸುವುದು. ಚಿತ್ರ ವಿಮರ್ಶೆ ಮಾಡಿ ಜನರಿಗೆ ತಿಳಿಸುವುದು, ಸಿನಿಮಾದಲ್ಲಿ ಹೆಚ್ಚಿನ ಆಸಕ್ತಿ, ಬೆಳ್ಳಿತೆರೆಯ ಮೇಲೆ ಬರುವ ಹಂಬಲ, ಶ್ರೀನಿವಾಸ್ ರವರು ಚಿತ್ರೋದ್ಯಮ.ಕಾಂ ಬರಹಗಾರರ ಬಹು ಮುಖ್ಯ ಸದಸ್ಯ, ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ಲೇಖಕರಿಗೆ ಸ್ಪೂರ್ತಿ, ಶ್ರೀನಿವಾಸ್ ರವರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ. ಜೈ ಕರ್ನಾಟಕ ಜೈ ಕನ್ನಡಿಗ ಜೈ ರಾಜಣ್ಣ 🙏

Leave a Reply