ಕಿಚ್ಚ ಸುದೀಪ ಅಭಿನಯದ “ಫಂಟಾಮ್” ಸಿನಿಮಾದ ಚಿತ್ರೀಕರಣ ಹೈದರಾಬಾದ್ನಲ್ಲಿ ಸಾಗ್ತಾ ಇದೆ. .. ಸಿನಿಮಾದ ತಂಡ ಪ್ರತಿ ವಾರ ಒಂದು ಹೊಸ ಪೋಸ್ಟರ್ ಬಿಡುಗಡೆ ಮಾಡ್ತಾ ಇದ್ದಾರೆ.. ಹೋದ ವಾರ ನಿರೂಪ್ ಭಂಡಾರಿ ಪಾತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದ್ರು ಈಗ ಮತ್ತೊಂದು ಫೋಟೋ ಆಚೆ ಬಂದಿದೆ..
“ಪನ್ನ” ಅಪರ್ಣ ಬಲ್ಲಾಳ್.. ಈ ಪಾತ್ರನ ನಿಭಾಯಸ್ತ ಇರೋದು ನಟಿ ನೀತ ಅಶೋಕ್.. ನೀತ ಮೂಲ ದಕ್ಷಿಣ ಕನ್ನಡದ ಹುಡುಗಿ ಈ ಹಿಂದೆ “ನಾ ನಿನ್ನ ಬಿಡಲಾರೆ” ಸೀರಿಯಲ್ ನಲ್ಲಿ ಕಾಣಿಸಿಕೊಂಡಿದ್ರು ಈಗ ಕಿಚ್ಚನ ಜೊತೆಗೆ ನಟಿಸುವ ಅವಕಾಶ ಸಿಕ್ಕಿದ್ದು ಬಹಳ ಸಂತಸ ತಂದಿದೆ ಎಂದಿದ್ದಾರೆ..