ನಟ ದುನಿಯಾ ವಿಜಯ್ ನಿರ್ದೇಶಿ ನಟಿಸುತ್ತಿರುವ, K. P ಶ್ರೀಕಾಂತ್ ನಿರ್ಮಾಣದ ಸಲಗ ಚಿತ್ರ ತಂಡದಿಂದ ಇಂದು ಬೆಳಗ್ಗೆ ಮಜೆಸ್ಟಿಕ್ನ ನರ್ತಕಿ ಚಿತ್ರಮಂದಿರ ಎದುರು ಚಿತ್ರದ ಕಾರ್ಮಿಕರಿಗೆ ಮತ್ತು ತಂತ್ರಜ್ಞ ತಂಡದವರಿಗೆ ರೇಷನ್ಕಿಟ್ಹಂಚಲಾಯಿತು. ಇದಕ್ಕೂ ಮುನ್ನ ಚಿತ್ರತಂಡ ಸಾಮಾನ್ಯರಿಗೆ ರಾಜಾಜಿನಗರದ ರಾಮಮಂದಿರದ ಬಳಿ ಕಿಟ್ಹಂಚಲಾಗಿತ್ತು.
ಇಂದು ಕಿಟ್ಹಂಚುವ ಮುನ್ನ ಚಿತ್ರತಂಡ ಹಾಗೂ ನಟ ದುನಿಯಾ ವಿಜಯ್ ಅಗಲಿದ ಸ್ನೇಹಿತ ನಟ ಚಿರಂಜೀವಿ ಸರ್ಜಾ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು 2 ನಿಮಿಷಗಳ ಮೌನಚರಣೆ ಮಾಡಿದರು ಜೊತೆಗೆ ಅಲ್ಲೇ ಪಕ್ಕದಲ್ಲೇ ವೃತ್ತಡದಲ್ಲಿ ಇದ್ದ ಡಾ. ರಾಜ್ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು.