ದಾದಾ ಅಭಿಮಾನಿಯಾಗಿ ಮತ್ತೊಬ್ಬ ಸ್ಟಾರ್

ಸಾಹಸಸಿಂಹಾ, ಅಭಿನವ ಭಾರ್ಗವ ಡಾ. ವಿಷ್ಣುವರ್ಧನ “ಕನ್ನಡ ಚಿತ್ರರಂಗದ  ಬಹುಮುಖ ಪ್ರತಿಭೆ, ಅಭಿಮಾನಿಗಳ ಪ್ರೀತಿಯ ದಾದಾ” ಆಗಿದ್ದರು ಅನ್ನುವ ಮಾತಲ್ಲಿ ಯಾವ ಸಂಷಯವು ಇಲ್ಲ, ಒಳ್ಳೆಯ ಪ್ರತಿಭೆಗಳನ್ನ ಸದಾ ಪ್ರೋತ್ಸಾಹಿಸುತ್ತ, ಯುವ ಪೀಳೆಗೆಯನ್ನಹರಸುತ್ತ,ನಡೆದು- ಬೆಳೆದು ಬಂದ ದಾರಿ ಇಂದಿನ ಪೀಳಿಗೆಗೆ ಮಾರ್ಗದರ್ಶನ. ಈ ಮಾತನ್ನ ಕನ್ನಡದ ಪ್ರಸ್ತುತ ಸ್ಟಾರ್ ನಟರುಗಳು ಕೂಡ ಹೇಳಿದ್ದಾರೆ ಅದಕ್ಕೆ ಸಾಕ್ಷಿಯಾಗಿ ರಿಯಲ್-ರೀಲ್ ಲೈಫ್ನಲ್ಲಿ ದಾದಾರ ಅಭೀಮಾನಿ ಎಂದು ಸಾರಿ ಹೇಳಿದ್ದಾರೆ.

ಕಿಚ್ಚಸುದೀಪ್ “ವಿಷ್ಣುವರ್ಧನ್” ಚಿತ್ರದಲ್ಲಿ, ರಾಕಿಂಗ್ ಸ್ಟಾರ್ ಯಶ್ “Mr&Mrsರಾಮಾಚಾರಿ” ಸಿನಿಮಾದಲ್ಲಿ, ಚಾಲೆಂಜಿಂಗ್ ಸ್ಟಾರ್ ದರ್ಶನ್ ” ಪ್ರಿನ್ಸ್” ಸೇರಿ ಹತ್ತು ಹಲವು ನಟರು ಸಿನಿಮಾದಲ್ಲಿ ವಿಷ್ಣುದಾದಾ ಪರಮ  ಅಭಿಮಾನಿಯಾಗಿ ಕಾಣಿಸಿಕೊಂಡಿದ್ದಾರೆ…ಆ ಸಾಲಿಗೆ ಇದೀಗ ” ಪ್ರಜ್ವಲ್ದೇವರಾಜ್”  ಸೇರ್ಪಡೆಯಾಗಿದ್ದಾರೆ.

ವೀರ0” ಅನ್ನೋ  ಭೂಗತಲೋಕದ ಲೋಕದ ಕಥೆ ಆಧಾರಿತ ಚಿತ್ರದಲ್ಲಿ ನಾಯಕನಾಗಿ ನಟಸ್ತಿರೋ “ಪ್ರಜ್ವಲ್ ದೇವರಾಜ” ಅವರ ಫಸ್ಟ್ ಲುಕ್ಬಿಡುಗಡೆಯಾಗಿದೆ. ಲಾಂಗ್ ಕಚ್ಚಿ ಹಿಡಿದು ರಗ್ಗಡ್ಪೊಸ್ ನೀಡಿರುವ ಪ್ರಜ್ವಲ್ ಕೈ ಮೇಲೆ “ದಾದಾ” ಅವರ ಟ್ಯಾಟೂ ಮತ್ತು  “ಖಡ” ಕಂಡುಬರುತ್ತದೆ

ಸಿನಿಮಾದ ನಿರ್ದೇಶಕ ಕುಮಾರ ರಾಜ್ ಹೇಳುವಂತೆ ಚಿತ್ರದಲ್ಲಿ ಪ್ರಜ್ವಲ್ ಅವರ ಪಾತ್ರ, ವಿಷ್ಣುವರ್ಧನ್ಅಭಿಮಾನಿಗಳಿಗೆ  ಜೊತೆಗೆ ಸಾಮಾನ್ಯರಿಗೂ ಬಹಳ ಹಿಡಿಸುತ್ತೇ, ಹತ್ತಿರವಾಗುತೆ ಎಂದಿದ್ದಾರೆ

P. Ghanashyam

P. Ghanashyam

ಘನಶ್ಯಾಮ್ - ಪತ್ರಿಕೋದ್ಯಮ ವಿದ್ಯಾರ್ಥಿ. ಸಿನಿಮಾ ರಂಗದ ಬಗ್ಗೆ ಬಹಳ ಒಲವು. ಅದರಲ್ಲೂ ಕನ್ನಡ ಚಿತ್ರರಂಗದ ಬಗ್ಗೆ ತುಸು ಹೆಚ್ಚೇ ಅಭಿಮಾನ. ಚಿತ್ರರಂಗದ ಕೆಲವು ವಿಶಿಷ್ಟ ವಿಷಯಗಳ ಬಗ್ಗೆ ತಾನೇ ಅಲ್ಲಿ ಇಲ್ಲಿ ಸಂಶೋಧಿಸಿ, ಕೇಳಿ, ಓದಿ ತಿಳಿದ ವಿಷಯಗಳನ್ನೆಲ್ಲಾ ಒಂದೆಡೆ ಕೂಡಿಟ್ಟು, ಚಿತ್ರೋದ್ಯಮ.ಕಾಂ ನ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಘನಶ್ಯಾಮ್ ಚಿತ್ರೋದ್ಯಮ.ಕಾಂ ನ ಲೇಖಕರೆಂಬುವುದಕ್ಕಿಂತ ಒಂದರ್ಥದಲ್ಲಿ ಸಂಪಾದಕರೇ ಎಂದರೂ ತಪ್ಪಿಲ್ಲ. ಇತರ ಲೇಖಕರ ಲೇಖನಗಳನ್ನು ಪರಿಶೀಲಿಸಿ, ಪಬ್ಲಿಷ್ ಮಾಡುವುದು, ಚಿತ್ರರಂಗದ ತಂಡಗಳ ಜೊತೆ ಸಂದರ್ಶನ ಮಾಡುವುದು... ಇತ್ಯಾದಿ ಎಲ್ಲದರಲ್ಲೂ ಚಿತ್ರೋದ್ಯಮ.ಕಾಂ ತಂಡದ ಬಹು ಮುಖ್ಯ ಸದಸ್ಯ. ತೀಕ್ಷ್ಣ ನೇತ್ರ ಎಂಬ ಹೆಸರಲ್ಲೂ ಕೆಲವು ಲೇಖನಗಳನ್ನು ಬರೆದಿದ್ದಾರೆ, ಬರೆಯಲಿದ್ದಾರೆ. ಘನಶ್ಯಾಮ್ ರ ಲೇಖನಗಳಿಗೆ ನಿಮ್ಮದೊಂದು ಮೆಚ್ಚುಗೆಯಿರಲಿ

Leave a Reply