ತೆರೆಯ ಮೇಲೆ ಮತ್ತೇ ಪುನೀತ್ ರಾಜಕುಮಾರ್ ಚಿತ್ರ,

ಕನ್ನಡಿಗರ ಆರಾಧ್ಯ ದೈವ, ನಮ್ಮೆಲ್ಲರ ಪ್ರೀತಿಯ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕೊನೆಯ ಚಿತ್ರ ಗಂಧದ ಗುಡಿ ಚಿತ್ರದ ರಿಲೀಸ್ ದಿನಾಂಕವು ಗೊತ್ತಾಗಿದೆ. ನಮ್ಮೆಲ್ಲರನ್ನೂ ಬಿಟ್ಟು ಹೋದ ಅಪ್ಪು, ಅವರು ನಟಿಸಿದ ಕೊನೆಯ ಚಿತ್ರ ಗಂಧದ ಗುಡಿ ಮೂಲಕ ಮತ್ತೆ ನಮ್ಮೆಲ್ಲರನ್ನೂ ರಂಜಿಸಲು ಇದೇ ಅಕ್ಟೋಬರ್ 28, 2022 ರಂದು ತೆರೆಯ ಮೇಲೆ ಬರುತ್ತಿದ್ದಾರೆ.
ಸ್ವತಃ ಅಶ್ವಿನಿ ಪುನೀತ್ ರಾಜಕುಮಾರ್ ರವರು ತಮ್ಮ ಫೇಸ್ ಬುಕ್ ಅಕೌಂಟ್ ನಿಂದ ಈ ಚಿತ್ರದ ರಿಲೀಸ್ ದಿನಾಂಕವನ್ನು ಘೋಷಿಸಿದ್ದಾರೆ. ಅಪ್ಪು ಅವರ ತಾವು ತಾವಾಗಿರುವ ಮತ್ತು ಅವರ ಧ್ವನಿಯನ್ನು ಒಳಗೊಂಡಿರುವ ಈ ಚಿತ್ರವನ್ನು ಅಮೋಘವರ್ಷ ಅವರು ನಿರ್ದೇಶನವನ್ನು ಮಾಡಿದ್ದಾರೆ. ಪುನೀತ್ ರಾಜಕುಮಾರ್ ರವರು ಅಕ್ಟೋಬರ್ 28 , 2021 ರಂದು ಹೃದಯಾಘಾತದಿಂದ ಮೃತ ಹೊಂದಿದ್ದರು, ಅದಾದ ಒಂದು ವರ್ಷಕ್ಕೆ ಈ ಚಿತ್ರವವು ತೆರೆ ಕಾಣುತ್ತಿದೆ.

ಈ ಚಿತ್ರಕ್ಕಾಗಿ ಅಪ್ಪು ಅವರು ಬೆಟ್ಟ ಗುಡ್ಡ, ಕಾಡು, ಮೇಡುಗಳನ್ನು ಸುತ್ತಿದ್ದರು, ಸಮುದ್ರದ ಜೀವಿಗಳ ಕುರಿತಾದ 90 ನಿಮಿಷಗಳ ಈ ಸಾಕ್ಷ್ಯಚಿತ್ರವನ್ನು ಅಶ್ವಿನಿ ಪುನೀತ್ ರಾಜಕುಮಾರ್ ರವರು ನಿರ್ಮಾಣ ಮಾಡಿದ್ದಾರೆ. ಅಜನೀಶ್ ಲೋಕನಾಥ್ ರವರು ಸಂಗೀತ ನೀಡಿದ್ದಾರೆ, ಒಟ್ಟಿನಲ್ಲಿ ನಮ್ಮ ಪವರ್ ಸ್ಟಾರ್ ಮತ್ತೊಮ್ಮೆ ತೆರೆಯ ಮೇಲೆ ಬಂದು ಕನ್ನಡಿಗರ ಮನ ತಣಿಸಲಿ ಎಂದು ಎಲ್ಲರ ಹಾರೈಕೆ.