ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ಕಮಲಹಾಸನ್ ನಟಿಸಿ ನಿರ್ಮಿಸಿರುವ ವಿಕ್ರಂ ಸಿನಿಮಾ ಜಗತ್ತಿನಾದ್ಯಂತ 400 ಕೋಟಿಯನ್ನುಗಳಿಸಿದೆ, ಲೋಕೇಶ್ ಕನಕರಾಜ್ ನಿರ್ದೇಶನವಿರುವ ಈ ಚಿತ್ರಕ್ಕೆ, ಮುಂದಿನ ದಿನಗಳಲ್ಲಿ ಇನ್ನಷ್ಷ್ಟು ಚಿತ್ರಮಂದಿರಗಳಲ್ಲಿ ಕಾಣಿಸಿಕೊಳ್ಳಲಿದೆ.
ಯಾರು ಊಹಿಸದ ಮಟ್ಟದಲ್ಲಿ ಚಿತ್ರವೂ ಅದ್ಬುತ ಯಶಸ್ಸನ್ನು ಗಳಿಸಿದೆ,ಇದು ಆಕ್ಷನ್ ಮತ್ತು ಥ್ರಿಲ್ಲರ್ ಚಿತ್ರವಾಗಿದ್ದು, ಕಮಲಹಾಸನ್ ರವರ ವೃತ್ತಿ ಜೀವನದಲ್ಲಿ ಒಂದು ಮೈಲಿಗಲ್ಲಾಗಿದೆ, ಚಿತ್ರದ ಯಶಸ್ಸಿಗೆ ಕಾರಣಕರ್ತರಾದ ನಿರ್ದೇಶಕ ಲೋಕೇಶ್ ಕನಕರಾಜರವರಿಗೆ ಕಮಲಹಾಸನ್ ರವರು ಐಷರಾಮಿ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದರು.
ತದನಂತರ ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದ ಸೂರ್ಯರವರಿಗೆ ರೋಲೆಕ್ಸ್ ವಾಚ್ ನ್ನು ಉಡುಗೊರೆಯಾಗಿ ನೀಡಿದ್ದರು, ಈ ಚಿತ್ರದ ಯಶಸ್ಸಿನ ಮೂಲಕ ಕಮಲಹಾಸನ್ ರವರು ವೃತ್ತಿ ಜೀವನದಲ್ಲೇ ಉತ್ತುಂಗದಲ್ಲಿದ್ದಾರೆಂದು ಪಂಡಿತರ ಲೆಕ್ಕ ಚಾರವಾಗಿದೆ, ಒಟ್ಟಿನಲ್ಲಿ ವಿಕ್ರಂ ಸಿನೆಮಾವು ಅನೇಕ ದಾಖಲೆಗಳ ಜೊತೆ ಮುಂದುವರಿಯಲಿ ಎಂದು ಆಶಿಸೋಣ.